Home Crime ಹೆಣ್ಣು ಮಗು ಎಂಬ ಒಂದೇ ಕಾರಣಕ್ಕೆ ಹೆತ್ತ ಅಪ್ಪ-ಅಮ್ಮ ಮುಂದಾಗಿದ್ದರು ಜೀವಂತ ಸಮಾಧಿ ಮಾಡಲು ಆ...

ಹೆಣ್ಣು ಮಗು ಎಂಬ ಒಂದೇ ಕಾರಣಕ್ಕೆ ಹೆತ್ತ ಅಪ್ಪ-ಅಮ್ಮ ಮುಂದಾಗಿದ್ದರು ಜೀವಂತ ಸಮಾಧಿ ಮಾಡಲು ಆ ಹಸುಳೆಯನ್ನು..!?

701
0
SHARE

ಅದಿನ್ನೂ ಎರಡು ತಿಂಗಳ ಹಸುಗೂಸು. ಇನ್ನೂ ಸರಿಯಾಗಿ ಪ್ರಪಂಚವನ್ನೂ ನೋಡದ ಕಂದಮ್ಮ.. ತನ್ನನ್ನು ಜೀವಂತವಾಗಿ ಹೂಳಲು ಹೊರಟಿದ್ದಾರೆ ಅನ್ನೋದು ಅರಿಯದೇ ಆ ಕಟುಕರ ಮುಖವನ್ನ ನೋಡಿ ನಗುವ ಮುಗ್ದ ಜೀವ. ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು ಅನ್ನೋ ಮಾತು ಈ ಪುಟ್ಟ ಜೀವದ ಪಾಲಿಗೆ ಅಕ್ಷರಶಃ ನಿಜವಾಗಿಬಿಟ್ಟಿದೆ…ಆಧುನಿಕ ಯುಗದಲ್ಲೂ ಕೂಡ ನಮ್ಮ ಸಮಾಜ ಗಂಡು ಮಗು ಹೆಣ್ಣು ಮಗು ಎಂಬ ತಾರತಮ್ಯ ಮಾಡುವುದನ್ನು ನಿಲ್ಲಿಸಿಲ್ಲ. ಇನ್ನೂ ಸರಿಯಾಗಿ ಪ್ರಪಂಚವನ್ನೇ ನೋಡದ ಕಂದಮ್ಮನನ್ನು ಹೆತ್ತವರೇ ಜೀವಂತ ಸಮಾಧಿ ಮಾಡಲು ಹೋಗಿದ್ದಂತ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶಹಾಪುರದ ಸಾರ್ವಜನಿಕ ಸ್ಮಶಾನಕ್ಕೆ ಕಾರು ಹಾಗೂ ಆಟೋನಲ್ಲಿ ಬಂದಿಳಿದ ಕೆಲವರು ಬಿಳಿ ಬಟ್ಟೆಯಲ್ಲಿ ಎರಡು ತಿಂಗಳ ಹೆಣ್ಣು ಮಗುವೊಂದನ್ನ ಸುತ್ತಿಕೊಂಡು ಬಂದಿದ್ದರು…ಅಷ್ಟೇ ಅಲ್ಲದೇ ಮಗುವಿನ ಅಂತ್ಯಕ್ರಿಯೆಗೆ ಬೇಕಾಗುವ ಸಾಮಗ್ರಿಗಳನ್ನ ಕೂಡ ತಂದು ಗುಂಡಿ ತೋಡಿ ಮಗುವನ್ನ ಹೂಳಲು ರೆಡಿಯಾಗಿದ್ರು. ಆದ್ರೆ ಅಷ್ಟೋತ್ತಿಗಾಗಲೇ ಹೊಟ್ಟೆ ಹಸಿವಿನಿಂದ ಮಗು ಅಳಲಾರಂಭಿಸಿದೆ. ಮಗುವಿನ ಅಳುವ ಶಬ್ದ ಕಿವಿಗೆ ಬೀಳುತ್ತಿದ್ದಂತೆ ವಾಚ್‌ಮ್ಯಾನ್ ಹಾಗೂ ಸ್ಥಳೀಯರು ಓಡೋಡಿ ಬಂದಿದ್ದಾರೆ…ಇದೇನಿದು ಜೀವಂತ ಮಗುವನ್ನ ಹೂಳುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಂತೆ ಗಲಿಬಿಲಿ ಗೊಂಡ ಮಗುವಿನ ಪೋಷಕರು ಉತ್ತರಿಸಲು ತಡಬಡಾಯಿಸಿದ್ದಾರೆ.ಇನ್ನು ಸಾರ್ವಜನಿಕರು ತಮ್ಮನ್ನ ಬಿಡಲ್ಲ ಅಂತ ಕನ್ಫರ್ಮ್ ಆದಕೂಡಲೇ ಎಚ್ಚೆತ್ತ ಪೋಷಕರು ಮಗುವನ್ನ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಿದ್ದೆವು. ಮಗು ಬ್ರೇನ್ ಹೆಮರೈಜ್ನಿಂದ ಬಳಲುತ್ತಿದೆ. ವೈದ್ಯರು ಮಗು ಸಾವನ್ನಪ್ಪಿದೆ ಅಂತ ಹೇಳಿದ್ದಕ್ಕೆ ಅಂತ್ಯಕ್ರಿಯೆ ಮಾಡಲು ಬಂದಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ…ಆದ್ರೆ ಅನುಮಾನಗೊಂಡ ಸ್ಥಳೀಯರು ಪದೇ ಪದೇ ಪ್ರಶ್ನಸುತ್ತಿದ್ದಂತೆ ಬಂದ ಕಾರಿನಲ್ಲಿ ಕಾಲ್ಕಿತ್ತಿದ್ದಾರೆ.ಒಟ್ನಲ್ಲಿ ಸ್ಮಶಾನದ ವಾಚಮನ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದ್ದು, ಹೆಣ್ಣೆಂಬ ಕಾರಣಕ್ಕೆ ಹಸುಗೂಸನ್ನ ಜೀವಂತ ಸಮಾಧಿ ಮಾಡಲು ಹೊರಟವರನ್ನ ಹುಡುಕಿ ಶಿಕ್ಷಿಸಬೇಕಿದೆ…

LEAVE A REPLY

Please enter your comment!
Please enter your name here