Home Crime 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪವಿದ್ದ ಕಬ್ಬಡಿ ಕೋಚ್ ಲಾಡ್ಜ್‌ನಲ್ಲಿ ನೇಣಿಗೆ ಶರಣು..!?

13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪವಿದ್ದ ಕಬ್ಬಡಿ ಕೋಚ್ ಲಾಡ್ಜ್‌ನಲ್ಲಿ ನೇಣಿಗೆ ಶರಣು..!?

403
0
SHARE

ಆತ ಭಾರತೀಯ ಕ್ರೀಡಾ ಪ್ರಾಧಿಕಾರದ ಕಬಡ್ಡಿ ತರಬೇತುದಾರ. ಇತ್ತೀಚೆಗೆ ಆತನ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಅದರ ಬೆನ್ನಲ್ಲೆ ಕೋಚ್ ಈಗ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಲ್ಲದೇ, ಆತ ಸಾಯುವ ಮುನ್ನ ಡೆತ್ ನೋಟ್ ಕೂಡ ಬರೆದಿಟ್ಟಿದ್ದು, ಹೆಂಡತಿ ಮತ್ತು ಮಗನಿಗೆ ಕ್ಷಮೆ ಕೋರಿದ್ದಾರೆ.ಹೀಗೆ ಹೆಣವಾಗಿ ಪತ್ತೆಯಾಗಿರುವವರು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕಬಡ್ಡಿ ಕೋಚ್. ಹೆಸರು ರುದ್ರಪ್ಪ ಹೊಸಮನಿ ಅಂತ.

ರುದ್ರಪ್ಪ ಹೊಸಮನಿ ಬೆಂಗಳೂರು ಸಾಯಿ ಸ್ಫೋರ್ಟ್ಸ್ ಸೆಂಟರ್ ನಲ್ಲಿ ಕಬಡ್ಡಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಸೋಮವಾರ ಸಂಜೆ ದಾವಣಗೆರೆ ಜಿಲ್ಲೆಯ ಹರಿಹರದ ಎಸ್ ಎಮ್ ಲಾಡ್ಜ್ ನಲ್ಲಿ ರುದ್ರಪ್ಪ ಶವವಾಗಿ ಪತ್ತೆಯಾಗಿದ್ದಾರೆ. ರುದ್ರಪ್ಪ ಭಾನುವಾರವೇ ಬೆಂಗಳೂರಿನಿಂದ ಧಾರವಾಡಕ್ಕೆ ಹೊರಟಿದ್ದರು. ಆದರೆ, ಹರಿಹರದಲ್ಲೇ ಇಳಿದು ಲಾಡ್ಜ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ವಾಸ್ತವ್ಯ ಹೂಡಿದ್ದ ಲಾಡ್ಜ್ ನಲ್ಲಿಯೇ ಕಬಡ್ಡಿ ಕೋಚ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರುದ್ರಪ್ಪ ಹೊಸಮನಿ ಉತ್ತರ ಕರ್ನಾಟಕದ ಮೂಲದವರಾಗಿದ್ದು, ಇವರ ವಿರುದ್ಧ 13 ವರ್ಷದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರಕರಣ ಬೆಂಗಳೂರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ರುದ್ರಪ್ಪ ಹೊಸಮನಿ ನೇಣಿಗೆ ಶರಣಾಗಿದ್ದಾರೆ. ರುದ್ರಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹೆಂಡತಿ ದೇವಿಕಾ ಮತ್ತು ಮಗ ರಾಕೇಶ್ ಹೆಸರಲ್ಲಿ ಡತ್ ನೋಟ್ ಕೂಡ ಬರೆದಿಟ್ಟಿದ್ದಾರೆ. “ದೇವಿಕಾ, ರಾಕೇಶ್, ನನ್ನ ಕ್ಷಮಿಸಿ. ನಿಮಗೆ ಬಹಳ ತೊಂದರೆ ಮಾಡಿದೆ.

ನನ್ನ ಬಳಿ ಮೊಬೈಲ್ ಇಲ್ಲ. ನನ್ನ ಪರ್ಸ್ ನಲ್ಲಿ ನಿಮ್ಮಿಬ್ಬರ ಫೋಟೋನೂ ಇಲ್ಲ. ಬಹಳ ಬಹಳ ನೋಡಬೇಕೆನಿಸಿತ್ತು. ರಾಕೇಶ್ ಅವ್ವನ ಕಾಳಜಿ ವಹಿಸು. ನಿನ್ನ ಕೆಲಸದಲ್ಲಿ ಇನ್ನು ವೇಗವಾಗಿ, ದೃಢವಾಗಿ ಮುಂದುವರೆ. ದೇವರು ಒಳ್ಳೆಯದು ಮಾಡುತ್ತಾನೆ. ನನ್ನ ಅಮ್ಮನೂ, ಬಂಧುಗಳಿಗೆ ಹಾಗೂ ನನ್ನ ಆತ್ಮೀಯ ಗೆಳೆಯರಿಗೆ ನನ್ನ ಅಮೂಲ್ಯ ಧನ್ಯವಾದಗಳು. ನನ್ನ ದೇಹವನ್ನು ಯಾವುದಾದರೂ ಆಸ್ಪತ್ರೆಗೆ ದಾನ ಮಾಡಿ ಎಂದು ರುದ್ರಪ್ಪ ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಢಿದ್ದಾರೆ.

ರುದ್ರಪ್ಪ ಡೆತ್ ನೋಟ್‌ನಲ್ಲಿ ಕೆಲವು ಮೊಬೈಲ್ ನಂಬರ್ ಸಹ ಬರೆದಿದ್ದಾರೆ. ಡೆತ್ ನೋಟ್‌ನಲ್ಲಿ ತನ್ನ ಬಳಿ ಕಲಿಯುತ್ತಿದ್ದ ಕಬಡ್ಡಿ ಆಟಗಾರರು ಮತ್ತು ಕೋಚ್ ಗಳಿಗೂ ಧನ್ಯವಾದವನ್ನು ರುದ್ರಪ್ಪ ಅರ್ಪಿಸಿದ್ದಾರೆ. ಹೀಗಾಗಿ ರುದ್ರಪ್ಪ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತನ್ನ ಮೇಲೆ ಲೈಂಗಿಕ ಆರೋಪ ಕೇಳಿ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇನ್ನೂ ಈ ಬಗ್ಗೆ ರುದ್ರಪ್ಪ ತಂದೆ ಉಜ್ಜಿನಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಪ್ರಕರಣ ದಾಖಲಸಿಕೊಂಡಿರುವ ಹರಿಹರ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೇ, ಜ್ಞಾನ ಭಾರತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಿದ್ದಾರೆ.ಒಟ್ಟಿನಲ್ಲಿ, ದೇಶದಲ್ಲಿ ಮೀ ಟೂ ಅಭಿಯಾನ ಆರಂಭವಾಗಿದೆ. ಇದರ ಬೆನ್ನಲ್ಲೆ ಪ್ರತಿಭಾವಂತ ಕಬಡ್ಡಿ ಕೋಚ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕಿದೆ.

 

LEAVE A REPLY

Please enter your comment!
Please enter your name here