Home Crime 14ರ ಪೋರಿ ಮೇಲೆ ಕಾಮಾಂಧನ ಕಣ್ಣು.. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ..

14ರ ಪೋರಿ ಮೇಲೆ ಕಾಮಾಂಧನ ಕಣ್ಣು.. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ..

494
0
SHARE

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾರದ ಹಿಂದೆ ನಡೆದಿದ್ದ 9 ವರ್ಷದ ಬಾಲಕಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಅಮಾಯಕ ಬಾಲಕಿ ಜೀವ ತೆಗೆದ ಕೀಚಕನನ್ನು ಪೊಲೀಸರು ಬಂಧಿಸಿದ್ದಾರೆ.ಡಿಸೆಂಬರ್14ರಂದು ಚನ್ನಪಟ್ಟಣ ತಾಲೂಕಿನ ಮಡಬ ಗ್ರಾಮದ ಜಾತ್ರಾ ಮಹೋತ್ಸವಕ್ಕೆ ಫ್ರೆಂಡ್ಸ್ ಜೊತೆ ತೆರಳಿದ್ದ ಈ ಪೋರಿ, ಸೂರ್ಯೋದಯವಾಗುವ ವೇಳೆಗೆ ಶವವಾಗಿ ಪತ್ತೆಯಾಗಿದ್ಲು.

ಡಿ.16ರಂದು ಗ್ರಾಮದ ಕೆರೆಯಲ್ಲಿ ಬಾಲಕಿ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಬಾಲಕಿಯ ಮುಖ, ಕುತ್ತಿಗೆ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿತ್ತು. ಘಟನೆಯ ಹಿಂದೆ ಯಾರದ್ದೋ ಕೈವಾಡ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿ, ಬಾಲಕಿ ಸಾವಿಗೆ ನ್ಯಾಯ ಕೋಡಿಸಬೇಕೆಂದು ಆಗ್ರಹಿಸಿದ್ರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಡಾ. ರಾಮ್ ನಿವಾಸ್ ಸೆಪಟ್, ಚನ್ನರಾಯಪಟ್ಟಣ ಠಾಣೆ ಸಿಪಿಐ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ, ತನಿಖೆ ಕೈಗೊಂಡರು.

ಆಗ ಆಘಾತಕಾರಿ ಸತ್ಯವೊಂದು ಬಯಲಾಗಿದೆ.. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಕೆರೆಯಲ್ಲಿ ಶವವನ್ನು ಬಿಸಾಕಲಾಗಿತ್ತು.. ಜಾತ್ರೆಯಲ್ಲಿ ಪೋಷಕರ ಜೊತೆ ಇದ್ದ ಬಾಲಕಿಗೆ ಸಿಹಿ ತಿಂಡಿ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಜಾತ್ರೆಯಲ್ಲಿ ಕಾಮುಕ, ಬಾಲಕಿ ಜೊತೆ ಓಡಾಡುವ ದೃಶ್ಯ ಸಿಸಿಕ್ಯಾಮದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಬಾಲಕಿ ಅಣ್ಣನಿಗೂ ಕೂಡ ಅನುಮಾನ ಇತ್ತು.. ಬಾಲಕಿ ಅಣ್ಣನ ಹೇಳಿಕೆ ಆಧರಿಸಿ ಕಾಮಾಂಧನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಕಾಮುಕ ಸುರೇಶ್ ಮೈಸೂರು ಮೊದಲಾದ ಕಡೆ ಕೋಲೆ ಬಸವನನ್ನು ಆಡಿಸುವ ಪ್ರವೃತ್ತಿ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ. ಊರೂರು ಸುತ್ತೋದೆ ಇವನ ಖಯಾಲಿ ಅಂತೆ. ಸದ್ಯ ಕಾಮುಕನನ್ನು ಬಂಧಿಸಿರುವ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ..

LEAVE A REPLY

Please enter your comment!
Please enter your name here