Home District ಹೊಸ ಬಾಂಬ್ ಸಿಡಿಸಿದ HDK..!? “ನನ್ನನ್ನು ಹಂತ ಹಂತವಾಗಿ ಮುಗಿಸಲು ಯತ್ನ ನಡೆದಿತ್ತು” ರೆಡ್ಡಿ ಬ್ರದರ್ಸ್..?

ಹೊಸ ಬಾಂಬ್ ಸಿಡಿಸಿದ HDK..!? “ನನ್ನನ್ನು ಹಂತ ಹಂತವಾಗಿ ಮುಗಿಸಲು ಯತ್ನ ನಡೆದಿತ್ತು” ರೆಡ್ಡಿ ಬ್ರದರ್ಸ್..?

699
0
SHARE

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. 11 ವರ್ಷಗಳ ಹಿಂದೆ ರೆಡ್ಡಿ ಬ್ರದರ್ಸ್ ನನ್ನ ಮುಗಿಸಲು ಮುಂದಾಗಿದ್ದರು ಎಂದು ಗಂಭೀರ ಆರೋಪಿಸಿದ್ದಾರೆ.ನಾನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ 2 ತಿಂಗಳಲ್ಲೇ ಬಿಜೆಪಿ ನಾಯಕರು ನನ್ನ ಮೇಲೆ 150 ಕೋಟಿ ಹಣದ ಗಣಿ ಲಂಚ ಆರೋಪ ಮಾಡಿದ್ದರು.

ಬಳ್ಳಾರಿಯಲ್ಲಿ ನಾನು ಶ್ರೀರಾಮುಲುರನ್ನ ಮುಗಿಸಲು ಸುಪಾರಿ ಕೊಟ್ಟಿದ್ದನೇಂದು ಕೇಸು ದಾಖಲಿಸಿದ್ದರು, ಆಗ ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ವೈ ಯಾಕೆ ಮೌನ ತಾಳಿದ್ದರು ಎಂದು ಕುಮಾಸ್ವಾಮಿಯವರು ಪ್ರಶ್ನೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಎಚ್ ಡಿಕೆ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ರು.
ನಾನು ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ವಿಧಾನಸೌಧದಲ್ಲಿ ನನ್ನ ಬಳಿ ಮಾತನಾಡಲು 10 ನಿಮಿಷ ಕಾಲಾವಕಾಶ ಕೇಳಿದ್ದರು, ನಾನು ಅವರೊಂದಿಗೆ ಮಾತನಾಡಿದ್ದೇ. ಬಳಿಕ 2 ತಿಂಗಳಲ್ಲೇ ನಾನು ಮುಖ್ಯಮಂತ್ರಿಯಾದೆ.

ಮುಖ್ಯಮಂತ್ರಿಯಾದ 2 ತಿಂಗಳಲ್ಲೇ ಬಿಜೆಪಿಯವರು ಸದನಲ್ಲಿ ನನ್ನ ಮೇಲೆ 150 ಕೋಟಿ ಗಣಿಹಗರಣವನ್ನ ಮಾಡಿದ್ದರು, ನನ್ನನು ರಾಜಕೀಯವಾಗಿ ಮುಗಿಸಲು ಯತ್ನಸಿದರು. ಆಗ ನನ್ನ ಮೇಲೆ ಶ್ರೀರಾಮುಲು ಬಳ್ಳಾರಿಯಲ್ಲಿ ಸಿಎಂ ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಕಂಪ್ಲೆಂಟ್ ಕೊಟ್ಟಿದ್ದರು, ಆಗ ಬಿ,ಎಸ್ ಯಡಿಯೂರಪ್ಪ ಎಲ್ಲಿ ಹೋಗಿದ್ದರು ಎಂದರು..

LEAVE A REPLY

Please enter your comment!
Please enter your name here