Home District 15 ದಿನಗಳ ಬಳಿಕ ಕ್ಷೇತ್ರದಲ್ಲಿ ಪತ್ತೆಯಾದ ಅಥಣಿ MLA..! “ಕಾಂಗ್ರೆಸ್ ತೊರೆಯಲ್ಲ, ಸಚಿವ ಸ್ಥಾನದ ಆಕಾಂಕ್ಷಿಯೂ...

15 ದಿನಗಳ ಬಳಿಕ ಕ್ಷೇತ್ರದಲ್ಲಿ ಪತ್ತೆಯಾದ ಅಥಣಿ MLA..! “ಕಾಂಗ್ರೆಸ್ ತೊರೆಯಲ್ಲ, ಸಚಿವ ಸ್ಥಾನದ ಆಕಾಂಕ್ಷಿಯೂ ನಾನಲ್ಲ”

1366
0
SHARE

ಹದಿನೈದು ದಿನದಿಂದ ಕ್ಷೇತ್ರದಿಂದ ಪರಾರಿಯಾಗಿದ್ದ ಶಾಸಕ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. ವೈಯಕ್ತಿಕ ಸಮಸ್ಯೆಯಿಂದ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ನಾನು ಕಟ್ಟಾ ಕಾಂಗ್ರೆಸ್ಸಿಗ. ನನಗೆ ಯಾವ ಮಂತ್ರಿ ಪದವಿಯೂ ಬೇಡ ನನ್ನ ಕ್ಷೇತ್ರ ಅಭಿವೃದ್ಧಿಯಾದ್ರೆ ಸಾಕು. ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಶಾಸಕ ಮಹೇಶ್ ಕುಮಠಳ್ಳಿ ಯೂ ಟರ್ನ್.

ಆಪರೇಷನ್ ಕಮಲ ಠುಸ್ ಆದ ಬಳಿಕ ಒಬ್ಬೊಬ್ಬರೆ ಶಾಸಕರು ಈಗ ಕ್ಷೇತ್ರದತ್ತ ಕಾಣಿಸತೊಡಗಿದ್ದಾರೆ. ನಿನ್ನೆ ಜಾಧವ್ ಪ್ರತ್ಯಕ್ಷರಾದ್ರೆ, ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಇಂದು ಸ್ವಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ… ತಾವು ವೈಯಕ್ತಿಕ ಕಾರಣದಿಂದಾಗಿ, ಮುಂಬೈ.ಕೊಲ್ಲಾಪುರಕ್ಕೆ ತೆರಳಿದ್ದಾಗಿ ಹೇಳಿದ್ದಾರೆ.ನಾನು ಅತೃಪ್ತ ಅಥವಾ ಬಂಡಾಯ ಶಾಸಕ ಅಲ್ಲ. ನನಗೆ ಯಾವುದೇ ಸಚಿವ ಸ್ಥಾನ ನಿಗಮ ಮಂಡಳಿ ಬೇಕಾಗಿಲ್ಲ.

ನನ್ನ ವೈಯುಕ್ತಿಕ ಕಾರಣದಿಂದಾಗಿ ಕೊಲ್ಹಾಪೂರ, ಪೂನಾ, ಮುಂಬೈಗೆ ತೆರಳಿದ್ದೆ. ಅಲ್ಲಿ ಒಂದು ಸಾರಿ ಮಾತ್ರ ರಮೆಶ್ ಜಾರಕಿಹೋಳಿ ಅವರನ್ನು ಭೇಟಿ ಮಾಡಿದ್ದೆ. ಜಾರಕಿಹೊಳಿ ನಮ್ಮ ನಾಯಕರು ಎಂದ್ರು. ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಲ್ ಪಿ ಸಭೆಗೆ ಗೈರಾಗಬೇಕಾಯಿತು ಎಂದು ಮಹೇಶ್ ಕುಮಠಳ್ಳಿ ಸ್ಪಷ್ಟನೆ ನೀಡಿದ್ರು.ಶಾಸಕ ಮಹೇಶ್ ಕಮಠಳ್ಳಿ ಬಿಜೆಪಿ ಸೇರ್ತಾರೆ ಎಂದು ನೊಂದಿದ್ದ ಕ್ಷೇತ್ರದ ಕಾರ್ಯಕರ್ತರು ಈಗ ಕೊಂಚ ನಿರಾಳರಾಗಿದ್ದಾರೆ.

ಬಿಜೆಪಿ ಸೇರ್ತಾರೆ ಎಂದು ತಿಳಿಯುತ್ತಿದ್ದಂತೆ ಕ್ಷೇತ್ರದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೇ ಶಾಸಕರನ್ನ ಹುಡುಕಿಕೊಡಿ ಎಂದು ದೂರು ದಾಖಲಾಗಿತ್ತು. ಈಗ ಶಾಸಕರು ಪಕ್ಷ ಬಿಡಲ್ಲ ಎಂದು ಸ್ಪಷ್ಟನೆ ನೀಡಿದ ಬಳಿಕ ಕಾರ್ಯಕರ್ತರು ಶಾಸಕರನ್ನ ಕಾಣಲು ಆಗಮಿಸುತ್ತಿದ್ದಾರೆ.ಸದ್ಯದ ಮಟ್ಟಿಗೆ ಆಪರೇಷನ್ ಕಮಲ ಠುಸ್ ಆಗಿದೆ.

ಎಲ್ಲ ನಾಲ್ಕು ಅತೃಪ್ತ ಶಾಸಕರು ಈಗ ತಮ್ಮ ತಮ್ಮ ಕ್ಷೇತ್ರಗಳಿಗೆ ಹಿಂದುರುಗಿದ್ದಾರೆ. ಅಲ್ಲದೇ ಸಿಎಲ್ ಪಿ ಸಭೆ ಗೈರಿಗಿದ್ದಕ್ಕೆ ಉತ್ತರ ನೀಡಿದ್ದಾರೆ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಆದ್ರೆ ಮುಂದೆ ಅತೃಪ್ತರನ್ನ ಪಕ್ಷ ಹೇಗೆ ನಡೆಸಿಕೊಳ್ಳುತ್ತೆ, ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಅನ್ನೋದನ್ನ ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here