Home Crime ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನ ನೇಣು ಬಿಗಿದು ತಾನೂ ಕೂಡ ಆತ್ಮಹತ್ಯೆ…ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಿಗೂಡ...

ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನ ನೇಣು ಬಿಗಿದು ತಾನೂ ಕೂಡ ಆತ್ಮಹತ್ಯೆ…ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಿಗೂಡ ಸಾವು..!!!

761
0
SHARE


ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನ ನೇಣು ಬಿಗಿದು ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಸಮೀಪದ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನೆಡೆದಿದೆ. ರಾಧಾ ಮಕ್ಕಳಾದ ಚಿನ್ಮಯಿ, ಬಿಂದು ಮೃತರು.

ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಮನೆಯ ಕೊಠಡಿಯಲ್ಲಿ ಶಬ್ದ ಕೇಳಿಸಿದ್ರಿಂದ ಬಾಗಿಲು ಹೊಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ತಾಯಿ ರಾಧಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಇನ್ನೂ ಮೃತ ರಾಧಾ ಮೂಲತಃ ನೆಲಮಂಗಲ ತಾಲ್ಲೂಕಿನ ಕಾಚನಹಳ್ಳಿ ನಿವಾಸಿಯಾಗಿದ್ದು ಕಳೆದ ಐದು ವರ್ಷಗಳ ಹಿಂದೆ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯ ಪತಿ ಶ್ರೀನಿವಾಸ್ ಎಂಬುವರನ್ನ ಮದುವೆಯಾಗಿದ್ರು. ಸಂಸಾರ ಕೂಡ ಚನಾಗೆ ನಡೆಸ್ತಾ ಇದ್ರು.

ಆದ್ರೆ ಅದೇನಾಯ್ತೋ ಏನೊ ಮನೆಯ ಗೋಡೆ ಮೇಲೆ ಗಂಡನಿಗೆ ಸಾರಿ ರೀ ಅಂತ ಬರೆದು ತನ್ನ ಇಬ್ಬರು ಕಂದಮ್ಮಗಳಿಗೆ ನೇಣು ಹಾಕಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇನ್ನೂ ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ…

LEAVE A REPLY

Please enter your comment!
Please enter your name here