Home Crime 15 ವರ್ಷ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಕೇವಲ ಅತ್ತೆ ಬಟ್ಟೆಯ ವಿಚಾರಕ್ಕೆ ಜಗಳವಾಡಿ ಪ್ರಾಣ ಕಳೆದುಕೊಂಡಿದ್ದು...

15 ವರ್ಷ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಕೇವಲ ಅತ್ತೆ ಬಟ್ಟೆಯ ವಿಚಾರಕ್ಕೆ ಜಗಳವಾಡಿ ಪ್ರಾಣ ಕಳೆದುಕೊಂಡಿದ್ದು ಏಕೆ..!?

4790
0
SHARE

 

ಅವರಿಬ್ಬರು ಬಾಲ್ಯದ ಗೆಳೆಯರು. ಗೆಳೆತನ ಪ್ರೀತಿಗೆ ತಿರುಗಿ 15 ವರ್ಷಗಿಳಿಂದ ಪರಸ್ಪರ ಪ್ರೀತಿಸ್ತಿದ್ರು. ಪ್ರೀತಿ, ಪ್ರೇಮ ಅಂತ ಸುತ್ತಾಡಿದ್ದು ಸಾಕು ಅಂತ ಫ್ಯಾಮಿಲಿಗಳಲ್ಲಿ ಒಪ್ಪಿಸಿ, ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಅದ್ರೆ, ಇಬ್ಬರ ನಡುವೆ ಬಂದ ಸಣ್ಣ ಕಲಹ ಸುಖ ಸಂಸಾರವನ್ನ ಒಡೆದು ಒಂದು ಜೀವವನ್ನ ಬಲಿ ತೆಗೆದುಕೊಂಡಿದೆ.

ಈಕೆ ಹೆಸ್ರು ರಮಿತಾ. ಬೆಂಗಳೂರಿನ ಗರುಡಾಚಾರ್ ಪಾಳ್ಯ ನಿವಾಸಿ. ನೆರೆಮನೆಯಲ್ಲಿ ವಾಸವಾಗಿದ್ದ ನರೇಶ್ ಎಂಬಾತನನ್ನ ಕಳೆದ 15 ವರ್ಷಗಳಿಂದ ಪ್ರೀತಿಸ್ತಿದ್ಲು. ಕಾರಣಾಂತರಗಳಿಂದ ನರೇಶ್ ಗರುಡಾಚಾರ್ ಪಾಳ್ಯ ಬಿಟ್ಟು, ಕೆ.ಆರ್.ಪುರಂ ರೈಲ್ವೆ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ. ತನ್ನ ತಂದೆ ನಿಧನದ ನಂತರ ಅನುಕಂಪದ ಆಧಾರದ ಮೇಲೆ ರೈಲ್ವೆ ಇಲಾಖೆಯಲ್ಲಿ ಕೆಲ್ಸವು ಸಿಕ್ಕಿತ್ತು..

ಇತ್ತ ರಮಿತಾಳು ಸಹ ವೋಲ್ವೋ ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದು, ಮದ್ವೆಯಾಗೋ ನಿರ್ಧಾರ ತೆಗೆದಕೊಂಡ ಇಬ್ಬರು ಮನೆಗಳಲ್ಲಿ ಒಪ್ಪಿಸಿ, ಕಳೆದ 15 ದಿನಗಳ ಹಿಂದೆಯಷ್ಟೇ ಚಿಕ್ಕತಿರುಪತಿ ದೇವಸ್ಥಾನದ ಬಳಿ ಸಿಂಪಲ್ಲಾಗಿ ಮದ್ವೆಯಾಗಿ ರೈಲ್ವೇ ಕ್ವಾಟ್ರಸ್ ನಲ್ಲಿಯೇ ವಾಸವಾಗಿದ್ರು.ಆದ್ರೆ, ಇತ್ತೀಚೆಗೆ ನರೇಶ್ ತಾಯಿಯೂ ಸಹ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಆಕೆಯ ಬೀರುವಿನಲ್ಲಿ ಬಟ್ಟೆಗಳನ್ನ ಇಡೋ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ನಂತ್ರ ನರೇಶ್ ಬಾರ್ ನತ್ತ ತೆರಳಿ, ಮನೆ ವಾಪಸ್ ಬಂದು ರೂಂಗೆ ತೆರಳದೆ ಹೊರ ಮಲಗಿದ್ದಾನೆ. ಇತ್ತ ಪ್ರೀತಿಸಿ ಕೈ ಹಿಡಿದ ಗಂಡ ಬೈದಿದನ್ನೇ ಸೀರಿಯಸ್ಸಾಗಿ ತೆಗೆದುಕ್ಕೊಂಡ ರಮಿತಾ ನೇಣಿಗೆ ಶರಣಾಗಿದ್ದಾಳೆ.

ಬೆಳಗ್ಗೆ ನಿದ್ರೆಯಿಂದೆದ್ದ ನರೇಶ್ ರೂಂ ಬಾಗಿಲು ಬಡಿದಾಗ ತೆರೆಯದಿದ್ದನ್ನ ನೋಡಿ ಅನುಮಾನದಲ್ಲಿ ಹೊರಗಡೆಯಿಂದ ಕಿಟಕಿ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆದ್ರೆ, ರಮಿತಾ ಪೋಷಕರು ನರೇಶ್‌ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ವರದಕ್ಷಿಣೆ ಕಿರುಕುಳ ನೀಡ್ತಿದ್ದು, ಆತನೇ ಹತ್ಯೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಕೆ.ಆರ್.ಪುರಂ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ…

 

LEAVE A REPLY

Please enter your comment!
Please enter your name here