Home Cinema ಹೊಡಿರಿ ಶಿಳ್ಳೆ.. ಅಣ್ಣಾವ್ರ ಪಾತ್ರದಲ್ಲಿ ಕಾಣಸಿಕೊಳ್ತಾರಂತೆ ಅಪ್ಪು..! ಆ ವೇದಿಕೆಯಲ್ಲಿ ಘಮಘಮಿಸಿತು ಹಳೆಯ ನೆನಪುಗಳ...

ಹೊಡಿರಿ ಶಿಳ್ಳೆ.. ಅಣ್ಣಾವ್ರ ಪಾತ್ರದಲ್ಲಿ ಕಾಣಸಿಕೊಳ್ತಾರಂತೆ ಅಪ್ಪು..! ಆ ವೇದಿಕೆಯಲ್ಲಿ ಘಮಘಮಿಸಿತು ಹಳೆಯ ನೆನಪುಗಳ ಕಂಪು..!

1770
0
SHARE

ಟಾಲಿವುಡ್‌ನಲ್ಲಿ ದಿವಂಗತ ಎನ್.ಟಿ.ಆರ್ ಹೆಸರೇ ಹೊಸ ಸಂಚಲನ ಮೂಡಿಸುತ್ತೆ. ’ಎನ್.ಟಿ.ಆರ್’ ತೆಲುಗು ಚಿತ್ರರಂಗ ಕಂಡ ಅಲ್ಟಿಮೆಟ್ ಶೋಮ್ಯಾನ್ ಅಂದ್ರೆ ತಪ್ಪಾಗಲ್ಲ ನೋಡಿ. ಇಂತಹ ಮಹಾನ್ ನಾಯಕನ ಜೀವನ ಕಥೆ ಈಗ ಸಿನಿಮಾ ರೂಪದಲ್ಲಿ ಬಂದಿದೆ. ಈ ಬಯೊಪಿಕ್ ಎಬ್ಬಿಸಿರೋ ಅಲೆಗೆ ಪ್ರೇಕ್ಷಕ ಮೂಕವಿಸ್ಮಿತನಾಗಿಬಿಟ್ಟಿದಾನೆ. ನಾಳೆ ತೆರೆ ಕಾಣಲಿರೋ ’ಎನ್.ಟಿ.ಆರ್; ಕಥಾನಾಯುಕುಡು ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ರೆಕಾರ್ಡ್ ಹುಟ್ಟುಹಾಕುತ್ತಾಂತೆ.  ಎನ್.ಟಿ.ಆರ್ ಪಾತ್ರಕ್ಕೆ ಉಸಿರು ತುಂಬಿದ ನಂದಮೂರಿ ಬಾಲಕೃಷ್ಣ. ಸ್ವತಃ ಎನ್.ಟಿ.ಆರ್‌ರನ್ನೇ ಮೈ ಮೇಲೆ ಆಹ್ವಾನಿಸಿಕೊಂಡ ಬಾಲಯ್ಯ.

ಈಗ ಎಲ್ಲ ಕಡೇ ಒಂದೇ ಕೂಗು. ಜೈ ಬಾಲಯ್ಯ, ಜೈಜೈ ಬಾಲಯ್ಯ…! ಇದಕ್ಕೆ ಮುಖ್ಯವಾದ ಕಾರಣ ಕೂಡ ಇದೆ. ತೆಲುಗು ನೆಲ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಒಂದುಕಾಲದ ಟಾಲಿವುಡ್ ಸಿನಿಮಾರಂಗದ ಅಧಿಪತಿ ಎನ್.ಟಿ.ರಾಮರಾವ್ ಜೀವನಚರಿತ್ರೆ ಸಿನಿಮಾ ಮೂಲಕ ರಿವೀಲ್ ಆಗಲಿದೆ. ಎನ್.ಟಿ.ಆರ್ ಸುಪುತ್ರ ಬಾಲಯ್ಯ ಸುಮಾರು ವರ್ಷಗಳಿಂದಲೇ ಈ ಸಿನಿಮಾ ಮಾಡೋ ಪ್ಲಾನ್ ಮಾಡಿಕೊಂಡಿದ್ರು.

ಆದರೆ ಎಲ್ಲದಕ್ಕೂ ಒಂದು ಗುಡ್ ಟೈಮ್ ಬರಬೇಕಲ್ಲ ಅನ್ನೋ ಹಾಗೇ ಈಗ ಎನ್.ಟಿ.ಆರ್ ಬಯೊಪಿಕ್ ಫೈನಾಲಿ ಪರದೆ ಮೇಲೆ ಮಿಂಚಲಿದೆ.ಎನ್.ಟಿ.ಆರ್ ಲೈಫ್‌ನ ಕೆಲವು ಯಾರಿಗೂ ಗೊತ್ತಿರದ ಸೀಕ್ರೆಟ್‌ಗಳು ಈ ಸಿನಿಮಾದ ಮೂಲಕ ಬಯಲಾಗ್ತಿರೊ ಕಾರಣದಿಂದಲೇ ಎನ್.ಟಿ.ಆರ್;ಕಥಾನಾಯುಕುಡು ಸಿನಿಮಾ ಟಾಲಿವುಡ್‌ನಲ್ಲಿ ಕ್ಯುರ‍್ಯಸಿಟಿ ಕ್ರಿಯೆಟ್ ಮಾಡಿದೆ. ಸಿನಿಮಾದ ಟ್ರೈಲರ್‌ನಲ್ಲಿ ನಂದಮೂರಿ ಬಾಲಕೃಷ್ಣ ಥೇಟ್ ತಮ್ಮ ತಂದೆ ಎನ್.ಟಿ.ಆರ್ ಜೆರಾಕ್ಸ್ ಕಾಪಿಯ ಹಾಗೇ ಕಾಣಿಸಿಕೊಂಡಿದ್ದಾರೆ.

ಈ ಪಾತ್ರವನ್ನ ಬಾಲಯ್ಯ ಬಿಟ್ರೆ ಬೇರೆ ಯಾರು ಮಾಡೋಕೆ ಆಗ್ತಿರ್‌ಲಿಲ್ಲ ಬಿಡಿ ಅಂತ ಬಾಲಯ್ಯ ಫ್ಯಾನ್ಸ್ ಜಂಭದಿಂದ ಬೀಗ್ತಿದಾರೆ.ಇನ್ನು ಸಿನಿಮಾದ ಪ್ರಚಾರಕ್ಕೆ ನಮ್ಮ ಸಿಲಿಕಾನ್ ಸಿಟಿಗೆ ಆಗಮಿಸಿದ ಬಾಲಯ್ಯ ’ಕಥಾನಾಯುಕುಡು’ ಅನುಭವಗಳನ್ನ ರಸಾವತ್ತಾಗಿ ಬಿಚ್ಚಿಟ್ರು. ಒಂದೇ ಮಾತಿನಲ್ಲಿ ’ನೀವೆಲ್ಲಾ ಎನ್.ಟಿ.ಆರ್ ಪರ್ಸಾನಾಲಿಟಿ ಬಗ್ಗೆ ತಿಳ್ಕೊಬೇಕಾದ್ರೆ ಈ ಸಿನಿಮಾ ಮಿಸ್ ಮಾಡ್ಕೊಬೇಡಿ’ ಎಂದುಬಿಟ್ರು. ಅಲ್ಲದೇ, ಸ್ಯಾಂಡಲ್‌ವುಡ್‌ನ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಾಲಯ್ಯ ’ಡಾ.ರಾಜ್‌ಕುಮಾರ್ ಜೀವನಚರಿತ್ರೆಯನ್ನ ಸಿನಿಮಾ ಮಾಡಬೇಕು.

ಯಾಕಂದ್ರೆ ಅಂತಹ ಮಹಾನ್ ವ್ಯಕ್ತಿತ್ವ ಆಡಿಯನ್ಸ್‌ಗೆ ರೀಚ್ ಆಗಲೇಬೇಕು. ಕನ್ನಡದಲ್ಲೂ ಈಗ ಬಿಗ್‌ಬಜೆಟ್ ಸಿನಿಮಾಗಳ ಜಾತ್ರೆ ಶುರುವಾಗಿರೋದು ಸಕತ್ ಖುಷಿ ತಂದಿದೆ. ನನ್ನ ಆಲ್‌ಟೈಮ್ ಫೇವರಿಟ್ ನಟ ಅಂದ್ರೆ ಅದು ಡಾ.ರಾಜ್‌ಕುಮಾರ್ ಮಾತ್ರ. ಅವರ ಪಾತ್ರವನ್ನ ಪುನೀತ್ ನಿಭಾಯಿಸಿದ್ರೆ ಅದರ ಮಜಾನೇ ಬೇರೆ’ ಎಂದು ಸ್ಮೈಲ್ ಮಾಡಿದ್ರು.ಇನ್ನು ನಿನ್ನೆ ನಡೆದ ಎನ್.ಟಿ.ಆರ್ ಚಿತ್ರದ ಸುದ್ದಿಗೋಷ್ಟಿಗೆ ವಿಶೇಷವಾಗಿ ನಮ್ಮ ಕನ್ನಡದ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಹಾಗೂ ನಟ ಯಶ್ ಮುಖ್ಯಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ರು.

ಪುನೀತ್ ರಾಜ್‌ಕುಮಾರ್ ಯಾಕೋ ಸ್ವಲ್ಪ ರಿವೈಂಡ್ ಮೂಡ್‌ನಲ್ಲಿದ್ರು ಅನ್ಸುತ್ತೆ. ಎನ್.ಟಿ.ಆರ್ ಕುಟುಂಬದ ಜೊತೆಗಿನ ತಮ್ಮ ಭಾಂಧವ್ಯದ ಕ್ಷಣಗಳನ್ನ ನೆನಪು ಮಾಡಿಕೊಂಡ ಅಪ್ಪು ’ ಎನ್.ಟಿ.ಆರ್ ಹಾಗೂ ರಾಜ್ ಕುಮಾರ್ ಸ್ನೇಹ ತುಂಬಾ ಹಳೆಯದು. ಒಮ್ಮೆ ನಾನು ಎನ್.ಟಿ.ಆರ್ ಉಪಯೋಗಿಸುತ್ತಿದ್ದ ಕಾರ್ ಕೇಳಿದ್ದಕ್ಕೆ, ಅಂದು ರಾತ್ರಿಯೇ ನಮ್ಮ ಮನೆಗೆ ಆ ಕಾರನ್ನ ಗಿಫ್ಟ್ ಆಗಿ ಕಳುಹಿಸಿಕೊಟ್ಟಿದ್ರು. ಇಂತಹ ಎನ್.ಟಿ.ಆರ್ ವಿಶಾಲ ಹೃದಯಕ್ಕೆ ಇನ್ನೇನು ಸಾಕ್ಷಿ ಬೇಕು ಹೇಳಿ’ ಎಂದ್ರು.ಚಿತ್ರದಲ್ಲಿ ಎನ್.ಟಿ.ಆರ್ ಪತ್ನಿಯ ಪಾತ್ರಕ್ಕೆ ಉಲಾಲಾ ಗರ್ಲ್ ವಿದ್ಯಾಬಾಲನ್ ಬಣ್ಣ ಹಚ್ಚಿದಾರೆ.

ಕ್ರಿಶ್ ನಿರ್ದೇಶನ ಸಿನಿಮಾದ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣಲಿದೆ ಎಂಬುದು ಚಿತ್ರತಂಡದ ವಾದ. ಈಗಾಗಲೇ ತೆಲುಗಿನಲ್ಲಿ ದಾಖಲೆ ಮೊತ್ತಕ್ಕೆ ಸ್ಯಾಟೆಲೈಟ್ ಹಕ್ಕುಗಳು ಮಾರಾಟವಾಗಿರುವುದರಿಂದ ಬಿಡುಗಡೆಗೂ ಮುಂಚೆಯೇ ಹೈಪ್ ಸೃಷ್ಟಿಯಾಗಿಬಿಟ್ಟಿದೆ. ಸದ್ಯದಲ್ಲೇ ಈ ಸಿನಿಮಾದ ಸೀಕ್ವೇಲ್ ’ಎನ್.ಟಿ.ಆರ್;ಮಹಾನಾಯುಕುಡು’ ಸಿನಿಮಾದ ಶೂಟಿಂಗ್ ಕೂಡ ಬಿರುಸಿನಿಂದ ನಡೆಯುತ್ತಿದೆ. ಒಟ್ಟಿನಲ್ಲಿ ಬಾಲಯ್ಯನ ಈ ಎನ್.ಟಿ.ಆರ್ ಅವತಾರವನ್ನ ಪ್ರೇಕ್ಷಕ ಯಾವ ರೀತಿಯಲ್ಲಿ ರಿಸೀವ್ ಮಾಡ್ತಾನೆ ಹಾಗೂ ಸಿನಿಮಾ ಬಿಡುಗಡೆಯಾದ ಮೇಲೆ ಎಷ್ಟು ರೆಕಾರ್ಡ್‌ಗಳು ಧೂಳಿಪಟವಾಗುತ್ತೆ ಅನ್ನೋದೆ ಟಾಲಿವುಡ್‌ನ ಸದ್ಯದ ಕುತೂಹಲ.

LEAVE A REPLY

Please enter your comment!
Please enter your name here