Home District “2 ತಿಂಗಳಲ್ಲಿ BJP ಸರ್ಕಾರ ರಚನೆ ಶತಸಿದ್ಧ”.?! ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಆಶೋಕ್ ಸ್ಫೋಟಕ...

“2 ತಿಂಗಳಲ್ಲಿ BJP ಸರ್ಕಾರ ರಚನೆ ಶತಸಿದ್ಧ”.?! ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಆಶೋಕ್ ಸ್ಫೋಟಕ ಹೇಳಿಕೆ…

639
0
SHARE

ಒಂದರೆಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ..ಹೀಗಂತ ಮಾಜಿ ಡಿಸಿಎಂ ಆರ್.ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ..ಹೊಸ ಸರ್ಕಾರ ರಚನೆ ದೃಷ್ಟಿಯಿಂದಲೇ ನಾನು ಮತ್ತು ಶ್ರೀರಾಮುಲು ಲೋಕಸಭೆ ಬೈ ಎಲೆಕ್ಷನ್ ಗೆ ಸ್ಪರ್ಧಿಸ್ತಾ ಇಲ್ಲ ಎಂದು ಅವರು ಕಾರಣ ಹೇಳಿದ್ದಾರೆ..ನಾವು ಸರ್ಕಾರ ಮಾಡೋದು ಶತಸಿದ್ಧ, ಮಾಡೇ ಮಾಡ್ತೀವಿ ಅಂತ ಅಶೋಕ್ ಶಪಥ ಮಾಡಿದ್ದಾರೆ..

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ಪೀಕರಿಸಿದರೂ ಬಹುಮತ ಸಾಬೀತುಪಡಿಸಲಾಗದೆ ತೀನ್ ದಿನ್ ಕಾ ಸುಲ್ತಾನ್ ಅನಿಸಿಕೊಂಡಿದ್ದರು..ಅದಾದ ಬಳಿಕ ಬಿಜೆಪಿ ಸರ್ಕಾರ ರಚಿಸುವ ಪ್ರಯತ್ನವನ್ನಂತೂ ಮುಂದುವರಿಸಿಯೇ ಇದೆ..ಇತ್ತೀಚೆಗೆ ಒಂದಿಷ್ಟು ಶಾಸಕರನ್ನು ಸೆಳೆಯಲು ಬಿಜೆಪಿ ಯಶಸ್ವಿಯಾಗಿ ಅವರೆಲ್ಲ ಮುಂಬೈ-ಚೆನ್ನೈನತ್ತ ಹೊರಟಿದ್ದಾರೆ ಅಂತೆಲ್ಲ ಹೇಳಲಾಗಿತ್ತು..

ಇನ್ನೇನು ಮೈತ್ರಿ ಸರ್ಕಾರ ಪತನವಾಗಲಿದೆ ಅನ್ನುವಂತಹ ವಾತಾವರಣ ನಿರ್ಮಾಣವಾಗಿ ಹೋಗಿತ್ತು..ಆದ್ರೆ ಕೊನೆಗೆ ಏನೂ ಆಗದೇ ಸರ್ಕಾರ ಸೇಫ್ ಆಗಿತ್ತು..ಈಗ ಮತ್ತೆ ಬಿಜೆಪಿ ನಾಯಕರಿಗೆ ಸರ್ಕಾರ ರಚಿಸುವ ಹೊಂಗನಸು ಮೂಡಿದೆ..ಒಂದೆರಡು ತಿಂಗಳಲ್ಲಿ ನಾವು ಸರ್ಕಾರ ರಚನೆ ಮಾಡುತ್ತಿದ್ದೇವೆ ಅಂತ ಮಾಜಿ ಡಿಸಿಎಂ ಆರ್.ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ..ನಾವು ಸರ್ಕಾರ ಮಾಡುವುದು ಶತಸಿದ್ಧ ಎಂದು ಸಾಮ್ರಾಟ್ ಗುಡುಗಿದ್ದಾರೆ..

ಹಿಂದೆ ಆಪರೇಷನ್ ಕಮಲದ ಬಗ್ಗೆ ಪ್ರಶ್ನಿಸಿದಾಗ, ನಾವು ಇದುವರೆಗೆ ಪ್ರಯತ್ನ ಮಾಡಿರಲಿಲ್ಲ ಅಂತ ಅಶೋಕ್ ಸ್ಪಷ್ಟಪಡಿಸಿದ್ದಾರೆ..38 ಸ್ಥಾನ ಬಂದಿರುವಂತಹ ಜೆಡಿಎಸ್ ನವರು ಮುಖ್ಯಮಂತ್ರಿ ಯಾಗಬಹುದಾದರೆ ನಮಗೆ ಆಸೆ ಇಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ..ಸರ್ಕಾರ ಮಾಡ್ತೀವಿ ಅನ್ನುವ ವಿಶ್ವಾಸ ನಮಗಿದೆ..

ಎಷ್ಟು ಜನ ಬೇಕು, ಹೇಗೆ ತರಬೇಕು, ಹೇಗೆ ಮಾಡಬೇಕು ಅನ್ನೋದ್ರ ಬಗ್ಗೆ ನಮ್ಮ ನಾಯಕರು ಚರ್ಚೆ ಮಾಡ್ತಾ ಇದ್ದಾರೆ ಎಂದು ಅಶೋಕ್ ಬಹಿರಂಗಪಡಿಸಿದ್ದಾರೆ..ಲೋಕಸಭೆ ಚುನಾವಣೆಯೊಳಗೆ ಹೊಸ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ..ಹೊಸ ಸರ್ಕಾರ ರಚನೆ ದೃಷ್ಟಿಯಿಂದಲೇ ನಾನು ಮತ್ತು ಶ್ರೀರಾಮುಲು ಲೋಕಸಭೆ ಬೈ ಎಲೆಕ್ಷನ್ ಗೆ ಸ್ಪರ್ಧೆ ಮಾಡಬಾರದು ಅಂತ ಯಡಿಯೂರಪ್ಪನರೇ ಹೇಳಿದ್ದಾರೆ ಅಂತಲೂ ಅಶೋಕ್ ವಿವರಿಸಿದ್ದಾರೆ..

ಮಂಡ್ಯದಲ್ಲಿ ತಮಗೆ, ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ಸ್ಪರ್ಧೆ ಮಾಡೋ ಬಗ್ಗೆ ಒತ್ತಡ ಇದ್ರೂ ಇವತ್ತಿನ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಬೇಡ ಅಂತ ಹೇಳಿದ್ದಾರೆ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ..ಇಷ್ಟು ದಿನ ಮೈತ್ರಿ ಸರ್ಕಾರ ಅದಾಗಿಯೇ ಬಿದ್ದು ಹೋಗುತ್ತದೆ ಅಂತ ಹೇಳ್ತಿದ್ದ ಬಿಜೆಪಿ ನಾಯಕರು,ಈಗ ನಾವೇ ಸರ್ಕಾರ ರಚನೆ ಮಾಡ್ತೇವೆ ಅಂತ ಬಹಿರಂಗವಾಗಿ ಹೇಳತೊಡಗಿದ್ದಾರೆ..ಬಿಜೆಪಿಯವರ ಹೊಂಗನಸು ನನಸಾಗತ್ತಾ ಎಂಬುದನ್ನು ನೋಡಲು ಸ್ವಲ್ಪ ದಿನ ಕಾಯಬೇಕು..

LEAVE A REPLY

Please enter your comment!
Please enter your name here