Home Crime 100-200 ಬಾಲೆನ್ಸ್ ಇದ್ರೂ ಬಡವರ ಮನೇಲಿ ಕರೆಂಟ್ ಕಟ್..! ಲಕ್ಷಗಟ್ಟಲೆ ಬಿಲ್ ಇದ್ರೂ ಶ್ರೀಮಂತರ ಮನೆ...

100-200 ಬಾಲೆನ್ಸ್ ಇದ್ರೂ ಬಡವರ ಮನೇಲಿ ಕರೆಂಟ್ ಕಟ್..! ಲಕ್ಷಗಟ್ಟಲೆ ಬಿಲ್ ಇದ್ರೂ ಶ್ರೀಮಂತರ ಮನೆ ಕಡೆ BESCOM ತಲೆ ಹಾಕಲ್ಲಾ ಏಕೆ..?!!!

2374
0
SHARE

ಬೇಸಿಗೆ ಶುರುವಾಗುತ್ತಿದ್ದಂತೆ ಬೆಸ್ಕಾಂ ಜನ್ರಿಗೆ ಪದೇ ಪದೇ ಕರೆಂಟ್ ಶಾಕ್ ಕೊಡ್ತಿರೋದು ಗೊತ್ತಿರೋ ವಿಷಯ.. ಆದ್ರೆ ತಿಂಗಳಿಗೆ ಸರಿಯಾಗಿ ಕರೆಂಟ್ ಬಿಲ್ ಕಟ್ದೇ ಹೊದ್ರೆ, ಮನೆಮುಂದೆ ನಿತ್ಕೊಂಡು ಸಾಲಕೊಟ್ಟೋರು ವಸೂಲಿ ಮಾಡೋದ್ಕಿಂತ ಒಂದು ಕೈ ಜಾಸ್ತಿನೇ ಆವಾಜ್ ಹಾಕ್ತಾರೆ…

ಆದೇ ಸಿಬ್ಬಂದಿಗಳು ಪ್ರಭಾವಿಗಳು, ದೊಡ್ಡವರ ಮನೆಹತ್ತಿರ ತಲೆ ಹಾಕಿ ಮಲ್ಗೋಲ್ಲ.. ಹೀಗಾಗಿ ಪ್ರಭಾವಿಗಳಿಗೆ ಹೆದರಿ ಸಿಬ್ಬಂದಿಗಳು ಸುಮ್ಮನಾಗಿದ್ದಕ್ಕೆ ಇವತ್ತು ಬೆಸ್ಕಾಂಗೆ ಕೋಟ್ಯಾಂತರ ರೂ ನಷ್ಟವಾಗ್ತಿದೆ.ತಿಂಗಳಾದ್ರೆ ಸಾಕು, ಕರೆಂಟ್ ಬಿಲ್ ಕೊಡೋಕೆ ಬೆಸ್ಕಾಂ ಅಧಿಕಾರಿಗಳು ತುದಿಗಾಲಲ್ಲಿ ನಿಂತಿರ್ತಾರೆ…

ನೀವು ಮನೆಯಲ್ಲಿ ಇದ್ರೂ ಒಕೆ, ಇಲ್ದೆ ಇದ್ರೂ ಸರಿ.. ಬಂದಿರೋ ಬಿಲ್ ಅನ್ನೋ ನಿಮ್ಮ ಕಣ್ಣಿಗೆ ಕಾಣುವ ಹಾಗಿ ಡೋರ್ ಗೆ ಹಾಕಿ ಹೋಗ್ತಾರೆ.. ಸರಿಯಾದ ಸಮಯಕ್ಕೆ ಬಿಲ್ ಕಟ್ಟಿಲ್ಲ ಅಂದ್ರೆ ಮನೆ ಮುಂದೆ ಬಂದು ಮಾನ ಮರ್ಯಾದೆ ಹರಾಬಡವರಿಗೊಂದು, ಜಾಕ್ತಾರೆ. ಆದ್ರೆ ಬೆಂಗಳೂರಿನ ಸೌತ್ ಡಿವಿಜನ್ ಅಲ್ಲಿರೋ ಬೆಸ್ಕಾಂ ಅಧಿಕಾರಿಗಳು ಶ್ರೀಮಂತರಿಗೊಂದು ತಾರತಮ್ಯ ಮಾಡುತ್ತಿದ್ದಾರೆ…

ಹೌದು, ಬೆಂಗಳೂರು ಸೌತ್ ಡಿವಿಜನ್ ನಲ್ಲಿ ಬೆಸ್ಕಾಂ ಚೀಫ್ ಇಂಜಿನಿಯರ್ ಹರೀಂದ್ರ ಸ್ವಾಮಿ ಹಾಗೂ ಸಿಬ್ಬಂದಿಗಳು.. ಜೆಡಿಎಸ್ ಮುಖಂಡ ಶಿವರಾಮೇಗೌಡ, ಡಾ.ರೂಪಾ ಸುರೇಶ್ ಅಂತಾ ಪ್ರಭಾವಿಗಳು ಲಕ್ಷ ಲಕ್ಷ ಬಿಲ್ ಕಟ್ಟದೇ ಹೋದ್ರು, ಅವರ ಮನೆ ಕಡೆ ತೀರುಗಿ ನೋಡಲ್ಲ.. ಡಾ.ರೂಪ ಸತೀಶ್ ಹಾಗೂ ಶಿವರಾಮೇಗೌಡ ಅವರ ಬಿಲ್ ಲಕ್ಷಾಗಂಟಲೇ ಇದ್ರೂ ಮೂರು ತಿಂಗಳಿಂದ ಭಾಕಿ ಉಳಿಸಿಕೊಂಡಿದೆ…

ಇನ್ನು ಬೆಂಗಳೂರಿನ ಸೌತ್ ಡಿವಜನ್ ಒಂದರಲ್ಲೇ 3 ರಿಂದ ನಾಲ್ಕು ಕೋಟಿ ಕರೆಂಟ್ ಬಿಲ್ ವಸೂಲಾತಿ ಭಾಕಿ ಇದೆ.. ಇದರಲ್ಲಿ 10 ಸಾವಿರಕ್ಕಿಂತ ಮೆಲ್ಪಟ್ಟವರೇ ಹೆಚ್ಚಾಗಿದ್ದಾರೆ.. ಕಳೆದ ಮೂರು ತಿಂಗಳಿಂದ 18 ಲಕ್ಷದ 67 ಸಾವಿರ ಹಣವನ್ನು ಗ್ರಾಹಕ ಮೇಲೆ ಬಿಟ್ಟಿದೆ…

ಅಲ್ದೆ ಪ್ರಭಾವಿಗಳ ಮನೆ, ಕಾಂಪ್ಲೇಕ್ಸ್ ಗಳಲ್ಲೂ ಲಕ್ಷ ದಾಟುವ ವರೆಗೂ ಐದಾರು ತಿಂಗಳ ಬಾಕಿ ಉಳಿಸಿಕೊಂಡು ಬರುತ್ತೆ 10, 15 ಲಕ್ಷ ದಾಟಿದ ಮೇಲೆ ಇಎಂಐ ಮೂಲಕ ಕಟ್ಕೊಂಡು ಹೋಗಿ ಅಂತಾ ಬೆಸ್ಕಾಂ ಅಧಿಕಾರಿಗಳು ಪ್ರಭಾವಿಗಳಿಗೆ ಅಫರ್ ಸಹ ಕೊಡ್ತಾರೆ…

ಒಟ್ಟಾರೆ, ಬೆಸ್ಕಾಂ ಅಧಿಕಾರಿಗಳು ಬಡವರ ಮೇಲೆ ದರ್ಪ ತೋರಿ ತಮ್ಮ ಅಧಿಕಾರಿವನ್ನು ಚಲಾಯಿಸುತ್ತಿದ್ದಾರೆ.. ಅದೇ ಪ್ರಭಾವಿಗಳ ಕರೆಂಟ್ ಬಿಲ್ ಬ್ಯಾಲೆನ್ಸ್ ಮುಂದಿನ ದಿನಗಳಲ್ಲಿ ಕೋಟಿ ರೂಪಾಯಿ ದಾಟಿದ್ರು ಅಚ್ಚರಿ ಪಡಬೇಕಿಲ್ಲ…

LEAVE A REPLY

Please enter your comment!
Please enter your name here