Home Cinema `ಹೊಟ್ಟೆ’ ತುಂಬಿಕೊಂಡು ಪರಾರಿ ಆದ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನಿರ್ದೇಶಕ..?! `ನರೇಂದ್ರಬಾಬು’ವನ್ನ ನಂಬಿ ಅನಂತ್ ನಾಗ್...

`ಹೊಟ್ಟೆ’ ತುಂಬಿಕೊಂಡು ಪರಾರಿ ಆದ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನಿರ್ದೇಶಕ..?! `ನರೇಂದ್ರಬಾಬು’ವನ್ನ ನಂಬಿ ಅನಂತ್ ನಾಗ್ ಕಳೆದುಕೊಂಡಿದ್ದು ಅದೆಷ್ಟು ಕೋಟಿ ಗೊತ್ತಾ?..

683
0
SHARE

ಕನ್ನಡದ ಹಿರಿಯ ನಟ ಅನಂತ್ ನಾಗ್ ಇತ್ತೀಚಿಗೆ ಹೊಸ ಸಿನಿಮಾಗಳನ್ನೇ ಒಪ್ಪಿಕೊಳ್ತಿಲ್ಲ. ಗಾಂಧಿನಗರದ ಸಹವಾಸ ಸಾಕು ಅಂದುಕೊಂಡು ಮನೆಯಲ್ಲಿ ಸುಮ್ಮನೇ ಕುಳಿತು ಬಿಟ್ಟಿದಾರೆ. ಅರೇ ಇದ್ದಕ್ಕಿದ್ದ ಹಾಗೆ ಅನಂತ್ ಗೆ ಅಂಥದ್ದೇನಾಯ್ತು ಅಂತ ನೋಡಹೋದ್ರೆ. ಅವರಿಗಾದ ಒಂದು ದೊಡ್ಡ ಮೋಸದ ಕಥೆ ಬಿಚ್ಚಿಕೊಳ್ಳುತ್ತೆ. ಅಷ್ಟಕ್ಕೂ ಅಮಾಯಕ ಅನಂತ್ ರಿಗೆ ಮೋಸ ಮಾಡಿದವನು ಒಬ್ಬ ಕಿರಾತಕ ನಿರ್ದೇಶಕ..ಅನಂತ್ ನಾಗ್ ಸಹಾಯ ಮಾಡೋ ಈ ದೊಡ್ಡ ಗುಣನೇ ದೊಡ್ದೊಂದು ಸಮಸ್ಯೆ ತಂದಿದೆ ಅಂದ್ರೆ ಸುಳ್ಳಲ್ಲ.

ಹೌದು ಅನಂತ್ ನಾಗ್ ದೊಡ್ಡದೊಂದು ನೋವಿನಲ್ಲಿ ಸಿಲುಕಿದಾರೆ. ಅಂತೆಯೇ ಇತ್ತೀಚಿಗೆ ಯಾವ ಹೊಸ ಸಿನಿಮಾಗಳನ್ನೂ ಒಪ್ಪಿಕೊಳ್ತಿಲ್ಲ. ಅಷ್ಟಕ್ಕೂ ಈ ಅನಂತ ಬೇಸರಕ್ಕೆ ಕಾರಣ ಏನಂದ್ರೆ ಅವರಿಗಾಗಿರೋ ಒಂದು ಮೋಸ.ಯೆಸ್ ಅನಂತ್ ನಾಗ್ ಮೋಸ ಹೋಗಿದ್ದಾರೆ. ಸೂಕ್ಷ್ಮ ಸ್ವಭಾವದ ಅನಂತ್ ಅದನ್ನ ಮನಸ್ಸಿಗೆ ಹಚ್ಚಿಕೊಂಡು ಹೊಸ ಚಿತ್ರಗಳನ್ನೇ ಒಪ್ಪಿಕೊಳ್ತಿಲ್ಲ. ಮೊದಲೆಲ್ಲಾ ಹೊಸ ನಿರ್ದೇಶಕರು ಹೊಸ ಕಥೆಯನ್ನ ತೆಗೆದುಕೊಂಡು ಬಂದ್ರೆ ಉತ್ಸಾಹದಿಂದ ಸಿನಿಮಾ ಬಗ್ಗೆ ಮಾತನಾಡ್ತಿದ್ದ, ಪಾತ್ರ ಹಾಗೆ ಮಾಡೋಣ ಹೀಗೆ ಮಾಡೋಣ ಅಂತ ಡಿಸ್ಕಸ್ ಮಾಡ್ತಿದ್ದ ಅನಂತ್ ಈಗ ಯಾಕೋ ಮನಸ್ಸು ಸರಿಯಿಲ್ಲ..

ಪಾತ್ರ ಬೇರೆಯವರ ಬಳಿ ಮಾಡ್ಸಿ ಅಂದು ಬಿಡ್ತಿದಾರೆ.ಅಷ್ಟಕ್ಕೂ ಅನಂತ್ ನಾಗ್ ಅಂಥಾ ಮೋಸ ಏನಾಯ್ತು… ಮೋಸ ಮಾಡಿದ್ದಾದ್ರೂ ಏನು ಅಂತ ಕೇಳಿದ್ರೆ ಅದರ ಹಿಂದೆ ಒಂದು ದೊಡ್ಡ ಕಥೆಯೇ ಬಿಚ್ಚಿಕೊಳ್ಳುತ್ತೆ. ಈ ಕಥೆಗೂ ಮುನ್ನ ನೀವು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನೋ ಸಿನಿಮಾ ಕಥೆ ಕೇಳಬೇಕು..ಯೆಸ್ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನಿಮಾ ಬಿಡುಗಡೆಯಾಗಿದ್ದೇ ಮಾಧ್ಯಮದವರೆಲ್ಲಾ ಸಿನಿಮಾ ನೋಡಿ ಛೀಮಾರಿ ಹಾಕಿದ್ರು. ಅಸಲಿಗೆ ಇದು ದಿ ಇಂಟರ್ನ್ ಅನ್ನೋ ಇಂಗ್ಲೀಶ್ ಸಿನಿಮಾವನ್ನ ಯಥಾವತ್ ಕದ್ದು ಮಾಡಲಾಗಿದ್ದ ಸಿನಿಮಾ.

ಮಾಧ್ಯಮಗಳಲ್ಲಿ ಈ ರೀತಿ ಬಂದಿದ್ದನ್ನ ನೋಡಿ ಅನಂತ್ ಬೆಚ್ಚಿಬಿದ್ದಿದಾರೆ. ಅಸಲಿಗೆ ಇದರ ನಿರ್ದೇಶಕ ನರೇಂದ್ರಬಾಬು ಇದು ತನ್ನದೇ ಕಥೆ ಅಂತ ಅನಂತ್ ಎದುರು ಪೋಸ್ ಕೊಟ್ಟಿದ್ದನಂತೆ. ನರೇಂದ್ರಬಾಬು ಬಣ್ಣದ ಮಾತನ್ನ ನಂಬಿದ್ದ ಅನಂತ್ ಆತನಿಗೆ ಈ ಸಿನಿಮಾ ಮಾಡೋದಕ್ಕೆ ಸಾಕಷ್ಟು ಸಹಾಯ ಮಾಡಿದ್ರು. ತಾವೇ ಮುಂದೆ ನಿಂತು ಪ್ರಚಾರ ಮಾಡಿದ್ರು. ನರೇಂದ್ರ ಬಾಬು ಭಾರಿ ಪ್ರತಿಭಾನ್ವಿತ ಅಂತ ಮಾಧ್ಯಮಗಳ ಮುಂದೆ ಹೊಗಳಿದ್ರು. ಆದ್ರೆ ಆತ ಯಾವುದೋ ಭಾಷೆಯ ಕಥೆ ಕದ್ದು ಸುಳ್ಳು ಹೇಳಿರೋ ಸಂಗತಿ ಕೊನೆವರೆಗೂ ಅನಂತ್ ಗೆ ಗೊತ್ತೇ ಆಗಿರಲಿಲ್ಲ.

ಯೆಸ್ ಅನಂತ್ ನಾಗ್ ಗೆ ಮೋಸ ಮಾಡಿರೋ ನಿರ್ದೇಶಕನ ಹೆಸರು ಕಬಡ್ಡಿ ನರೇಂದ್ರಬಾಬು ಅಲಿಯಾಸ್ ಇಂದ್ರಬಾಬು ಅಂತ. ಈತ 2009ರಲ್ಲಿ ಕಬಡ್ಡಿ ಅನ್ನೋ ಸಿನಿಮಾ ಮಾಡಿದ್ದ. ಸಿನಿಮಾ ಏನೋ ಚೆನ್ನಾಗೇ ಮಾಡಿದ್ದ ಅದರ ಜೊತೆಗೆ ನಿರ್ಮಾಪಕರಿಗೆ ಪಂಗನಾಮ ಹಾಕಿ ಹಣವನ್ನೂ ಚೆನ್ನಾಗೇ ಮಾಡಿದ್ದ. ಕಬಡ್ಡಿ ಸಿನಿಮಾ ಗೆಲ್ಲಲಿಲ್ಲ. ಆದ್ರೆ ಆ ಸಾರಿಯ ರಾಜ್ಯ ಪ್ರಶಸ್ತಿ ಬಂದು ಬಿಟ್ತು.ಯಾವಾಗ ರಾಜ್ಯ ಪ್ರಶಸ್ತಿ ಬಂತೋ ಈ ನರೇಂದ್ರಬಾಬು ಥೇಟ್ ಬುದ್ದಿಜೀವಿ ಅಂತೆ ಪೋಸ್ ಕೊಡೋದಕ್ಕೆ ಶುರುಮಾಡಿದ. ಮುಂದಿನ ಸಿನಿಮಾ ಶಿವಣ್ಣನ ಜೊತೆಗೆ  ಮಾಡ್ತಿನಿ ಅಂತ ನಿರ್ಮಾಪಕರನ್ನ ಹುಡುಕತೊಡಗಿದ.

ಕುಮಾರಸ್ವಾಮಿ ಪತಿಗೊಂಡ ಅನ್ನೋ ಸಭ್ಯ ನಿರ್ಮಾಪಕರೊಬ್ರು ಈತನೆ ಬಲೆಗೆ ಬಿದ್ರು. ಆಗ ಶುರುವಾಗಿದ್ದೇ ಸಂತೆಯಲ್ಲಿ ನಿಂತ ಕಬೀರ ಸಿನಿಮಾ.ಕಬೀರದಾಸರ ಕಥೆಯನ್ನ ಸಿನಿಮಾ ಮಾಡ್ತಿನಿ ಅಂತ ಬಿಲ್ಡಪ್ ಕೊಟ್ಟ ನರೇಂದ್ರಬಾಬು ಬಾಲಿವುಡ್ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ರನ್ನ ಕರೆಸಿದ. ಅವರಿಗೆ ಪುಡಿಗಾಸು ಕೊಟ್ಟು ಲಕ್ಷಾಂತರ ರೂಪಾಯಿ ಜೇಬಿಗಿಳಿಸಿಕೊಂಡ. ಕಬೀರರ ಹೆಸರನ್ನೇ ಕೆಡಿಸುವಂಥಾ ಕೆಟ್ಟ ಹಾಡುಗಳನ್ನ ಮಾಡಿದ.ಕಬೀರ ದಾಸರ ಕಥೆ…

ಇಸ್ಮಾಯಿಲ್ ದರ್ಬಾರ್ ಸಂಗೀತ, ಶಿವಣ್ಣ ನಂತಹ ನಟ- ಅನುಭವಿ ಎಲ್ಲವನ್ನೂ ಇಟ್ಟುಕೊಂಡು ಈ ನರೇಂದ್ರಬಾಬು ಅದೆಷ್ಟು ಕೆಟ್ಟದಾಗಿ ಸಿನಿಮಾ ಮಾಡಿದ್ದ ಅಂದ್ರೆ ಎರಡೇ ದಿನಕ್ಕೆ ಸಿನಿಮಾ ಎತ್ತಂಗಡಿ ಆಯ್ತು. ಶಿವಣ್ಣನ ಹೇರ್ ಸ್ಟೈಲ್ ನೋಡಿ, ಶಿವಣ್ಣನ ಅಭಿಮಾನಿಗಳೇ ಬೇಸರಿಸಿಕೊಂಡ್ರು. ಈ ಬಾಬು ಸಿಕ್ರೆ ನಾಲ್ಕು ತದುಕಬೇಕು ಅಂತ ಅವತ್ತೆ ಅಂದುಕೊಂಡಿದ್ರು. ಆದ್ರೆ ಆಗಲೂ ಬಾಬು ಎಸ್ಕೇಪ್ ಆಗಿದ್ದ.ಕಬೀರ ಸಿನಿಮಾವನ್ನ ಈ ಕೆಲಸ ಗೊತ್ತಿಲ್ಲದ ನಿರ್ದೇಶಕ ಚಿತ್ರಿಸಿದ್ದು ಬರೊಬ್ಬರಿ 5 ವರ್ಷ. ಕೊನೆಗೆ ಸಿನಿಮಾ 5 ದಿನವೂ ಚಿತ್ರಮಂದಿರದಲ್ಲಿ ನಿಲ್ಲಲಿಲ್ಲ.

ಆದ್ರೆ ನಿರ್ಮಾಪಕರಿಗೆ ಮೋಸ ಮಾಡಿ ಭರ್ಜರಿ ಹಣ ಮಾಡಿಕೊಂಡಿದ್ದ ಬಾಬು ಒಂದಿಷ್ಟು ಕಾಲ ಮಜಾ ಮಾಡ್ಕೊಂಡು ವಾಪಾಸ್ ಬಂದ. ಹಾಗೇ ವಾಪಾಸ್ ಬಂದವನು ಹಾಜರಾಗಿದ್ದೇ ಅನಂತ್ ನಾಗ್ ಬಳಿ.ಅಸಲಿಗೆ ಬಾಬುಗೆ ಅನಂತ್ ನಾಗ್ ಪರಿಚಯವಾಗಿದ್ದು ಅದೇ ಸಂತೆಯಲ್ಲಿ ನಿಂತ ಕಬೀರ ಸಿನಿಮಾ ಮಾಡೋವಾಗ.  ಈ ಸಿನಿಮಾದಲ್ಲಿ ಅನಂತ್ ರಿಂದ ಕಬೀರನ ಗುರುಗಳ ಪಾತ್ರ ಮಾಡಿಸಿದ್ದ ಬಾಬು,.ಆಗಲೇ ಅನಂತ್ ಗೆ ಬಲೆ ಹಾಕಿದ್ದ.

ಅನಂತ್ ನಾಗ್ ಎದುರು ಸಿಗರೇಟು ಸೇದ್ತಾ ದೇಶ-ಕೋಶ ಅಂತ ದೊಡ್ಡ ದೊಡ್ಡ ಮಾತನಾಡ್ತಿದ್ದ ನರೇಂದ್ರಬಾಬು ದೊಡ್ಡ ಬುದ್ದಿಜೀವಿಯಂತೆ ಪೋಸ್ ಕೊಟ್ಟಿದ್ದ. ಈತನ ಮಾತುಗಳನ್ನ ಕೇಳಿ ಅನಂತ್ ಒಳ್ಳೆ ಪ್ರತಿಭಾನ್ವಿತ ಹುಡುಗ ಅಂತ ಮೆಚ್ಚಿಕೊಂಡಿದ್ರು. ಹಾಗೆ ಮೆಚ್ಚಿಕೊಂಡು ಸುಮ್ಮನಾಗಿದ್ರೆ ಒಳ್ಳೆದಾಗಿರ್ತಾ ಇತ್ತು. ಆದ್ರೆ ಅದಕ್ಕೂ ಒಂದು ಹೆಜ್ಜೆ ಮುಂದೆ ನರೇಂದ್ರಬಾಬುಗೆ ಸಹಾಯ ಮಾಡೋದಕ್ಕೆ ಮುಂದಾಗ್ತಾರೆ ಅನಂತ್.. ಹಾಗೆ ಸಹಾಯ ಮಾಡೋದಕ್ಕೆ ಹೋಗಿ ದೊಡ್ಡದೊಂದು ಮೋಸದ ಜಾಲದಲ್ಲಿ ಸಿಲುಕಿಬಿಡ್ತಾರೆ. ಕೋಟಿ ಕೋಟಿ ಹಣ ಕಳೆದುಕೊಳ್ತಾರೆ.

LEAVE A REPLY

Please enter your comment!
Please enter your name here