Home Crime ಹೆತ್ತವರ ಎದುರೇ ಕತ್ತು ಸೀಳಿ ತಮ್ಮನನ್ನ ಕೊಂದ ಕಿರಾತಕ ಅಣ್ಣ..! ಆಸ್ತಿ ಅಲ್ಲಾ ಆ ಕಗ್ಗೊಲೆ...

ಹೆತ್ತವರ ಎದುರೇ ಕತ್ತು ಸೀಳಿ ತಮ್ಮನನ್ನ ಕೊಂದ ಕಿರಾತಕ ಅಣ್ಣ..! ಆಸ್ತಿ ಅಲ್ಲಾ ಆ ಕಗ್ಗೊಲೆ ಹಿಂದಿತ್ತು ಅದೊಂದು ರಹಸ್ಯ ಕಾರಣ..!

1850
0
SHARE

ಮಂಡ್ಯ ತಾಲೂಕಿನಲ್ಲಿರೋ ಸಣ್ಣ ಹಳ್ಳಿ ಮರಲಿಂಗನದೊಡ್ಡಿ. ಹಳ್ಳಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿರೋ ಹಳ್ಳಿ ಅಂದ್ರೆ ಕಾಮನ್ ಆಗಿ ಎಲ್ಲವೂ ಕೃಷಿಕ ಕುಟುಂಬಗಳೇ ಆಗಿರುತ್ತೆ. ನೂರಾರು ಎಕರೆ ಇರೋ ಜಮೀನ್ದಾರರಿಂದ ಹಿಡಿದು ಹತ್ತಾರು ಎಕರೆ ಭೂಮಿ ಇರೋ ಕುಟುಂಬಗಳು ಮಾತ್ರವಲ್ಲಾ ಮೂರ್ನಾಲ್ಕು ಎಕರೆ ಹೊಲ ಗದ್ದೆ ಹೊಂಡಿದರೋ ಮನೆಗಳೆಲ್ಲವೂ ಭೂಮಿತಾಯಿಯನ್ನೇ ನಂಬಿ ಬದುಕುಕಟ್ಟಿಕೊಂಡಿರೋದು. ಅಂತಾ ಭೂತಾಯಿಯನ್ನ ನಂಬಿ ಜೀವನ ಮಾಡ್ತಿರೋ ಹಳ್ಳಿ ಈ ಮರಲಿಂಗನದೊಡ್ಡಿ. ಇಂತಾ ಹಳ್ಳಿಯಲ್ಲಿ ಇವತ್ತು ಪರಿಸ್ಥಿತಿ ಎಂದಿನಂತೆ ಇರ್ಲಿಲ್ಲ. ಇಡೀ ಊರಿಗೆ ಗರ ಬಡಿದಂತಾಗಿತ್ತು. ನೀರವ ಮೌನವೇ ಆವರಿಸಿತ್ತು.

ಆ ಮೌನದಲ್ಲಿ ತುಂಬಿಕೊಂಡಿದ್ದು ಬರೀ ಆತಂಕ. ದುಃಖ, ನೋವು ಅಳು.ಹೀಗೆ ಹಟ್ಟಿ ಮುಂದೆ ಕೂತು ಗೋಳಾಡ್ತಿರೊ ಈ ಹೆಂಗಸರ ಆಕ್ರಂದನವೇ ಹೇಳುತ್ತೆ ಈ ಊರಲ್ಲಿ ಏನೋ ಆಗಬಾರದ ಅನಾಹುತ ಆಗಿದೆ, ನಡೀಬಾರದ ಘಟನೆ ನಡೆದಿದೆ ಅನ್ನೋದು. ಅಂದ ಹಾಗೆ ಮರಲಿಂಗನದೊಡ್ಡಿಯಲ್ಲಿ ನಡೆದಿರೋದೇನು ಗೊತ್ತಾ ಒಂದು ಬರ್ಬರ ಕೊಲೆ.ಹೌದು.. ಮರಲಿಂಗನದೊಡ್ಡಿಯಲ್ಲಿ ನಡೆದಿರೋದು ಒಂದು ಕಗ್ಗೊಲೆ. ಇದೇ ಗ್ರಾಮದ ವ್ಯಕ್ತಿಯೊಬ್ಬನನ್ನ ಬೆಳ್ಳಂಬೆಳಗ್ಗೆ ಬರ್ಬರವಾಗಿ ಕೊಂದು ಹಾಕಲಾಗಿದೆ. ಆ ಹತ್ಯೆ ಎಷ್ಟು ಭೀಕರವಾಗಿತ್ತೆಂದ್ರೆ ನೋಡನೋಡುತ್ತಿದಂತೆ ಎಲ್ಲರ ಕಣ್ಣೆದುರೇ ಪಾಪ  ಯುವಕ ರಕ್ತಕಾರಿಸಿಕೊಂಡು ವಿಲವಿಲ ಒದ್ದಾಡಿ ಪ್ರಾಣಬಿಟ್ಟಿದ್ದ. ಅಂದ ಹಾಗೆ ಅಲ್ಲಿ ಕೊಲೆಯಾಗಿದ್ದು  ಕಟ್ಟುಮಸ್ತಿನ ಈ ಹೈದನೇ ನೋಡಿ.

ಹೆಸ್ರು ದೀಪಕ್ ಕುಮಾರ್.ಯಸ್..  ದೀಪಕ್ ಕುಮಾರ್ ಅನ್ನೋ ಈ ಯುವಕನನ್ನ ಬೆಳ್ಳಂಬೆಳಗ್ಗೆ ಕೊಲೆ ಮಾಡಲಾಗಿದೆ. ಮನೆಯಲ್ಲಿ ಪೂಜೆ ಮುಗಿಸಿ ಮನೆಯಿಂದ ಆಚೆ ಬರ್ತಿದ್ದ ಹಾಗೆ ಅಲ್ಲೇ ಬಾವಿ ಕಟ್ಟೆ ಮೇಲೆಯೇ ಕಾದು ಕುಳಿತಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಕತ್ತು ಸೀಳೇ ಬಿಟ್ಟಿದ್ದ. ಅಷ್ಟೇ ಎರಡೇ ನಿಮಿಷದಲ್ಲಿ ದೀಪಕ್ ವಿಲವಿಲ ಒದ್ದಾಡಿ ಸ್ಪಾಟಲ್ಲೇ ಪ್ರಾಣಬಿಟ್ಟಿದ್ದ. ಚಾಕು ಹಾಕಿ ಕತ್ತು ಸೀಳಿ ಕೊಂದವನು ಅಲ್ಲಿಂದ ಎಸ್ಕೇಪ್ ಆಗಿದ್ದ. ಅಷ್ಟಕ್ಕೂ ದೀಪಕ್ ನನ್ನ ಹೆಣವಾಗಿಸಿದ್ದು ಮತ್ತ್ಯಾರೂ ಅಲ್ಲಾ ಅವನ ಒಡಹುಟ್ಟಿದ ಅಣ್ಣ ಈ ಸದಾಶಿವ.ಒಂದೇ ತಾಯಿ ಹೊಟ್ಟೆಯಲ್ಲಿ ಒಂದೇ ರಕ್ತ ಹಂಚ್ಕೊಂಡು ಹುಟ್ಟಿದ್ದ ತಮ್ಮನನ್ನ ಈ ಸದಾಶಿವ ದಾರುಣವಾಗಿ ಕೊಂದು ಕೇಕೆ ಹಾಕಿದ್ದ.  ಈ ಕಿರಾತಕ ಅಣ್ಣನ ಕ್ರೌರ್ಯಕ್ಕೆ ದೀಪಕ್ ಬೀದಿ ಹೆಣವಾಗಿ ಹೋಗಿದ್ದ.ಸ್ವಂತ ತಮ್ಮನ ಮೇಲೆ ಚಾಕು ಹಿಡಿದು ಮುಗಿಬಿದ್ದಸಿದ್ದ ದೊಡ್ಡಮಗನನ್ನ ತಡೆಯೋಕೋ ಹೋಗಿದ್ದ ತಾಯಿ ನಿಂಗಮ್ಮಳ ಮೇಲೂ ಚಾಕು ಬೀಸಿದ್ದ. ನಿಂಗಮ್ಮಳ ಕುತ್ತಿಗೆ ಭಾಗಕ್ಕೆ ತಾಗಿದ ಚಾಕು ಆಕೆಯ ಪ್ರಾಣ ತೆಗೆಯದೆ ಬಿಟ್ಟಿದ್ದೇ ಅದೃಷ್ಟ ಅನ್ಸುತ್ತೆ.

ಇಲ್ಲಾ ಅಂದ್ರೆ ಸದಾಶಿವನ ಅಟ್ಟಹಾಸಕ್ಕೆ ಮತ್ತೊಂದು ಜೀವವೂ ಬಲಿಯಾಗಿ ಹೋಗ್ತಿತ್ತು. ಅಷ್ಟಕ್ಕೂ ಮರಲಿಂಗನದೊಡ್ಡಿಯಲ್ಲಿ ನಡೆದ ಈ ಘಟನೆಗೆ ಕಾರಣ ಏನು ಗೊತ್ತಾ.. ಮತ್ತದೇ ಆಸ್ತಿ ವಿಚಾರ.ಮರಲಿಂಗನದೊಡ್ಡಿ ಯಲ್ಲಿ ಬೆಳ್ಳಂಬೆಳಗ್ಗೆ ನಡೆದ ಕಗ್ಗೊಲೆ ಊರ ಜನರನ್ನ ಬೆಚ್ಚಿ ಬೀಳಿಸಿತ್ತು. ಬೆಳಗ್ಗೆ ಎದ್ದು ಹೊಲ ಗದ್ದೆ ಕೆಲಸಕ್ಕೆ ಹೋಗ್ಬೇಕಿದ್ದವರೆಲ್ಲಾ ಊರಲ್ಲೇ ಉಳ್ಕೊಂಡು ದಂಗಾಗಿ ಹೋಗಿದ್ರು. ನಮ್ಮೂರಲ್ಲೂ ಇಂತಹದೊಂದು ಘಟನೆ ನಡೆದೋಯ್ತಲ್ಲಾ ಅಂತ ತಮ್ಮ ತಮ್ಮಲ್ಲೇ ಮಾತಾಡಿಕೊಳ್ತಿದ್ರೆ.. ಕೊಲೆಯಾದ ದೀಪಕ್ ಮನೆಮಂದಿಯ ಆಕ್ರಂದನ ಮುಗಿಲುಮುಟ್ಟಿತ್ತು. ಎಂದಿನಂತೆ ಬೆಳಗ್ಗೆ ಎದ್ದು ಮನೆಯಲ್ಲಿ ಎಲ್ಲಾ ಕೆಲಸ ಮುಗಿಸಿದ್ದ ದೀಪಕ್, ದೇವರಿಗೆ ಕೈಮುಗಿದು ಯಾವುದೋ ಕೆಲಸದ ನಿಮ್ಮಿತ್ತ ಮನೆಯಿಂದ ಆಚೆ ಹೊರಟಿದ್ದ. ಎದುರು ಬದರು ಮನೆಗಳಾಗಿದ್ದ ಕಾರಣ ಅದೇ ಬಾವಿಕಟ್ಟೆ ಮೇಲೆ ಬಂದು ಕೂತಿದ್ದ ಸದಾಶಿವ. ತಮ್ಮನನ್ನ ನೋಡ್ತಾ ಇದ್ದಂಗೆ ಕಟಕಟಾ ಅಂತ ಹಲ್ಲು ಕಡೀತಾ ಕಣ್ಣು ಕೆಂಪಾಗಿಸಿಕೊಂಡು ಏಕಾಏಕಿ ಕಾದಾಟಕ್ಕೆ ನಿಂತುಬಿಟ್ಟ. ಏನಾಗ್ತಿದೆ ಅಂತ ತಿಳಿಯೋದಕ್ಕೂ ಮುನ್ನವೇ ಸದಾಶಿವ ಕೈಯಲ್ಲಿದ್ದ ಚಾಕು ತಮ್ಮ ದೀಪಕ್ ನ ಕತ್ತು ಸೀಳಿಯೇಬಿಟ್ಟಿತ್ತು.

ಅಷ್ಟೇ.. ಚಾಕುವಿನೇಟು ತಿಂದ ದೀಪಕ್ ಸ್ಪಾಟಲ್ಲೇ ಪ್ರಾಣಬಿಟ್ಟಿದ್ದ. ದೊಡ್ಡಮಗನಿಂದ ಚಿಕ್ಕ ಮಗನನ್ನ ಉಳಿಸೋಕೆ ಹೋಗಿದ್ದ ತಾಯಿ ನಿಂಗಮ್ಮಳ ಮೇಲೆಯೂ ಚಾಕು ಬೀಸಿ ಅಲ್ಲಿದ ಎಸ್ಕೇಪ್ ಆಗಿದ್ದ ಈ ಕಿರಾತಕ ಸದಾಶಿವ. ಈ ಘಟನೆ ಮರಲಿಂಗನದೊಡ್ಡಿಯನ್ನ ಬೆಚ್ಚಿ ಬೀಳಿಸಿತ್ತು.ವೀಕ್ಷಕರೇ ಈಗಾಗಲೇ ಹೇಳಿದ ಹಾಗೆ ಈ ಕೊಲೆ ಹಿಂದೆ ಆಸ್ತಿ ವಿವಾದವೇ ಇರೋದು ಅಂತ ಹೇಳಿದ್ವಿ. ಆ ಕಥೆಯನ್ನ ಎಳೆಎಳೆಯಾಗಿ ನಿಮ್ಮುಂದೆ ಇಡ್ತೀವಿ ಮಿಸ್ ಮಾಡದೇ ಕೇಳಿ. ಯಾಕಂದ್ರೆ ಗಂಡು ಮಕ್ಕಳಿರೋ ಪ್ರತಿ ಮನೆಯಲ್ಲೂ ಇಂತದ್ದೇ ಜಗಳ ಕಾಮನ್ ಆಗಿರುತ್ತೆ. ತಮ್ಮನನ್ನೇ ಬರ್ಬರವಾಗಿ ಕೊಂದ ಈ ಕಿರಾತಕ ಆರೋಪಿ ಸದಾಶಿವನಿಗೆ ಮದ್ವೆಯಾಗಿ ಶಾಲೆಗೆ ಹೋಗೋ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದ್ವೆಯಾದ ಹೊಸದರಲ್ಲಿ ಹೆಂಡ್ತಿ ಜೊತೆ ಬೆಂಗಳೂರಿಗೆ ಬಂದು ಜೀವನ ಮಾಡ್ತಾ ಇದ್ದ ಸದಾಶಿವ, ನಂತರ ಹಳ್ಳಿಗೇ ಹೋಗಿ ಬದುಕುಕಟ್ಟಿಕೊಂಡಿದ್ದ.  ಇನ್ನ ದೀಪಕ್ ಕುಮಾರ್ ಗೆ ಇನ್ನೂ ಮದ್ವೆ ಆಗಿಲ್ಲ.  ತಂದೆ ತಾಯಿ ಜೊತೆ ವಾಸಮಾಡ್ತಿದ್ರೆ, ದೊಡ್ಡಮಗ ಸದಾಶಿವ ಸಪರೇಟ್ ವಾಸವಿದ್ದ.  ಹೀಗೆ ಬದುಕುತ್ತಿದ್ದವರ ನಡುವೆ ಜಗಳ ಹುಟ್ಟಾಕಿದ್ದೇ ಮೂರು ಎಕರೆ ಜಮೀನು. ಯಾವಾಗ ಪಟ್ಟಣದ ಸಹವಾಸ ಸಾಕು ಅಂತ ಬೇಸತ್ತು ಹೆಂಡ್ತಿ ಮಕ್ಕಳನ್ನ ಕರ್ಕೊಂಡು ಹಳ್ಳಿಗೇ ಬಂದಿದ್ನೋ ಮನೆ ಜೊತೆ ಆಸ್ತಿನೂ ಭಾಗ ಮಾಡಿ ಅಂತ ಪಟ್ಟು ಹಿಡಿದಿದ್ದ.

ಆದ್ರೆ, ಮನೆಯನ್ನಂತೂ ಒಡೆದಿದ್ದಾಯ್ತು, ಭೂಮಿನೂ ಪಾಲು ಮಾಡಲ್ಲಾ.. ಬೇಕಿದ್ರೆ ಅಣ್ಣತಮ್ಮಂದಿರಿಬ್ರೂ ಕೂಡ ಅದೇ ಜಮೀನಲ್ಲಿ ದುಡ್ಕೊಂಡು ತಿನ್ನಿ ಅಂತ ಹೇಳಿದ್ರು. ಆದ್ರೆ ಈ ಸದಾಶಿವ ಕೇಳ್ಬೇಕಲ್ವಾ.. ನನಗೆ ಆಸ್ತಿಯಲ್ಲಿ ಅರ್ಧ ಪಾಲು ಬೇಕೇಬೇಕು ಅಂತ ಪಟ್ಟುಹಿಡಿದು ಕೂತುಬಿಟ್ಟಿದ್ದ.  ಅದಕ್ಕೆ ಅವನ ಹೆಂಡತಿಯೂ ಸಪೋರ್ಟ್ ಮಾಡ್ತಿದ್ದಳಂತೆ.  ಎಷ್ಟೇ ಹಠ ಹಿಡಿದ್ರೂ ಆಸ್ತಿಯಲ್ಲಿ ಪಾಲು ಮಾತ್ರಾ ಮಾಡಲ್ಲ ಅಂತ ಹೆತ್ತವರೂ ಸಹ ಹಠಕ್ಕೆ ಬಿದಿದ್ರು. ಇದು ಸದಾಶಿವನ ಪಿತ್ತನೆತ್ತಿಗೇರಿಸಿತ್ತು.  ಹೀಗಾಗಿ ಕಂಠಪೂರ್ತಿ ಕುಡಿದು ಬಂದು ತಂದೆ ತಾಯಿ ತಮ್ಮನಿಗೆ ಡೈಲಿ ಟಾರ್ಚರ್ ಕೊಡ್ತಿದ್ದ.  ವಯಸ್ಸಾದ ತಂದೆತಾಯಿ ಯನ್ನ ಹಿಡ್ಕೊಂಡು ಹೊಡೆಯೋದು.. ಕೊಲೆ ಮಾಡ್ತೀನಿ ಅಂತ ಬೆದರಿಸೋದು ಕಾಮನ್ ಆಗಿತ್ತಂತೆ. ಅಯ್ಯೋ ಹಾಳಾಗಿ ಹೋಗ್ಲಿ ಅಂತ ಮಾತುಕಥೆ ಮಾಡಿ ಮೂರು ಎಕರೆ ಜಮೀನನ್ನ ಭಾಗ ಮಾಡಿದ್ರು.ಒಂದೂವರೆ ಎಕರೆ ದೊಡ್ಡಮಗನಿಗೆ, ಉಳಿದ ಒಂದೂವರೆ ಎಕರೆ ಸಣ್ಣ ಮಗನಿಗೆ ಅಂತ ಮಾತಾಡಿ ಜಮೀನನ್ನ ಬಿಟ್ಟುಕೊಟ್ಟಿದ್ರು.  ಈ ಸದಾಶಿವ ಅಂದುಕೊಂಡಂತೆ ಆಸ್ತಿಯಲ್ಲಿ ಪಾಲು ಪಡ್ಕೊಂಡೇಬಿಟ್ಟ. ಆದ್ರೆ ಅದೇನಾಯ್ತೋ ಏನೋ..

ಇವತ್ತು ಹೊಂಚು ಹಾಕಿ ಕೂತಿದ್ದವನು ತಮ್ಮ ದೀಪಕ್ ಮನೆಯಿಂದ ಆಚೆ ಬರ್ತಾ ಇದ್ದಂಗೆ ಮೇಲೆ ಬಿದ್ದು ಕೊಂದೇಬಿಟ್ಟ.ಹಠಮಾಡಿ ಆಸ್ತಿಯಲ್ಲಿ ಪಾಲು ಪಡ್ಕೊಂಡ ಸದಾಶಿವ ಗೆದ್ದು ಬೀಗಿದ್ದ. ಆದ್ರೂ ಕೂಡ ಅದೇನ್ ಆಯ್ತೋ ಏನೋ  ತಮ್ಮ ದೀಪಕ್ ನನ್ನ ಕೊಂದು ಮುಗಿಸಿದ್ದ. ಮನೆಯಲ್ಲಿ ಪಾಲಾಯ್ತು ಜಗಳ ಮಾಡಿ ಆಸ್ತಿಯಲ್ಲೂ ಭಾಗ ಪಡ್ಕೊಂಡಿದ್ರೂ ಕೂಡ ಮತ್ತ್ಯಾವ ಕಾರಣಕ್ಕೆ ಆ ಕೊಲೆ ಮಾಡ್ದ ಅನ್ನೋದು ನಿಮಗೆ ಕಾಡ್ತಾ ಇರೋ ಪ್ರಶ್ನೆ ಅಲ್ವಾ..ಅಂದುಕೊಂಡಂತೆ ಆಸ್ತಿಯಲ್ಲಿ ಪಾಲು ಪಡ್ಕೊಂಡ್ರೂ ಕೂಡ ಈ ರಾಕ್ಷಸ ಸದಾಶಿವ ತಮ್ಮನ ಕೊಂದು ರಕ್ತ ಹೀರಿಬಿಟ್ಟ. ಅದ್ಯಾಕೆ ಅಂತ ಹೇಳ್ತೀವಿ ಕೇಳಿಸ್ಕೊಳ್ಳಿ.  ಈ ಸದಾಶಿವ ಪಂಚಾಯ್ತಿ ಸೇರಿಸಿ, ಹಾದಿಬೀದಿ ಜಗಳ ಮಾಡಿ ಅಂದುಕೊಂಡತೇ ಒಂದೂವರೆ ಎಕರೆ ಜಮೀನು ಪಡ್ಕೊಂಡಿದ್ದೇನೋ ಸರಿ. ಆದರೆ ಅದು ಅವನಿಗೆ ಸಮಾಧಾನ ಇರಲಿಲ್ಲ. ಯಾಕಂದ್ರೆ ಪಾಲು ಮಾಡಿದ ಜಮೀನನ್ನ ಸದಾಶಿವನ ಹೆಸರಿಗೆ ಮಾಡಿಕೊಟ್ಟಿರಲಿಲ್ಲ. ಯಾಕಂದ್ರೆ, ಕುಡಿಯೋ ಚಟ ಇದ್ದ ಸದಾಶಿವನಿಗೆ ಮಾರ್ಕೊಂಡು ತಿನ್ನೋ ಬುದ್ದಿ. ಬೆಳಿತಿರೋ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಮುಂದೆ ಅವರ ಭವಿಷ್ಯಕ್ಕೆ ಏನಾದ್ರೂ ಆಧಾರ ಮಾಡ್ಬೇಕು ಅನ್ನೋ ಉದ್ದೇಶದಿಂದ ಈ ಸದಾಶಿವನನ್ನ ನಂಬದೇ ಪಾಲು ಆಸ್ತಿಯನ್ನ ಅವನ ಹೆಸರಿಗೆ ಮಾಡಿಕೊಟ್ಟಿರಲಿಲ್ಲ. ಇದು ಸದಾಶಿವನ ಕೋಪಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ನಿಮ್ಮೆನ್ನೆಲ್ಲಾ ಕೊಂದು ಮುಗಿಸ್ತೇನೆ ಅಂತ ಧಮಕಿ ಹಾಕಿದ್ದೂ ಉಂಟು. ಹೀಗಿರಬೇಕಾದ್ರೆ ಈ ಸದಾಶಿವ ಬೇರೊಂದು ಹೊಸ ವರಸೆ ಶುರು ಮಾಡಿದ್ದ. ಅದೇನೆಂದ್ರೆ ನನ್ನಗೆ ಹೆಣ್ಮಕ್ಕಳಿವೆ. ಹೀಗಾಗಿ ಒಂದೂವರೆ ಎಕರೆ ಸಾಕಾಗಲ್ಲಾ ಉಳಿದ ಜಮೀನೂ ಬೇಕು. ಅದನ್ನ ನನ್ನ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಡ್ಲೇಬೇಕು ಅಂತ ಕೇಳ್ತಿದ್ದನಂತೆ.

ನಾನೇಳಿದ್ದನ್ನ ಕೇಳದೇ ಹೋದ್ರೆ ಕೊಲೆ ಮರ್ಡರ್ ಮಾಡ್ತೇನೆ ಅಂತ ಬೆದರಿಕೆ ಹಾಕ್ತಿದ್ದನಂತೆ.ಯಾವಾಗ ಿಇವನ  ಮಾತಿಗೆ ಯಾರೂ ಸೊಪ್ಪು ಹಾಕಲಿಲ್ಲವೋ ಆಗ ಸದಾಶಿವನ ಪಿತ್ತ ಮತ್ತಷ್ಟು ನೆತ್ತಿಗೇರಿತ್ತು. ಇರೋ ಒಬ್ಬ ತಮ್ಮನನ್ನ ಕೊಂದುಬಿಟ್ರೆ ಆ ಆಸ್ತಿಯೂ ನನ್ನದಾಗುತ್ತೆ ಅಂತ ಬುದ್ದಿಗೆ ಮಣ್ಣು ತಿನ್ನಿಸಿದವನೇ ಮಾಡಿದ್ದು ತಮ್ಮನ ಕೊಲೆ.ನೋಡಿದ್ರಲ ದಾಯಾದಿ ದ್ರೋಹದ ಕಥೆಯನ್ನ. ಅಷ್ಟಲ್ಲದೇ ಹೇಳ್ತಾರಾ ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅಂತ.

LEAVE A REPLY

Please enter your comment!
Please enter your name here