Home District “ಹೆಚ್.ಎಂ.ರೇವಣ್ಣ ಸುಪಾರಿ ಕಿಲ್ಲರ್.. ಡಿ.ಕೆ.ಬ್ರದರ್ಸ್ ಸುಪಾರಿ ಕೊಟ್ಟೋರು” ಎಂದು ಫಲಿತಾಂಶಕ್ಕೂ ಮುನ್ನ ತಮ್ಮ ಸೋಲಿನ ಸುಳಿವು...

“ಹೆಚ್.ಎಂ.ರೇವಣ್ಣ ಸುಪಾರಿ ಕಿಲ್ಲರ್.. ಡಿ.ಕೆ.ಬ್ರದರ್ಸ್ ಸುಪಾರಿ ಕೊಟ್ಟೋರು” ಎಂದು ಫಲಿತಾಂಶಕ್ಕೂ ಮುನ್ನ ತಮ್ಮ ಸೋಲಿನ ಸುಳಿವು ಹೊರಹಾಕಿದ ಸಿ.ಪಿ.ಯೋಗೇಶ್ವರ್

3382
0
SHARE

ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲರ ಚಿತ್ತ ಈಗ ಮತ ಎಣಿಕೆ ಅತ್ತ. ಮತ ಎಣಿಕೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಅದರಲ್ಲೂ ಬೊಂಬೆ ನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಎಲ್ಲರ ಗಮನವನ್ನು ಸೆಳೆದಿದೆ. ಈ ಕ್ಷೇತ್ರದಲ್ಲಿ ಘಟಾನು ಘಟಿ ನಾಯಕರೇ ಸ್ಪರ್ಧೆ ಮಾಡಿದ್ದು, ಗೆಲ್ಲುವ ಸೋಲಿನ ಲೆಕ್ಕಾಚಾರ ಕೂಡ ಗರಿಗೆದರಿದೆ. ಹೀಗಿರುವಾಗ ಆಧುನಿಕ ಭಗೀರಥ ಯೋಗೀಶ್ವರ್ ಸೋಲುವ ಆತಂಕ ಹೊರಹಾಕಿದ್ದಾರೆ…
ಹೌದು…ಈಡೀ ರಾಜ್ಯದ ಗಮನವನ್ನು ಸೆಳೆದಿರುವ ವಿಧಾನಸಭಾ ಕ್ಷೇತ್ರ ಗೊಂಬೆ ನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಘಟಾನು ಘಟಿ ನಾಯರೇ ಸ್ಪರ್ಧೆ ಮಾಡಿದ್ದಾರೆ. ಜೆಡಿಎಸ್ ನಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಿಂದ ಸಚಿವ ಹೆಚ್.ಎಂ.ರೇವಣ್ಣ ಸ್ಪರ್ದೆ ಮಾಡಿದ್ರೆ. ಇವರಿಬ್ಬರಿಗೂ ಸೆಡ್ಡು ಹೊಡೆದು ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಅಖಾಡಕ್ಕಿಳಿದಿದ್ರು…

ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಚೆನ್ನಪಟ್ಟಣ ಕ್ಷೇತ್ರದಲ್ಲಿ ಈ ಭಾರಿ ಅತೀ ಹೆಚ್ಚು ಮತದಾನ ನಡೆದಿದೆ. ಹೀಗಿರುವಾಗಲೇ ಆಧುನಿಕ ಭಗೀರಥ ಸಿ.ಪಿ. ಯೋಗೇಶ್ವರ್ ತಮ್ಮ ಸೋಲಿನ ಭೀತಿಯನ್ನು ಹೊರಹಾಕಿದ್ದಾರೆ.. ನನ್ನ ಸೋಲಿಗೆ ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣ ಹೊಳೆ ಹರಿಸಿ ಕೊನೆ ಕ್ಷಣದಲ್ಲಿ ಆಟ ಬದಲಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ…

ಇನ್ನು ನನ್ನನ್ನು ರಾಜಕೀಯವಾಗಿ ಮುಗಿಸಲು ತೀರ್ಮಾನ ಮಾಡಿದ್ದಾರೆ. ನನ್ನ ಎದುರಾಳಿಗಳಾಗಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಒಕ್ಕಲಿಗರ ಮತವನ್ನು ಹೆಚ್.ಡಿ.ಕುಮಾರಸ್ವಾಮಿ ಸೆಳೆದ್ರೆ ದಲಿತ ಮತಗಳನ್ನು ಹೆಚ್,ಎಂ.ರೇವಣ್ಣ ಸೆಳೆದಿದ್ದಾರೆ. ಚುನಾವಣೆಗೂ ಮುನ್ನ ಎರಡು ದಿನಗಳು ಇರುವಾಗಲೇ ರಾತ್ರೋ ರಾತ್ರಿ ನನ್ನ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಣದ ಆಮಿಸವನ್ನು ನೀಡಿ, ಅವರನ್ನು ತಮ್ಮತ್ತ ಸೆಳೆದಿದ್ದಾರೆ…

ಅವರ ಹಣದ ಬಲ ಹಾಗೂ ತೋಳ್ ಬಲದ ಮುಂದೆ ನಾನು ಸೋತಿದ್ದೇನೆ. ನಮ್ಮ ಕ್ಷೇತ್ರದ ಮತದಾರರು ಏನಾದ್ರೂ ಅವರ ಹಣದ ಆಮಿಷಕ್ಕೆ ಬಲಿಯಾಗಿಲ್ಲ ಅಂದ್ರೆ ನಾನು ಗೆಲ್ಲುತ್ತೇನೆ. ಜೊತೆಗೆ ಬಿಜೆಪಿ ಸೇರಿ ತಪ್ಪು ಮಾಡಿದೆ ಎಂದು ಪರೋಕ್ಷವಾಗಿ ಬಿಜೆಪಿ ಸೇರಿದ ತಮ್ಮ ನಿರ್ಧಾರದ ಬಗ್ಗೆಯೇ ಬೇಸರ ವ್ಯಕ್ತಪಡಿಸಿದ್ದಾರೆ…

ಒಟ್ಟಾರೆ ಇನ್ನು ಮತ ಎಣಿಕೆಗೆ ಕೌಂಟ್ ಡೌನ್ ಶುರುವಾಗಿದ್ದು, ಯಾವ ಅಭ್ಯರ್ಥಿ ಗೆಲ್ತಾರೆ ಎಂಬುದು ರಾಜ್ಯದ ಜನರಲ್ಲಿ ಕುತೂಹಲ ಕೆರಳಿಸಿದೆ. ಹೀಗಿರುವಾಗಲೇ ಸೈನಿಕ ತನ್ನ ಅಖಾಡದಲ್ಲಿ ಸೋಲುತ್ತೇನೆಂದು ಆತಂಕ ಹೊರಹಾಕಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ…

LEAVE A REPLY

Please enter your comment!
Please enter your name here