ರಾಧಿಕಾ ಪಂಡಿತ್ .. ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ, ಅಭಿಮಾನಿಗಳ ಪ್ರೀತಿಯ ರಾಧೆ, ಮೊಗ್ಗಿನ ಮನಸ್ಸಿನ ಚೆಲುವೆ. ಹಸೆಮಣೆ ಏರಿದ ಬಳಿಕ ಚಂದನವನದಿಂದ ದೂರವಾಗಿದ್ದ, ಸ್ಯಾಂಡಲ್ವುಡ್ ಕ್ವೀನ್ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ಲಕ್ಷ್ಮೀಯ ನಯಾ ಅವತಾರದಲ್ಲಿ ಕಣ್ಮನ್ನ ಸೆಳೆಯುತ್ತಿದ್ದಾರೆ.
ಯಸ್.. ರಾಧಿಕಾ ಪಂಡಿತ್ ಮತ್ತೆ ಬೆಳ್ಳಿತೆರೆಗೆ ಬಲಗಾಲಿಟ್ಟು ಬಂದಿದ್ದಾರೆ. ಈ ಬಾರಿ ಹಾಗೆ ಸುಮ್ಮನೆ ಸುದ್ದಿಯ ಮೂಲಕ ಬಂದಿಲ್ಲ. ಬದಲ್ಲಿಗೆ ಲಕ್ಷ್ಮೀ ಪುರಾಣದ ಮೂಲಕ ರಂಗು ರಂಗಾಗಿ ರಂಗೇರಿಸುವ ಟೀಸರ್ ಮೂಲಕ ಎಂಟ್ರಿಕೊಟ್ಟಿದ್ದಾರೆ. ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಮತ್ತದೇ ಹಳೇ ಜೋಷ್ನಲ್ಲಿ ಎಂಟ್ರಿಕೊಡ್ತಿದ್ದು. ಟ್ರೇಲರ್ ಮೂಲಕ ಕಮಾಲ್ ಮಾಡ್ತಿದ್ದಾರೆ.
ನಿಮಗೆ ಗೋತ್ತಿಲ್ಲಿ. ರಾಧಿಕಾ ಹಣೆಮಣೆ ಏರಿ ಈಗಾಗ್ಲೇ ಎರಡು ವರ್ಷಗಳು ಕಳೆದಿವೆ. ಜ್ಯೂನಿಯರ್ ರಾಧಿಕಾ ಆಗಮನವು ಆಗಿದೆ. ಈಗಿರುವಾಗ್ಲೆ ಅಭಿಮಾನಿಗಳ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ. ರಾಧಿಕಾ ರೀ ಎಂಟ್ರಿ ಯಾವಾಗ, ಸಿನಿಮಾ ಸಿನಿಮಾ ಮೂಲಕ ರಂಜಿಸೋದು ಯಾವಾಗ ಅನೋ ಅಭಿಮಾನಿಗಳ ಪ್ರಶ್ನೆಗಳ ಬಾಣಕ್ಕೆ ಪ್ರೀತಿಯ ರಾಧೆ ಟೀಸರ್ ಮೂಲಕ ಉತ್ತರ ಕೊಟ್ಟಿದ್ದಾರೆ.
ಹೌದು..ಆದಿ ಲಕ್ಷ್ಮೀ ಪುರಾಣ ಪುರಾಣ ಚಿತ್ರದ ಪುಟ್ಟ ಟೀಸರ್ ರಿಲೀಸ್ ಆಗಿದೆ. ೧.೨೫ ನಿಮಿಷದ ಟ್ರೇಲರ್ನಲ್ಲಿ ಲವ್ ಸ್ಟೋರಿಯ ಥ್ರಿಲ್ ಇದೆ. ಇನ್ನು ಸಂಚಿತ್ ಹೆಗ್ಡೆ ಬ್ಮೂ ಬ್ಮೂ ಭೂಮಿಯ ಸುತ್ತಲು ಎಂಬ ಹಾಡಿನ ಝಲಕ್ ಚಿತ್ರದ ಟೀಸರ್ನ ಮತ್ತೊಂದು ಹೈಲೆಟ್. ಸಕಲಕಲಾವಲ್ಲಭ ರಮೇಶ್ ಅರವಿಂದ್ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ಮೂಡಿಬಂದಿದು.
ಖಾಕಿ ಖದರ್ನ ಝಲಕ್, ಫ್ಯಾಮಿಲಿ ಡ್ರಾಮಾ ಕೆಲಸ ಸನ್ನಿವೇಶ ಅನಾವರಣವಾಗಿದೆ. ಇದೇ ಮೊದಲ ಭಾರಿಗೆ ರಾಧಿಕಾ ಮತ್ತು ನಿರೂಪ್ ಕಾಂಬಿನೇಷನ್ನಲ್ಲಿ ಚಿತ್ರ ಮೂಡಿಬಂದಿದೆ. ಇಷ್ಟು ದಿನ ಪೋಸ್ಟರ್ ಮತ್ತು ಚಿತ್ರೀಕರಣದಿಂದ ಆದಿ ಲಕ್ಷ್ಮಿ ಪುರಾಣ ಸದ್ದು ಮಾಡ್ತಿದ್ದು. ಪ್ರಾಮೀಸಿಂಗ್ ಟೀಸರ್ ಮೂಲಕ ಸದ್ಯ ಸ್ಯಾಂಡಲ್ವುಡ್ನಲ್ಲಿ ಎಲ್ಲರ ಚಿತ್ತ ಕದಿಯುತ್ತಿದೆ.ಪೋಲೀಸ್ ಆಫೀಸರ್ ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ಧಾರೆ. ಚಿತ್ರದ ಪುಟ್ಟ ಟೀಸರ್ನಲ್ಲಿ ನಿರೂಪ್ನ ಸೀರಿಯಸ್ ಆಫೀಸರಾದ್ರು ಪ್ರೀತಿಯಲ್ಲಿ ಬೀಳುವ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.
ಪಾತ್ರಕ್ಕೆ ತಕ್ಕಂತೆ ದೇಹದ ತೂಕ ಹೆಚ್ಚಿಸಿಕೊಂಡಿರು ನಿರೂಪ್. ಚಿತ್ರದಲ್ಲಿ ಖಡಕ್ ಪೋಲೀಸ್ ಆಫೀಸರ್ ರೋಲ್ ಕೂಡ ಪ್ಲೇ ಮಾಡಿದ್ದಾರೆ. ಇನ್ನು ರಾಧಿಕಾ ಎವರ್ ಗ್ರೀನ್ ಸಿಂಡ್ರಲ್ಲಾ. ನೋಡಿದ್ರೆ ಮಿಂಚೋಡ್ಹಂಗೆ ಹಾಗಬೇಕು.. ಹಾರ್ಟಲ್ಲಿ ಸುನಾಮಿ ಏಬ್ಬಿಸಲು ಅನ್ನೋ ಹಾಗೆ. ಮತ್ತೆ ೨ ವರ್ಷಗಳ ನಂತ್ರ ಗ್ರಾಂಡ್ ಆಗಿ ಎಂಟ್ರಿಕೊಟ್ಟಿದ್ದಾರೆ ರಾಧು.ಇನ್ನು, ತಾರಾ ಅನುರಾಧ ಮತ್ತು ಸುಚೇಂದ್ರ ಪ್ರಸಾದ್ ನಿರೂಪ್ ಪೋಷಕರ ಪಾತ್ರದಲ್ಲಿ ಮಿಂಚಿದ್ದು. ಮಗನ ಪ್ರೀತಿಯ ಪುರಾಣಕ್ಕೆ ಸಾಥ್ ಕೊಡುವ ತಂದೆತಾಯಿಯಾಗಿ ಟೀಸರ್ನಲ್ಲೇ ಗಮನಸೆಳೆಯುತ್ತಾರೆ.
ಪ್ರೀತಿಯ ಹೊಸ ಪುರಾಣವನ್ನು ಆದಿಲಕ್ಷ್ಮೀ ಪುರಾಣದಲ್ಲಿ ಹೇಳಹೊರಟಿರುವ ಚಿತ್ರತಂಡ. ಏ ಕಿಕ್ ಆಫ್ ಲವ್ ಅಂಡ್ ಲೈಫ್.. ಎಂಬ ಕ್ಯಾಡಿ ಅಡಿ ಬರಹದ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡ್ತಿದೆ.
ಚಿತ್ರಕ್ಕೆ ತಮಿಳಿನ ನಿರ್ದೇಶಿಕಿ ವಿ.ಪ್ರಿಯಾ ಆಕ್ಷನ್ ಕಟ್ ಹೇಳಿದ್ದಾರೆ. ಮಣಿರತ್ನಂ ಹಾಗೂ ಸುಹಾಸಿನಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಪ್ರಿಯಾ. ಮೊದಲ ಬಾರಿಗೆ ಆದಿ ಲಕ್ಷ್ಮಿ ಪುರಾಣ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದಾರೆ. ಲವ್ ಸ್ಟೋರಿ ಮೂಒಲಕ ಭರಪೂರ ಮನೋರಂಜನೆಯ ಬುತ್ತಿಯನ್ನು ನೀಡುವ ವಿಶ್ವಾಸವನ್ನು ಟೀಸರ್ನಲ್ಲೇ ನೀಡಿದ್ದಾರೆ.
ಇನ್ನು ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಜೊತೆಗೆ ಸೌಮ್ಯ ಜಗನ್ ಮೂರ್ತಿ, ಯಶವಂತ್ ಶೆಟ್ಟಿ, ಭರತ್ ಕಲ್ಯಾಣ್ ಸೇರಿದಂತೆ ಸಾಕಷ್ಟು ರಂ ಭೂಮಿ ಕಲಾವಿರ ದಂದು ಆದಿ ಲಕ್ಷ್ಮೀ ಪುರಾಣ ಚಿತ್ರದಲ್ಲಿದೆ. ಇನ್ನುಳಿದಂತೆ ಪ್ರಶಾಂತ್ ರಾಜಪ್ಪ ಸಂಭಾಷಣೆ, ಅನೂಫ್ ಭಂಡಾರಿ ಸಂಗೀತ, ಜೋ.ಷಿ ಹರ್ಷ ಸಂಕಲನ, ಪೀತ ಜಯರಾಮನ್ ಛಾಯಾಗ್ರಹಣ ಚಿತ್ರಕದಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಅದ್ಧೂರಿ ನಿರ್ಮಾಣದಲ್ಲಿ ಮೂಡಿದ್ದಾರೆ.
ಸದ್ಯ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡನ್ನೂ ಬ್ಯಾಲೆನ್ಸ್ ಮಾಡ್ತಿರೋ ರಾಧಿಕಾ ಸದ್ಯ ತಾಯ್ತನದ ಖುಷಿಯಲ್ಲಿದಾರೆ. ಜೊತೆಗೆ ಸಿನಿಮಾದ ರಿಲೀಸ್ನ್ನು ಎದುರು ನೋಡ್ತಿದಾರೆ ೨೦೧೬ರಲ್ಲಿ ಪವರ್ ಸ್ಟಾರ್ ಜೊತೆ ದೊಡ್ಮನೆ ಹುಡುಗದಲ್ಲಿ ನಟಿಸಿದ್ರು. ನಂತ್ರ ಅದೇ ವರ್ಷ ಸೆಟ್ಟೇರಿದ ಸಂತು ಸ್ಟ್ರೈಟ್ ಫಾರ್ವಡ್ನಲ್ಲಿ ರಾಧಿಕಾ ನಾಯಕಿಯಾಗಿ ನಟಿಸಿದ್ರು. ಆದಾದ ಬಳಿಕ ಗೃಹಸ್ತಾಶ್ರಮಕ್ಕೆ ಸಿಂಡ್ರೆಲ್ಲಾ ಎಂಟ್ರಿಕೊಟಿದ್ರು.
ನಂತರ ಚಿತ್ರಗಳಿಂದ ಬ್ರೇಕ್ ತೆಗೆದುಕೊಂಡಿದ್ದ ರಾಧಿಕಾ ಸೈಲೆಂಟಾಗಿ, ೨೦೧೭ರಲ್ಲಿ ಆದಿಲಕ್ಷ್ಮೀ ಪುರಾಣ ಚಿತ್ರದಲ್ಲಿ ನಟಿಸಿ ಪ್ರೆಗ್ನೆಂಸ್ಸಿ ಸಮಯದಲ್ಲೇ ಚಿತ್ರದ ಡಬ್ಬಿಂಗ್ನಲ್ಲಿ ರಾಧಿಕಾ ಭಾಗಿಯಾಗಿದ್ರು. ಈಗ ಚಿತ್ರದ ಟೀಸರ್ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.ಅದೇನೇ ಇದ್ರು.. ಆದಿ & ಲಕ್ಷ್ಮೀಯ ಪುರಾಣ ಸದ್ಯ ಟೀಸರ್ ಮೂಲಕ ಹವಾ ಸೃಷ್ಟಿಸಿದ್ದು, ಈ ಲವ್, ಮದುವೆ ಪುರಾಣ ಯಾವಾಗ ತೆರೆ ಮೇಲೆ ಅಬ್ಬರಿಸಲಿದೆ ಎಂದು ಕಾದುಕುಳಿಯುವಂತೆ ಮಾಡ್ತಿದೆ.