ಅವ್ರಿಬ್ಬರು ಒಬ್ಬರನ್ನೊಬ್ಬರು ಲವ್ ಮಾಡಿ ಮದುವೆ ಮಾಡಿಕೊಂಡವರು.. ಮದುವೆ ಆದ ಮೇಲೆ ಹೆಂಡತಿಗೆ ಐಷಾರಾಮಿ ಜೀವನ ಒದಗಿಸಬೇಕು ಅಂತಾ ಅಂದುಕೊಂಡಿದ್ದ.. ಅದ್ರಂತೆ ಆತ ಕಾಂಟ್ರ್ಯಾಕ್ಟರ್ ಕೆಲಸ ಮಾಡ್ತಿದ್ದ.. ಇತ್ತ ಹೆಂಡತಿಯನ್ನ ಚೆನ್ನಾಗಿ ಓದಿಸಿ ಒಳ್ಳೆ ಕೆಲಸ ಕೊಡಿಬೇಕು ಅಂತಾ ಅಂದುಕೊಂಡು ಹೆಂಡತಿಗೆ ಎಂಬಿಎ ಅಡ್ಮಿಷನ್ ಕೂಡ ಮಾಡಿದ್ದ.. ಆದ್ರೆ ಕಾಂಟ್ರ್ಯಾಕ್ಟರ್ ದಂಧೆಯಲ್ಲಿ ಲಾಸ್ ಆಗಿದನ್ನ ಭರ್ತಿ ಮಾಡೋದಕ್ಕೆ ಗಂಡ ಗಂಡತಿಯರಿಬ್ಬರು ಕೂಡ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ…
ಹೀಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಮುಂದೆ ಮಂಡಿಯೂರಿ ಕುಳತಿರುವ ಈ ನವ ದಂಪತಿಗಳ ಹೆಸರು ವಿಜಯ್ ಕುಮಾರ್ ನಿಶಾ ಅಂತಾ… ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನಿವಾಸಿಗಳಾದ ವಿಜಯಕುಮಾರ್ ನಿಶಾ ಕಲಬುರಗಿಯ ಬಸವೇಶ್ವರ ನಗರದಲ್ಲಿ ವಾಸ ಮಾಡಿಕೊಂಡಿದ್ದಾರೆ.. ಕಂಟ್ರ್ಯಾಕ್ಟರ್ ಆಗಿದ್ದ ವಿಜಯ್ ಕುಮಾರ್ ಕೆಲಸದಲ್ಲಿ ಲಾಸ್ ಆಗಿ ಸಾಲ ಮಾಡಿಕೊಂಡಿದ್ದ.. ಮಾಡಿರೋ ಸಾಲ ತಿರಿಸೋದಕ್ಕೆ ಸುಷ್ಮಾ ಅನ್ನೋ ಅಜ್ಜಿಯ ಕತ್ತಲ್ಲಿದ್ದ ಐದು ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣ ನೋಡಿದ್ದೆ ತಡ ದಂಪತಿಗಳು ಅಜ್ಜಿಯ ಬಳಿ ವಿಳಾದ ಕೇಳುವ ನೇಪದಲ್ಲಿ ಕಾರಲ್ಲಿ ಕೂರಿಸಿ ಲೂಟಿ ಮಾಡಿರೋ ತಪ್ಪಿಗೆ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ…..
ಆದ್ರೆ ಇದನ್ನ ಪತ್ತೆ ಹಚ್ಚಲು ಮುಂದಾದ ಪೊಲೀಸರಿಗೆ ಸುಳಿವು ಸಿಕ್ಕಿದ್ದು ಸಿಸಿ ಟಿವಿ ಅದರಲ್ಲಿನ ದೃಶ್ಯದ ಜಾಡು ಹಿಡಿದ ಪೊಲೀಸರು ಕೃತ್ಯಕ್ಕೆ ಬಳಿಸಿದ ಕಾರ್ ನಂ ಐಡೆಂಟಿ ಫೈ ಮಾಡಿ ಅದರ ಮೂಲಕ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ…ಜೈಲೈ 13 ರಂದು ಸಂಜೆ ನಾಲ್ಕು ಗಂಟೆ ಸುಮಾರಿ ಸುಷ್ಮಾ ತಮ್ಮ ಸಂಬಂಧಿಕರ ಮನೆಯ ಕಾರ್ಯಕ್ರಮದ ಸಲುವಾಗಿ ಜಯನಗರದ ಬಸ್ ಸ್ಟಾಪ್ ಬಳಿ ಬಂದು ನಿಂತಿದ್ದರು… ಆಟೋಗಾಗಿ ಕಾಯ್ತಿದ್ದ ಅಜ್ಜಿಯನ್ನ ಕಂಡ ದಂಪತಿ ನಿಶಾ ಮತ್ತು ವಿಜಯ್ ಕುಮಾರ್ ಅಜ್ಜಿಯ ಬಳಿ ತೆರಳಿ ಬಸವೇಶ್ವರ ಆಸ್ಪತ್ರೆಗೆ ಹೇಗೆ ಹೋಗೊದು ಅಂತಾ ಕೇಳಿದ್ದಾರೆ…
ಆಗ ಅಜ್ಜಿ ನಾನು ಆ ಕಡೆಯೆ ಹೊಗ್ತಾ ಇದ್ದಿನಿ ಆಟೋದವರು ಜಾಸ್ತಿ ಹಣ ಕೇಳ್ತಿದ್ದಾರೆ ಹಾಗಾಗಿ ಇಬ್ಬರು ಜೊತೆಗೆ ಹೋಗೋಣ ಅಂತಾ ಕರೆದಿದ್ದಾರೆ..ಆಗ ನಿಶಾ ಇಲ್ಲ ನಮ್ಮದೆ ಗೊತ್ತಿದವರ ಕಾರ್ ಇದೆ ಬನ್ನಿ ಅದ್ರಲ್ಲೆ ಹೋಗೋಣ ನೀವು ಹೋಗೊ ಏರಿಯಾಗೆ ಡ್ರಾಪ್ ಮಾಡಿ ಹೋಗ್ತವಿ ಅಂತಾ ಹೇಳಿ ಕಾರ್ ಹತ್ತಿಸಿಕೊಂಡಿದ್ದಾರೆ..ಬಳಿಕ ಅಜ್ಜಿ ಕಾರ್ ಹತ್ತುತ್ತಿದ್ದಂತೆಯೆ ಕಾರ್ ನಲ್ಲಿ ರಿವಾಲ್ವಾರ್ ಮಾದರಿಯ ಗನ್ ತೋರಿಸಿ ಬೇದರಿಸಿ ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕತ್ತಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ರು…
ಇನ್ನು ಈ ಸಂಭಂಧ ಅಜ್ಜಿ ಸ್ಟೆಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಯನಗರ ಸುತ್ತ ಮುತ್ತಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸೋಕೆ ಮುಂದಾಗಿದ್ದಾರೆ..ಸಿಸಿಟಿವಿಯಲ್ಲಿ ಕಾರ್ ನಂಬರ್ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ..ಇನ್ನು ಬಂಧಿರಿಂದ ಸುಮಾರು 150 ಗ್ರಾ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.. ಒಟ್ಟನಲ್ಲಿ ಗಂಡನ ಪಾಪಕೃತ್ಯಕ್ಕೆ ಸಾಥ್ ನೀಡಿದ ತಪ್ಪಿಗೆ ಗಂಡ ಹೆಂಡತಿಯರಿಬ್ಬರು ಕೂಡ ಇದೀಗ ಜೈಲು ಪಾಲಾಗಿದ್ದಾರೆ…