
ದೇಶದಲ್ಲಿ ಒಂದೇ ದಿನ 16,051 ಸೋಂಕಿತರು ಪತ್ತೆ..! 206 ಮಂದಿ ಕೊರೋನಾಗೆ ಬಲಿ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ 16,051 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 206 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿ ದೆ.ಒಂದೇ ದಿನದಲ್ಲಿ 37,901 ಜನರು ಸೋಂಕಿನಿಂದ ಗುಣಮುಖರಾಗುವ ಮೂಲಕ ದೇಶದಲ್ಲಿ ಒಟ್ಟಾರೆ4,21,24,284 ಮಂದಿ ಪೂರ್ಣ ಚೇತರಿಸಿಕೊಂಡಂತಾಗಿದೆ. ಗುಣಮುಖರಾಗಿರುವವರ ಪ್ರಮಾಣ ಶೇಕಡಾ 98.33 ರಷ್ಟಿದೆ.
ನಿನ್ನೆಯಿಂದ 24 ಗಂಟೆಗಳ ಅವಧಿಯಲ್ಲಿ 206 ಮಂದಿ ಕೊರೊನಾಗೆ ಬಲಿಯಾಗುವ ಮೂಲಕ ಈವರೆಗೆ ದೇಶದಲ್ಲಿ ಸುಮಾರು 5,12 ,109 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲೀಗ ಶೇ.1.20 ರಷ್ಟು ಮಾತ್ರ ಡೆತ್ರೇಟ್ ಇದೆ. ದೇಶದಲ್ಲಿ ಸಕ್ರಿಯ ಸೋಂಕಿ ತರ ಸಂಖ್ಯೆ 2,02,131 ಮಾತ್ರ ಇದ್ದು, ಪಾಸಿಟಿವಿಟಿ ರೇಟ್ ಶೇ.1.90 ರಷ್ಟು ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.