Home Cinema 1000 ಕೋಟಿ ಸರದಾರನಾದ್ರೂ ಕಮ್ಮಿಯಾಯ್ತೇಕೆ ರಜಿನಿ ದರ..! ಮುಖ್ಯಮಂತ್ರಿಯಾಗಿ ಮಿಂಚ್ತಾರೆ ತಲೈವಾ…! ರಜನಿ ಲೆಕ್ಕಚಾರಕ್ಕೆ ಫ್ಯಾನ್ಸ್...

1000 ಕೋಟಿ ಸರದಾರನಾದ್ರೂ ಕಮ್ಮಿಯಾಯ್ತೇಕೆ ರಜಿನಿ ದರ..! ಮುಖ್ಯಮಂತ್ರಿಯಾಗಿ ಮಿಂಚ್ತಾರೆ ತಲೈವಾ…! ರಜನಿ ಲೆಕ್ಕಚಾರಕ್ಕೆ ಫ್ಯಾನ್ಸ್ ಅಂದ್ರು ವಾರೆ ವ್ಹಾ..!

2783
0
SHARE

ಭಾರತೀಯ ಚಿತ್ರರಂಗದ ಏಕೈಕ ಸೂಪರ್‌ಸ್ಟಾರ್ ರಜನಿಕಾಂತ್ ಮಾರ್ಕೆಟ್ ಏನು ಅಂತ ಎಲ್ಲರಿಗೂ ಗೊತ್ತೆ ಇದೆ. ಆದರೆ ಈಗ ತಲೈವಾ ತಮ್ಮ ಮನಸ್ಸಿನಲ್ಲಿರುವ ಆಸೆಯನ್ನ ಈಡೇರಿಸಿಕೊಳ್ಳೊಕೆ ತಮ್ಮ ಮಾರ್ಕೆಟ್‌ಅನ್ನೇ ಬದಿಗಿಟ್ಟು ಸಿನಿಮಾ ಪ್ರೀತಿಯನ್ನ ಮೆರೆದಿದ್ದಾರೆ.

ಘಜನಿ ಖ್ಯಾತಿಯ ಮುರುಗದಾಸ್ ಹೊಸ ಸಿನಿಮಾಗೆ ಅಸ್ತು ಎಂದಿರುವ ರಜನಿ ಈ ಚಿತ್ರಕೊಸ್ಕರ ತಮ್ಮ ಪೆಮೆಂಟ್‌ನಲ್ಲಿ ಡಿಸ್ಕೌಂಟ್ ನೀಡಿದ್ದಾರೆ. ಈ ಸಿನಿಮಾದಲ್ಲಿ ರಜನಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ತಿರೋದೆ ಈ ವಿನಾಯಿತಿಯ ಹಿಂದಿರೋ ಅಸಲಿ ಸೀಕ್ರೆಟ್ ಕಣ್ರಪ್ಪ ಅಂತಿದಾರೆ ರಾಜಕೀಯ ಘಟನುಘಟಿಗಳು. ಆದರೆ ತಾವು ಮಾಡ್ತೀರೊ ಸಿನಿಮಾದ ಸ್ಟೋರಿಯ ಬಗ್ಗೆಯಾಗಲಿ, ರಜನಿ ಕ್ಯಾರೆಕ್ಟರ್ ಡಿಸೈನ್ ಬಗ್ಗೆಯಾಗಲಿ ಮಾಸ್ಟರ್‌ಮೈಂಡ್ ಮುರುಗದಾಸ್ ಎಲ್ಲೂ ಕೂಡ ತುಟಿಕ್‌ಪಿಟಿಕ್ ಎಂದಿಲ್ಲ ಬಿಡಿ.

ನಮ್ಮ ಸಿನಿಮಾಲ್ಯಾಂಡ್‌ನಲ್ಲಿ ಯಾವುದಾದ್ರೂ ಸಿನಿಮಾ ಗಲ್ಲಪೆಟ್ಟಿಗೆ ದೋಚಿಬಿಟ್ರೆ ಆ ಸಿನಿಮಾ ಹೀರೊವಿನ ಕಾಲ್‌ಶೀಟ್ ಆಕಾಶ ಮುಟ್ಟುತ್ತೆ. ಅಲ್ಲದೇ ನಾನು ಕೇಳಿದಷ್ಟು ಸಂಭಾವನೆ ಕೊಟ್ರೆ ಮಾತ್ರ ಸಿನಿಮಾ ಮುರ್ಹೂತ ಶುರುವಾಗುತ್ತೆ ನೋಡಿ ಎನ್ನುವ ಜಂಭದ ಶರತ್ತು ಹಾಕ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಜನಿಕಾಂತ್ ಕೊಡೋ ಜಸ್ಟ್ ಒಂದು ಸಿಗ್ನಲ್‌ಗೆ ಖಾಲಿ ಚೆಕ್ ಕೊಡೋಕೆ ರೆಡಿಯಿರುವ ನಿರ್ಮಾಪಕರಿರುವಾಗ ರಜನಿ ಯಾಕೆ ಈ ದೊಡ್ಡ ಗುಣ ತೋರಿಸಿದ್ರು ಅನ್ನೋದೆ ಒಂದು ಬಿಗ್ ಸರ್‌ಪ್ರೈಸ್. ’ದಾಲ್ ಮೇ ಕುಚ್ ಕಾಲಾ ಹೇ’ ಎನ್ನುವುದು ಮಾತ್ರ ನಮ್ಮ ಕಣ್ಣುಗಳಿಗೆ ಪಕ್ಕಾ ಆಗ್ತಿದೆ.

ಹೌದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಿ, ಬರೀ ಏಳೇ ತಿಂಗಳಿನಲ್ಲಿ ೧೦೦೦ ಕೋಟಿ ವ್ಯವಹಾರ ಮಾಡಿದ ರಜಿನಿಗೆ, ಅದ್ಯಾಕೋ ೨.೦ ಗಳಿಕೆ ಕಂಡು ಸಮಾಧಾನವಾಗಿಲ್ಲ. ರಜಿನಿ ಲೆಕ್ಕದಲ್ಲಿ ೨.೦ ಇನ್ನೊಂದಷ್ಟು ಕೋಟಿಗಳನ್ನ ಕೊಳ್ಳೆ ಹೊಡೆಯಬೇಕಿತ್ತು. ಆದ್ರೆ ಅಂದುಕೊಂಡಂತೆ ಆಗಲಿಲ್ಲ. ಹಾಗಾಗೇ, ರಜಿನಿ.. ಮುರಗಾದಾಸ್, ಕೊಡಲು ಸಿದ್ಧವಾಗಿದ್ದರು, ಹಿಂದಿನ ಚಿತ್ರಗಳಿಗೆ ತಗೆದುಕೊಂಡ ಸಂಭಾವನೆ ತೆಗೆದುಕೊಂಡಿಲ್ಲ. ಬದ್ಲಾಗಿ, ತಮ್ಮ ಸಂಭಾವನೆಯನ್ನ ಕಮ್ಮಿ ಮಾಡಿಕೊಂಡು ಮುರಗಾದಾಸ್‌ಗೆ ಕಾಲ್ ಶೀಟ್ ಕೊಟ್ಟಿದ್ದಾರೆ ರಜಿನಿ.

ಅಂದ ಹಾಗೇ ಸಿನಿಮಾ ನಿವೃತ್ತಿ ಘೋಷಿಸೋ ಸ್ಟೆಜ್‌ನಲ್ಲಿದ್ದ ರಜನಿ ಹೀಗೆ ಮುರುಗದಾಸ್ ಸಿನಿಮಾ ಒಪ್ಪಿಕೊಂಡಿರುವ ಹಿಂದೆ ಒಂದು ಪೊಲಿಟಿಕಲ್ ಡೆವಲಪ್‌ಮೆಂಟ್‌ನ ಉದ್ದೇಶ ಕೂಡ ಅಡಗಿದೆ. ರಾಜಕೀಯ ನಾಯಕನೊಬ್ಬನ ಲೈಫ್ ಸುತ್ತಾ ತಿರುಗೋ ಸಿನಿಮಾ ಸ್ಟೋರಿ ರಜನಿಯ ಹೊಸ ಪಕ್ಷಕ್ಕೆ ಪ್ಲಸ್ ಆಗ್‌ಬೋದು ಎನ್ನುವುದೇ ರಜನಿಯ ಸುಪ್ತಮನಸ್ಸಿನ ಪ್ಲಾನಿಂಗ್. ಸ್ವಲ್ಪದಿನಗಳ ಹಿಂದೆಯಷ್ಟೇ ’ಮಕ್ಕಳ್ ನಿಧಿ ಮಂದ್ರಮ್’ ಎನ್ನುವ ತಮ್ಮ ಹೊಸ ರಾಜಕೀಯ ಪಕ್ಷಕ್ಕೆ ಚಾಲನೆ ಕೊಟ್ಟಿದ್ದ ರಜನಿ ಜನರಿಗೋಸ್ಕರ ಕೆಲಸ ಮಾಡ್ತೀನಿ ಅಂತ ಪ್ರಾಮಿಸ್ ಮಾಡಿದ್ರು.

ಈ ಮೂಲಕ ತಮ್ಮ ಕುಚುಕು ಗೆಳೆಯ ಕಮಲ್‌ಹಾಸನ್‌ಗೂ ನಾನು ರಾಜಕೀಯ ಮಾಡ್ತೀನಿ ನೋಡಪ್ಪ ಅಂತ ಕಾಂಪಿಟೇಶನ್ ಬೆಂಕಿ ಹಚ್ಚಿಬಿಟ್ರು. ತಮಿಳುನಾಡಿನ ರಾಜಕೀಯವಲಯದಲ್ಲಿ ಬಿರುಗಾಳಿ ಎಬ್ಬಿಸಿದ ರಜನಿ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ರು ಅನ್ಸುತ್ತೆ. ಹಾಗಾಗೀ ಈಗ ಈ ಸಿನಿಮಾದ ಮೂಲಕವಾದ್ರೂ ಮುಖ್ಯಮಂತ್ರಿಯಾಗಿ ಜನರಿಗೆ ಒಂದು ಸಣ್ಣ ಡೆಮೊ ತೋರಿಸುವ ಆಸೆ ಸೂಪರ್‌ಸ್ಟಾರ್ ರಜನಿಯದ್ದು.ಸದ್ಯಕ್ಕೆ ತಮ್ಮ ಮಗಳು ಸೌಂದರ್ಯ ಮದುವೆ ಓಡಾಟದಲ್ಲಿ ಬ್ಯುಸಿಯಿರುವ ರಜನಿ ಮಾರ್ಚ್ ಕೊನೆವಾರದಲ್ಲಿ ಮುರುಗದಾಸ್ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಜಾಯ್ನ್ ಆಗುವ ಸಾಧ್ಯತೆಗಳಿವೆ.

’ಸಿನಿಮಾ ಮಾಡೋ ಸೂಪರ್‌ಸ್ಟಾರ್‌ಗೆ ರಾಜಕೀಯ ಸೆಟ್ ಆಗಲ್ಲ ಬಿಡಿ’ ಎನ್ನುವ ತಮಿಳು ರಾಜಕಾರಣಿಗಳ ಬಿಸಿಬಿಸಿ ಟೀಕೆಗಳ ಮಧ್ಯೆಯೂ ರಜನಿ ಇಂತಹ ಪ್ರಯತ್ನಕ್ಕೆ ಕೈ ಹಾಕಿರೋದು ರಜನಿ ತಾಕತ್ ಏನು ಅಂತ ತೋರಿಸುತ್ತೆ. ಇನ್ನು ಮುರುಗದಾಸ್ ಹೊಸ ಚಿತ್ರಕ್ಕೆ ’ನರಕ್ಕಲಿ’ ಎನ್ನುವ ಟೈಟಲ್ ಫಿಕ್ಸ್ ಆಗಿದ್ರೂ ಕೂಡ ಮುರುಗದಾಸ್ ಕೆಲವೇ ದಿನಗಳಲ್ಲಿ ಅಫೀಶಿಯಲ್ ಆಗಿ ಟೈಟಲ್ ಹೇಳ್ತೀನಿ ಅಂತ ನಯಾವಾಗಿ ಜಾರಿಕೊಂಡಿದ್ದಾರೆ.

ಒಟ್ಟಿನಲ್ಲಿ ರಜನಿಕಾಂತ್ ನಟನೆಯ ಇನ್ನೊಂದು ಸಿನಿಮಾ ಬರುತ್ತಪ್ಪಾ ಎನ್ನುವುದಷ್ಟೇ ಫ್ಯಾನ್ಸ್‌ಗಳ ಪಾಲಿನ ಹ್ಯಾಪಿನ್ಯೂಸ್. ಸೋ, ಈ ಪೊಲಿಟಿಕಲ್ ಜಾನರ್ ಹೊಂದಿರೋ ಸಿನಿಮಾನೇ ರಜನಿ ಕೊನೆ ಸಿನಿಮಾವಾಗುತ್ತಾ ಅಥವಾ ತಮ್ಮ ರಾಜಕೀಯ ಬೆಳವಣಿಗೆಗೋಸ್ಕರ ರಜನಿ ಈ ಸಿನಿಮಾವನ್ನ ಅಸ್ತ್ರವಾಗಿ ಬಳಸಿಕೊಳ್ತಿದ್ದರಾ ಅನ್ನೋದನ್ನ ಸಿನಿಮಾದಲ್ಲೇ ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here