Home Crime ಹೆಣ್ಣು ಮಕ್ಕಳಿಗೆ, ರೈತರಿಗೆ ಬೆದರಿಸಿ ದೇವರ ಮೇಲೆ ಆಣೆ ಹಾಕಿಸಿ 1 ವೋಟಿಗೆ 2000 ರೂಪಾಯಿ...

ಹೆಣ್ಣು ಮಕ್ಕಳಿಗೆ, ರೈತರಿಗೆ ಬೆದರಿಸಿ ದೇವರ ಮೇಲೆ ಆಣೆ ಹಾಕಿಸಿ 1 ವೋಟಿಗೆ 2000 ರೂಪಾಯಿ ನೋಟುಗಳನ್ನು ಚೆಲ್ಲಾಡುತ್ತಿರುವ ವಿಶ್ವನಾಥ್ ರೆಡ್ಡಿ..!? ವಿಡಿಯೋ ಫುಲ್ ವೈರಲ್…

7147
0
SHARE

ಈಗಾಗ್ಲೆ ಯಲಹಂಕದಲ್ಲಿ ಕೋಟಿ ಕೋಟಿ ದುಡ್ಡು ಚೆಲ್ಲಾಡಿರುವ ಶಾಸಕ ವಿಶ್ವನಾಥ್ ರೆಡ್ಡಿ ಎಲೆಕ್ಷನ್ ಗೆ ಇನ್ನು ನಾಲ್ಕು ದಿನ ಇರೋದ್ರಿಂದ ಮತದಾರರಿಗೆ ಲಕ್ಷ ಲಕ್ಷ ದುಡ್ಡು ಹಂಚ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಗೆ ಬರೋ ವೀರಸಾಗರದ ಚಿಕ್ಕಗೊಲ್ಲರಹಟ್ಟಿಯಲ್ಲಿ ಹೆಣ್ಣು ಮಕ್ಕಳಿಗೆ, ರೈತರಿಗೆ ಬೆದರಿಸಿ ದೇವರ ಮೇಲೆ ಆಣೆ ಹಾಕಿಸಿ ಒಂದು ವೋಟಿಗೆ ಎರಡು ಸಾವಿರ ರೂಪಾಯಿಯಂಗೆ ಹಣ ಹಂಚ್ತಿದ್ದಾರೆ…

ಸುಮಾರು 8 ಸಾವಿರಕ್ಕೂ ಹೆಚ್ಚು ಹೆಂಗಸರ ವೋಟರ್ ಐಡಿ ಪಡದು ಎಲ್ಲರಿಗೂ ದೇವರ ಮೇಲೆ ಆಣೆ ಮಾಡಿಸಿ ಎರಡೆರೆಡು ಸಾವಿರ ಹಂಚಲಾಗ್ತಿದೆ. ಟೆಂಟ್ ನಲ್ಲಿ ಟಿಕೇಟ್ ಕೊಡುವ ಹಾಗೆ ಎಲ್ಲಾ ಹೆಂಗಸರನ್ನಾ ಕ್ಯೂ ನಲ್ಲಿ ನಿಲ್ಲಿಸಿ ಹಣ ಹಂಚಲಾಗ್ತಿದೆ…

ಈಗಾಗ್ಲೆ ಇವತ್ತೊಂದೇ ದಿನ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನಾ ಹಂಚಿರೋ ವಿಶ್ವನಾಥ್ ರೆಡ್ಡಿ ಇನ್ನೂ ಕೂಡಾ ಹಲವಾರು ಗ್ರಾಮಗಳಲ್ಲಿ ನಿರಂತರವಾಗಿ ದುಡ್ಡು ಹಂಚಿಸ್ತಾನೇ ಇದ್ದಾರೆ. ದುಡ್ಡು ಕೊಡುವ ಮುನ್ನಾ ಗ್ರಾಮಸ್ಥರ ಮನೆ ದೇವರ ಮೇಲೆ ಆಣೆ ಮಾಡಿಸಿ ಹಣ ಕೊಡಲಾಗ್ತಿದೆ…

ಅಕಸ್ಮಾತ್ ಎರಡೆರೆಡು ಸಾವಿರ ತಗೊಂಡು ವೋಟ್ ಹಾಕ್ಲಿಲ್ಲ ಅಂದ್ರೆ ದೇವರು ನಿಮಗೆ ಶಾಪ ಕೊಡ್ತಾನೆ ಅಂತಾ ಹೆದರಿಸ್ತಿದ್ದಾರೆ.ಶಾಸಕ ವಿಶ್ವನಾಥ್ ರೆಡ್ಡಿ ಹಣ ಹಂಚ್ತಿರೋದ್ರ ಬಗ್ಗೆ ಚುನಾವಣಾಧಿಕಾರಿಗಳಿಗೆ ಗೊತ್ತಿದ್ರೂ ಜಾಣ ಕುರುಡು ಪ್ರದರ್ಶನ ಮಾಡ್ತಿದ್ರೆ. ಪೊಲೀಸ್ರಿಗೆ ಫೋನ್ ಮಾಡಿ ಹೇಳಿದ್ರು ಇತ್ತ ಸುಳಿಯಲೇ ಇಲ್ಲ…

LEAVE A REPLY

Please enter your comment!
Please enter your name here