Home Cinema ಹೌದೇನ್ನುತ್ತೀರಿ ಮದಕರಿನಾಯಕನ ಬಗ್ಗೆ “ದರ್ಶನ್” ನುಡಿದ ಆ ಮಹಾಸತ್ಯಕ್ಕೆ..! ಮದಕರಿನಾಯಕನಿಗೆ ಜಾತಿಬಣ್ಣ:ಅವರು ಮುಟ್ಟಾಳರು,ಅಂದಿದ್ದ್ಯಾವ ಕಾರಣಕ್ಕೆ..!

ಹೌದೇನ್ನುತ್ತೀರಿ ಮದಕರಿನಾಯಕನ ಬಗ್ಗೆ “ದರ್ಶನ್” ನುಡಿದ ಆ ಮಹಾಸತ್ಯಕ್ಕೆ..! ಮದಕರಿನಾಯಕನಿಗೆ ಜಾತಿಬಣ್ಣ:ಅವರು ಮುಟ್ಟಾಳರು,ಅಂದಿದ್ದ್ಯಾವ ಕಾರಣಕ್ಕೆ..!

475
0
SHARE

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ‘ಮದಕರಿ ನಾಯಕ’ನ ಬಗ್ಗೆ ಸಿನಿಮಾ ಮಾಡುವ ಕುರಿತು ದೊಡ್ಡ ಚರ್ಚೆಯಾಗುತ್ತಿದೆ. ಈ ಇಬ್ಬರು ನಟರು ಮದಕರಿ ನಾಯಕನ ಬಯೋಪಿಕ್ ಮಾಡುವುದಾಗಿ ಘೋಷಿಸಿದ್ದಾರೆ. ಆದ್ರೆ, ಈ ಎರಡು ಚಿತ್ರಗಳಿಗೂ ಮುಂಚೆ ಚಿತ್ರದುರ್ಗದ ಮತ್ತೊಬ್ಬ ಪಾಳೆಗಾರನ ಕುರಿತು ಇನ್ನೊಂದು ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿದೆ. ಅರೇ.. ಅದ್ಯಾವ ಸಿನಿಮಾ…! ಆ ಪಾಳೇಗಾರ ಯಾರು..?

ಚಂದನವನದಲ್ಲಿ ದರ್ಶನ್, ಸುದೀಪ್ ಮದಕರಿ ನಾಯಕನ ಸಿನಿಮಾ ಸೆಟ್ಟೋರೊದಕ್ಕೂ ಮುನ್ನವೇ ಜೇಜಾನ್ ಸದ್ದು ಮತ್ತು ಸುದ್ದಿ ಮಾಡಿತ್ತು. ಆದ್ರೆ ಈ ಇಬ್ಬರು ಸ್ಟಾರ್‌ಗಳ ಸಿನಿಮಾಗಳು ಸೆಟ್ ಏರೋದಕ್ಕೂ ಮೊದಲೇ ಬಿಚ್ಚುಗತ್ತಿಯ ಅಬ್ಬರ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ.ಯಸ್… ಇಂದು ಚಿತ್ರದುರ್ಗದ ಪಾಳೇಗಾರನ ಬಿಚ್ಚುಗತ್ತಿಯ ಭರಮಣ್ಣನ ಸಿನಿಮಾ ಸೆಟ್ಟೇರಿದೆ. ಇದು ಬಿ ಎಲ್ ವೇಣು ಅವರು ಬರೆದಿರೋ ಕಾದಂಬರಿ ಆಧಾರಿತ ಸಿನಿಮಾ.

ಇವ್ರದ್ದೇ ಕಾದಂಬರಿ ಆಧರಿತ ಚಿತ್ರದಲ್ಲಿ ದರ್ಶನ್ ಮದಕರಿ ನಾಯಕರ ಸಿನಿಮಾ ಮಾಡುತ್ತಿದ್ದು. ಈಗ ದರ್ಶನ್‌ಗೂ ಮೊದಲೇ ರಾಜವರ್ಧನ್ ಚಿತ್ರದುರ್ಗದ ಪಾಳೆಗಾರನಾಗಿದ್ದಾರೆ. ವಿಶೇಷ ಅಂದ್ರೆ ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆದ ಚಿತ್ರದ ಮುಯೂರ್ತದಲ್ಲಿ ದರ್ಶನ್ ಕ್ಲಾಪ್ ಮಾಡಿದ್ರು, ಚಿತ್ರತಂಡಕ್ಕೆ ಶುಭಕೋರಿದ್ರು.ದರ್ಶನ್, ಸ್ಯಾಂಡಲ್‌ವುಡ್‌ನ ನಯಾ ಯಜಮಾನ. ಹೊಸಬರಿಗೆ ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹಿಸುವ ಸಾರಥಿ. ಬಿಚ್ಚುಗತ್ತಿಗೆ ಪ್ರೀತಿಯಿಂದ ಚಿತ್ರಕ್ಕೆ ಚಾಲನೆ ನೀಡುವ ಮೂಲಕ ಕ್ಲಾಪ್ ಮಾಡಿ ಶುಭಕೋರಿದ್ದಾರೆ.

ಈ ಸಮಯದಲ್ಲಿ ದರ್ಶನ್ ರಾಜವರ್ಧನ್‌ಗೆ ಒಂದು ಸಲಹೆಯನ್ನು ನೀಡಿದ್ದಾರೆ. ಕುರುಕ್ಷೇತ್ರ ದರ್ಶನ್ ೫೦ನೇ ಸಿನಿಮಾದಲ್ಲಿ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದ್ರೆ ರಾಜವರ್ಧನ್‌ಗೆ ೪ನೇ ಚಿತ್ರದಲ್ಲೇ ಐತಿಹಾಸಿಕ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸಗೊಂಡಿರುವ ದಚ್ಚು. ಇಷ್ಟು ಬೇಗ ಉತ್ತಮ ಕಥೆ, ಮತ್ತು ಅವಕಾಶದಲ್ಲಿ ಚೆನ್ನಾಗಿ ನಟಿಸುವಂತೆ ಹುರಿದುಬ್ಬಿಸಿದ್ದಾರೆ, ಪ್ರೀತಿಯಿಂದ ಬೆನ್ನುತಟ್ಟಿದ್ದಾರೆ.

ಮದಕರಿನಾಯಕನಿಗೆ ‘ಜಾತಿ’ಬಣ್ಣ ಅವರು “ಮುಟ್ಟಾಳ”ರು, ಅಂದಿದ್ದ್ಯಾವ ಕಾರಣಕ್ಕೆ..!:ಬಿಚ್ಚುಗತ್ತಿಗೆ ಬಿ.ಎಲ್.ವೇಣು ಕಥೆ-ಚಿತ್ರಕಥೆ ಚಿತ್ರಕ್ಕಿದೆ. ಈಗಾಗಲ್ಲೇ ಮದಕರಿ ನಾಯಕ,ಕಿತ್ತೂರು ರಾಣಿ ಚೆನ್ನಮ್ಮ ಚಿತ್ರಗಳ ಕಥೆ ಬರೆದಿರುವ ವೇಣು. ಬಿಚ್ಚುಗತ್ತಿ ಐತಿಹಾಸಿಕ ಚಿತ್ರದಲ್ಲಿ ಚಿತ್ರದುರ್ಗದ ಬಿಚ್ಚುಗತ್ತಿ ಭರಮಣ್ಣ ನಾಯಕನ ಆಡಳಿತ ಮತ್ತು ಅವರ ವೀರತ್ವದ ಬಗ್ಗೆ ಕಥೆ ಸಿದ್ದಪಡಿಸಿದ್ದಾರೆ. ಅಲ್ಲದೆ ಮದಕರಿ ನಾಯಕನ ಸಿನಿಮಾದಲ್ಲಿ ವಾಲ್ಮೀಕಿ ಜನಾಂಗದವರೆ ಸಿನಿಮಾದಲ್ಲಿ ನಟಿಸಬೇಕೆನ್ನುವ ಸ್ವಾಮೀಜಿಗಳು ಮುಟ್ಟಾಳರು- ಅವಿವೇಕಿಗಳು ಎನ್ನುವ ಮಾತುಗಳನ್ನಾಡಿದ್ದಾರೆ.

ಇನ್ನು ಹರಿ ಸಂತೋಷ್ ಚಿತ್ರದ ನಿರ್ದೇಶಕ. ಈ ಹಿಂದೆ ಕಾಲೇಜ್ ಕುಮಾರ, ವಿಕ್ಟರಿ-೨ ಸಿನಿಮಾ ಯಶಸ್ಸಿನ ನಂತರ ಹರಿ ಸಂತೋಷ್ ಐತಿಹಾಸಿಕ ಚಿತ್ರವನ್ನು ಮಾಡಲು ಮುಂದಾಗಿದ್ದಾರೆ. ಸದಾ ಹೋಸ ಫಾಮ್ಯಾಟ್‌ಗಳನ್ನು ಆಯ್ಕೆ ಮಾಡುಕೊಂಡು ಯಶಸ್ವಿ ಸಿನಿಮಾ ಮಾಡುವ ಹಂಬದಲ್ಲಿರುವ ಸಂತೋಷ್ ಈ ಭಾಗಿ ಚಿತ್ರದುರ್ಗದ ಪಾಳೆಗಾರನ ಚಿತ್ರಕ್ಕೆ ನಿರ್ದೇಶಿಸುವ ಉತ್ಸ್ತುಕತೆಯಲ್ಲಿದ್ದಾರೆ. ಬಿಚ್ಚುಗತ್ತಿ ಚಿತ್ರದ ಕಥೆ ನನ್ನ ಪಾಲಿಗೆ ಸಿಕ್ಕಿದ್ದು ನನ್ನ ಅದೃಷ್ಟ ಎನ್ನುವ ಹರಿ ಸಂತೋಷ್ ಚಿತ್ರದ ಬಗ್ಗೆ ಹೇಳೋದು ಹೀಗೆ.

ರಾಜವರ್ಧನ್ ಚಿತ್ರದ ನಾಯಕ. ಹಿರಿಯ ನಟ ಡಿಂಗ್ರಿನಾಗರಾಜ್ ಪುತ್ರ ರಾಜವರ್ಧನ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐತಿಹಾಸಿಕ ಚಿತ್ರದಲ್ಲಿ ರಾಜವರ್ಧನ್‌ಗೆ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದು. ಈ ಚಿತ್ರಕ್ಕಾಗಿ ರಾಜವರ್ಧನ್ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರಂತೆ.ಚಿತ್ರದುರ್ಗವನ್ನು ೧೫೬೮ರಿಂದ ೧೭೭೯ರವರೆಗೆ ಆಳಿದ ೧೩ಮಂದಿ ಪಾಳೆಗಾರರಲ್ಲಿ ಪ್ರಥಮ ಪಾಳೇಗಾರ ರಾಜಾ ಬಿಚ್ಚುಗತ್ತಿ ತಿಮ್ಮಣ್ಣ ನಾಯಕನಾಗಿದ್ದು.

ದಳವಾಯಿ ದಂಗೆ ಅನ್ನೋ ಅಡಿ ಬರಹವಿರುವ ಬಿಚ್ಚುಗತ್ತಿ ಈಗ ಚಾಪ್ಟರ್ ೧ರ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದ್ದು. ಸೆಟ್‌ನಲ್ಲಿ ಇಂದಿನಿಂದ ಚಿತ್ರದ ಚಿತ್ರೀರಕಣ ಪ್ರಾರಂಭವಾಗಿದೆ. ೧೫ನೇ ಶತಮಾನದಲ್ಲಿ ಪಾಳೇಗಾರರ ಆಳ್ವಿಕೆಯಲ್ಲಿ ಯಾವರೀತಿ ಆಸ್ಥಾನಗಳಿದ್ವು ಎಂಬುದನ್ನು ತೆರೆಮೇಲೆ ತರಲಿದೆ. ಅದೇ ರೀತಿ ದೊಡ್ಡ ಸೆಟ್‌ಗಳನ್ನು ಹಾಕಿ, ಮಂದ ಬೆಳಕಿನಲ್ಲಿ ಪಾಳೇಗಾರನ ಸಂಸ್ಕೃತಿಯ ಅನಾವರಣ ಮಾಡಲಿದೆ.

ಬಹುತೇಕ ಶೂಟಿಂಗ್ ಚಿತ್ರದುರ್ಗದ ಸುತ್ತಮುತ್ತ ನಡೆಯಲಿದ್ದು, ಚಿತ್ರಕ್ಕೆ ಹಂಸಲೇಖಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದೇನೇ ಇದ್ರು.. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಚಿತ್ರದುರ್ಗದ ರಾಜರು,ಪಾಳೇಗಾರರ ಸಿನಿಮಾಗಳು ಸೆಟ್ಟೇರುತ್ತಿದ್ದು, ಫಸ್ಟ್ ಲುಕ್‌ನಲ್ಲೇ ಭರವಸೆ ಹುಟ್ಟಿಸಿರುವ ಬಿಚ್ಚುಗತ್ತಿ ಮುಂದಿನದಿಗಳಲ್ಲಿ ಬಿಚ್ಚುಗತ್ತಿಯ ಅಬ್ಬರ ಇನ್ಯಾವ ರೀತಿ ಇರಲಿದೆ ಕಾದುನೋಡುವಂತೆ ಮಾಡ್ತಿದೆ.

LEAVE A REPLY

Please enter your comment!
Please enter your name here