Home Crime ಹೆಣ್ಣು-ಹಣದಯಿಂದೆ ಬಿದ್ರೆ ಏನಾಗುತ್ತೆ ಅಂತಾ ಗೊತ್ತಿದ್ರು ಬಿದ್ದವನಿಗೆ ಕೊನೆಗೆ ಆಗಿದ್ದು ಏನು ಗೊತ್ತಾ..! “ಮಂಚದ ಮ್ಯಾಟರ್..!”

ಹೆಣ್ಣು-ಹಣದಯಿಂದೆ ಬಿದ್ರೆ ಏನಾಗುತ್ತೆ ಅಂತಾ ಗೊತ್ತಿದ್ರು ಬಿದ್ದವನಿಗೆ ಕೊನೆಗೆ ಆಗಿದ್ದು ಏನು ಗೊತ್ತಾ..! “ಮಂಚದ ಮ್ಯಾಟರ್..!”

2305
0
SHARE


ಅವರೆಲ್ಲಾ ಒಟ್ಟೊಟ್ಟಿಗೆ ಕುಡಿದು ತಿಂನ್ತಿದ್ರು. ಒಟ್ಟಿಗೆ ದಂಧೆ ನಡೆಸ್ತಿದ್ರು. ಅಂತವ್ರ ಮಧ್ಯೆ ಹೆಣ್ಣು, ಹಣಕ್ಕಾಗಿ ಇದ್ದಕ್ಕಿದ್ದಂಗೆ ನಿನ್ನೆ ರಾತ್ರಿ ಜಗಳ ನಡೆದಿತ್ತು.. ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳೋ ಮಟ್ಟಿಗೆ ಕಿರಿಕ್​ ಶುರುವಾಗಿತ್ತು. ಅದ್ರ ಪರಿಣಾಮ ಬೆಳಗಾಗೋದ್ರೊಳಗೆ ಆ ಗುಂಪಿನ ಹುಡುಗನೊಬ್ಬ ಬೀದಿ ಹೆಣವಾಗೋಗಿದ್ದ…

ಸುಮನಹಳ್ಳಿಯ ಸಣ್ಣಕ್ಕಿ ಬಯಲು ಬಳಿಯ ತೋಟದ ರಸ್ತೆಯಲ್ಲಿ ಎಂದಿನಂತೆ ಕೆಲ್ಸ ಕಾರ್ಯಗಳಿಗೆ ತೆರಳೋ ಮಂದಿ, ಸೊಪ್ಪು ತರಕಾರಿ ವ್ಯಾಪಾರ ಮಾಡೋರು ವ್ಯಾಪಾರ ಮಾಡೋದ್ರಲ್ಲಿ ಬ್ಯೂಸಿಯಾಗಿದ್ರು. ಅದೇ ವೇಳೆಗೆ ಅಲ್ಲಿಗೆ ಆಟೋರಿಕ್ಷಾದಲ್ಲಿ ಆಗಮಿಸಿದ್ದ ಕೆಲ ದುಷ್ಕರ್ಮಿಗಳು ಅವ್ರ ಬಳಿಯೇ ಇದ್ದ ಯುವಕನವೊಬ್ಬನನ್ನ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಲೆ ಕೊಲೆಗೈದು, ಅಲ್ಲಿಂದ ಕಾಲ್ಕಿತ್ತಿದ್ರು…


ಹಂತಕರ ಮಚ್ಚಿನೇಟಿಗೆ ಬಲಿಯಾದ ಯುವಕನೇ ಈ ಕೋಟೇಶ್ವರ್. ಬೆಂಗಳೂರಿನ ಕೆಂಗೇರಿ ನಿವಾಸಿ.. ಈತನ ತಂದೆ ಪ್ರತಿಷ್ಟಿತ ಬ್ಯಾಂಕ್​ವೊಂದರ ಮ್ಯಾನೇಜರ್​ ಅಂತೆ.. ಕಳೆದ 3 ವರ್ಷಗಳ ಹಿಂದೆ ಓದಿಗೆ ಗುಡ್ ಬೈ ಹೇಳಿದ್ದ ಈ ಕೋಟೇಶ್ವರ್​​ ಪುಂಡ ಹುಡುಗರ ಜೊತೆ ಸೇರಿಕೊಂಡು ಚಿಕ್ಕ ವಯಸ್ಸಿಗೆ ಆಡಬಾರದ ಆಟ ಆಡಿ ಪೋಷಕರಿಗೆ ಆಗ್ಗಿಂದ್ದಾಗ್ಗೆ ತಲೆ ನೋವು ತರಿಸ್ತಿದ್ದ.. ಹೀಗಿದ್ದ ಈ ಕೋಟೇಶ್ವರನನ್ನ ಇಂದು ಮುಂಜಾನೆ ಒಂದು ಡಿಲ್ ಗೆ ಸಂಬಂಧಿಸಿದಂತೆ ಸ್ನೇಹಿತರ ಮಧ್ಯೆ ಉಧ್ಬವವಾಗಿದ್ದ ಜಗಳದ ವಿಚಾರವಾಗಿ ಸಂಧಾನಕ್ಕೆಂದು ಈತನ ಸ್ನೇಹಿತನೇ ಆದ ಸುರೇಶ್ ಎಂಬಾತ ಕರೆಸಿಕೊಂಡಿದ್ದ. ಆದ್ರೆ, ಅಲ್ಲಿ ಸಂಧಾನವಾಗ್ಲಿಲ್ಲ. ಏಕಾಏಕಿ ಎರಗಿದ ಏಳೆಂಟು ಮಂದಿಯ ಗ್ಯಾಂಗ್ ಕೋಟೇಶ್ವರನ ಕುತ್ತಿಗೆ ಕೊಯ್ದು ಭೀಕರವಾಗಿ ಕೊಂದಿದ್ದಾರೆ…

ಆ ಸುದ್ದಿ ಕಿವಿಗೆ ಬೀಳ್ತಿದ್ದಾಗ್ಲೇ ಜೀಪನ್ನೇರಿ ಸ್ಥಳಕ್ಕೆ ಹೋದ ಪೊಲೀಸ್ರು ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ, ಹತ್ಯೆಯ ಕಾರಣ ಬೆನ್ನತ್ತಿದ್ರು. ಆಗ ಬಯಲಾದ ಸಂಗತಿಯೇ ದಂಧೆ. ಅದು ಹೆಣ್ಣು ಮಕ್ಕಳ ಮಾಂಸ ದಂಧೆ. ಆತನ ಕೆಲವು ಸ್ನೇಹಿತರು ಹೇಳೋ ಪ್ರಕಾರ ಈ ಕೋಟೇಶ್ವರ ಮತ್ತು ಸುರೇಶ್ ಕೆಲ ಪೋಕರಿ ಗೆಳೆಯರು ಸೇರಿ ಮಾಂಸದ ದಂಧೆ ಶುರುಮಾಡಿದ್ರಂತೆ. ನೆರೆರಾಜ್ಯಗಳಿಂದ ಯುವತಿಯರನ್ನ ಕರೆಯಿಸಿ ಇಲ್ಲಿ ಬ್ಯುಸಿನೆಸ್​ ಮಾಡಿಸ್ತಿದ್ರಂತೆ…

ಹೀಗಿದ್ದ ವೇಳೆ ಕೆಲ ದಿನಗಳ ಹಿಂದೆ ಕೋಟೇಶ್ವರ ಸುರೇಶ ನ ಬಳಿ ಇದ್ದ ಒಂದ್ ಹುಡುಗಿಯನ್ನ ಬೇರೆಡೆ ಕರೆದುಕೊಂಡೋಗಿದ್ದು, ಅದ್ರ ಮನಿ ಡೀಲ್ ವಿಚಾರದಲ್ಲಿ ಮನಸ್ಥಾಪ ಎದುರಾಗಿತ್ತತೆ. ಈ ಹಿನ್ನೆಲೆಯಲ್ಲಿ ಆಗಾಗ ಇವ್ರಿಬ್ಬರ ಮಧ್ಯೆ ಜಗಳವಾಗ್ತಿದ್ದು, ಅದಕ್ಕೆ ನಾಂದಿ ಹಾಡ್ಬೇಕು ಅಂತ ಸಂಧಾನಕ್ಕೆ ಇಂದು ಬಳಿಗ್ಗೆ ಮೂಹೂರ್ತ ಫಿಕ್ಸ್ ಮಾಡಿದ್ರಂತೆ. ಇದನ್ನ ನಂಬಿದ ಕೋಟೇಶ್ವರ್ ಅಲ್ಲಿಗೆ ಬಂದಾಗ್ಲೇ ನನ್ನ ಸಾವಿಗೆ ಮೂಹೂರ್ತ ಫಿಕ್ಸ್ ಆಗಿದೆ ಅನ್ನೋದು. ಆದ್ರೆ, ಅದ್ರಿಂದ ಪಾರಾಗೋದಕ್ಕೆ ಸಾಧ್ಯವಾಗ್ಲಿಲ್ಲ. ಸುತ್ತುವರೆದ ಹಂತಕರು ಮನ ಬಂದಂತೆ ಕೊಚ್ಚಿ ಕೊಲೆಗೈದು ಎಸ್ಕೇಫ್ ಆಗಿದ್ದಾರೆ.

ಘಟನೆಯಲ್ಲಿ ಕೋಟೇಶ್ವರ್ ಜೊತೆಯಲ್ಲಿ ಆಂಟೋನಿ ಎಂಬಾತನಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆತ ನೀಡಿದ ಮಾಹಿತಿ ಹಾಗೂ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹಂತಕರ ಶೋಧಕ್ಕೆ ಬಲೆ ಬೀಸಿರೋ ಕಾಮಾಕ್ಷಿಪಾಳ್ಯ ಪೊಲೀಸ್ರು ಮೂವರು ಆರೋಪಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ…

LEAVE A REPLY

Please enter your comment!
Please enter your name here