ತೇನ ವಿನಾ ತೃಣಮಪಿ ನ ಚಲತಿ ಎಂಬ ಮಾತಿದೆ. ಹೌದು.. ಜಗತ್ತಿನ ನಿಯಾಮಕ ಶಕ್ತಿಯ ಕಾರಣವಿಲ್ಲದೆ ಯಾರು ಎನ್ನನ್ನ ಮಾಡೋದಕ್ಕೂ ಸಾಧ್ಯವಿಲ್ಲ.. ದೈವ ಬಲವಿಲ್ಲದಿದ್ದರೆ ಯಾವುದನ್ನ ಸಾಧಿಸೋದಕ್ಕೂ ಸಾಧ್ಯವಿಲ್ಲ. ಎಂತಹುದ್ದೆ ವ್ಯಕ್ತಿಯಾಗಲಿ ಕಷ್ಟ ಬಂದಾಗ ದೇವರ ಬಳಿಯಲ್ಲಿ ಹೋಗೋದು ಸಾಮಾನ್ಯ. ತಮ್ಮ ನಂಬಿಕೆಯ ಅನುಸಾರವಾಗಿ ದೇವರ ಬಳಿಯಲ್ಲಿ ಸಾಗಿ ಇಷ್ಟಾರ್ಥವನ್ನ ಈಡೇರಿಸು ಅಂತಾ ಬೇಡಿಕೊಳ್ಳುವ ಮಂದಿಯನ್ನ ದೇವರು ಯಾವತ್ತು ಕೈಬಿಡೋದಿಲ್ಲ…
ಇದು ಚೆನ್ನೈ ಸೂಪರ್ ಕಿಂಗ್ಸ್ ವಿಷಯದಲ್ಲೂ ನಿಜವಾಗಿದೆ.ಐಪಿಎಲ್ ಆಡುವ ತಂಡಗಳಲ್ಲೆ ಬಲಾಢ್ಯ ಟೀಮ್ ಅನ್ನೋ ಹೆಗ್ಗಳಿಕೆ ಸಿಎಸ್ ಕೆಯದ್ದಾಗಿತ್ತು.. ಜೊತೆಗೆ ಶ್ರೇಷ್ಠ ನಾಯಕನ ಅಭಯ.. ಐಸಿಸಿ ಅಧ್ಯಕ್ಷರ ಅಭಯ ಹಸ್ತ ತಂಡದ ಶ್ರೀರಕ್ಷೆಯಾಗಿತ್ತು. ಹೀಗಿದ್ದು ಐಪಿಎಲ್ ಕ್ರಿಕೆಟ್ ನಲ್ಲಿ ಮೋಸದಾಟದಲ್ಲಿ ಸಿಲುಕಿ ಸೂಪರ್ ಕಿಂಗ್ಸ್ 2 ವರ್ಷ ಬ್ಯಾನ್ ಶಿಕ್ಷೆಯನ್ನ ಎದುರಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಅದು ನಿಜಕ್ಕೂ ಆಘಾತವನ್ನ ನೀಡಿತ್ತು…
2 ವರ್ಷ ಐಪಿಎಲ್ ನಲ್ಲಿ ಆಡುವಂತಿಲ್ಲ ಅಂದಾಗ ಚೆನ್ನೈ ಫ್ರಾಂಚೈಸಿ ಏನು ಮಾಡಬೇಕು.. ಮುಂದೆ ಹೇಗಪ್ಪಾ ಅನ್ನೋ ಸಂದಿಗ್ಧದಲ್ಲಿತ್ತು. ಆಗ ಚೆನ್ನೈ ತಂಡದ ಫ್ರಾಂಚೈಸಿ ಹೋಗಿದ್ದು ಜಗದೊಡೆಯನಾದ ಶ್ರೀನಿವಾಸನ ಸನ್ನಿಧಿಗೆ.ಎಲ್ಲರೂ ಚೆನ್ನೈ ತಂಡವನ್ನ ಅನುಮಾನದ ದೃಷ್ಠಿಯಲ್ಲಿಯೇ ನೋಡುವಂತಹ ಸ್ಧಿತಿ ನಿರ್ಮಾಣವಾಗಿತ್ತು. ತಮಿಳುನಾಡಿನಲ್ಲಿರೋ ತಿರುಪತಿ ತಿರುಮಲ ಸನ್ನಿಧಿಯಲ್ಲಿ ವಿನಮ್ರವಾಗಿ ಚೆನ್ನೈ ಫ್ರಾಂಚೈಸಿ ದೇವರಲ್ಲಿ ಈ ಸಂಕಷ್ಟದಿಂದ ಪಾರು ಮಾಡು ಎಂದು ಬೇಡಿಕೊಂಡಿತ್ತು…
ಎನ್.ಶ್ರೀನಿವಾಸನ್ ಹಾಗೂ ಇತರೆ ಸದಸ್ಯರು ದೇವರ ಪಾದಕ್ಕೆರಗಿ ಇಷ್ಟಾರ್ಥವನ್ನ ಈಡೇರಿಸುವಂತೆ ಪ್ರಾರ್ಥಿಸಿದ್ದರು.ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವರ್ಷದ ಬ್ಯಾನ್ ಶಿಕ್ಷೆಯನ್ನ ಮುಗಿಸಿ ಈ ಬಾರಿ ಮತ್ತೆ ಐಪಿಎಲ್ ಅಖಾಢದಲ್ಲಿ ಕಾಣಿಸಿಕೊಂಡಿತ್ತು. ಬಲಿಷ್ಠ ತಂಡವನ್ನ ಕಟ್ಟಿಕೊಂಡು ಬಂದಿದ್ದ ಸೂಪರ್ ಕಿಂಗ್ಸ್ ಪ್ರಶಸ್ತಿಯನ್ನ ಗೆಲ್ಲುವ ಫೇವರಿಟ್ ತಂಡ ಅನ್ನೋ ಹೆಗ್ಗಳಿಕೆಯನ್ನ ಹೊಂದಿತ್ತು…
ಅಲ್ಲದೆ ತಿರುಪತಿ ತಿಮ್ಮಪ್ಪನ ಆಶೀರ್ವಾದ, ಆಟಗಾರರ ಬೊಂಬಾಟ್ ಪ್ರದರ್ಶನ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟಕೇರುವಂತೆ ಮಾಡಿತು. ಈ ಹಿಂದೆ ಫಿಕ್ಸಿಂಗ್ ಹಗರಣದ ಕಳಂಕದಿಂದ ಅಂಟಿಸಿಕೊಂಡಿದ್ದ ಕೆಟ್ಟ ಹೆಸರನ್ನ ಕಳೆದುಕೊಳ್ಳಲು ಸಫಲವಾಗಿದೆ. ಜೊತೆಗೆ ತಿರುಪತಿ ತಿಮ್ಮಪ್ಪನ ಕೃಪಾಶೀರ್ವಾದವನ್ನ ಪಡೆದು ಇದೀಗ ಹೊಸ ಇತಿಹಾಸವನ್ನ ಬರೆದಿದೆ.ಐಪಿಎಎಲ್ ಟ್ರೋಫಿಗೆ ಟಿ.ನಗರದ ತಿಮ್ಮಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತ್ತು…
ಎರಡು ವರ್ಷ ನಿಷೇಧದ ಬಳಿಕ ಮತ್ತೆ ಐಪಿಎಲ್ಗೆಇ ಕಮ್ ಬ್ಯಾಕ್ ಮಾಡಿ ಪ್ರಶಸ್ತಿ ಗೆದ್ದಿರುವ ಸಿಎಸ್ಕೆಪ ತಂಡ, ಕಳೆದು ಹೋಗಿರುವ ಘನತೆಯನ್ನು ಮತ್ತೆ ಪಡೆದುಕೊಂಡಿದೆ. ಈ ಮೂಲಕ ಸೂಪರ್ ಕಿಂಗ್ಸ್ ತನ್ನಲ್ಲಿ ಲ್ಲಿ 3 ಐಪಿಎಲ್ ಚಾಂಪಿಯನ್ ಹಾಗೂ 4 ರನ್ನರ್ ಅಪ್ ಟ್ರೋಫಿಯನ್ನ ತನ್ನ ಜೇಬಿಗೆ ಇಳಿಸಿಕೊಂಡಿದೆ. ಅಲ್ಲದೆ ಅಂದು ಹೊತ್ತಿದ್ದ ಹರಕೆಯನ್ನ ಟ್ರೋಫಿ ಗೆದ್ದು ತೀರಿಸಿದೆ.ತಿರುಪತಿಯ ಬಾಲಾಜಿಯ ಚರಣದಲ್ಲಿ ಟ್ರೋಫಿಯನ್ನ ಇಟ್ಟು ತನ್ನ ಸೇವೆಯನ್ನ ಸಲ್ಲಿಸಿದೆ…
ಅಲ್ಲದೆ ವಿಶೇಷ ಪೂಜೆಯನ್ನ ಸಲ್ಲಿಸಿ ದೇವರಲ್ಲಿ ಮುಂಬರುವ ದಿನಗಳಲ್ಲಿಯೂ ಒಳಿತನ್ನ ಮಾಡು ಅಂತಾ ಬೇಡಿಕೊಂಡಿದೆ.ತಿರುಪತಿ ಶ್ರೀನಿವಾಸನ ಕೃಪೆಗೆ ಭಾಜನರಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ನೇ ಬಾರಿ ಐಪಿಎಲ್ ಟ್ರೋಫಿಯನ್ನ ಎತ್ತಿ ಹಿಡಿಯಲು ಕಾರಣವಾಗಿದೆ. ದೇವರಲ್ಲಿ ಹರಕೆಯನ್ನ ಕಟ್ಟಿಕೊಂಡಿದ್ದರ ಪರಿಣಾಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಇತಿಹಾಸವನ್ನ ಬರೆದಿದ್ದಾರೆ…
ಅಲ್ಲದೆ ಧೋನಿಯ ನಾಯಕತ್ವದಲ್ಲಿ ಉತ್ತಮ ಪ್ರದರ್ಶನವನ್ನ ನೀಡಲು ಸಹ ದೇವರ ಕೃಪೆಯೇ ಕಾರಣವಾಗಿದೆ.ಇದೀಗ ತಮಿಳುನಾಡಿನಲ್ಲಿರೋ ಟಿಟಿಡಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಿರೋ ಸೂಪರ್ ಕಿಂಗ್ಸ್ ಫ್ರಾಂಚೈಸಿ ಯಾವುದೇ ತೊಂದರೆಗಳು ಇನ್ನು ಆಗದಿರಲಿ.. ಜಗದೊಡೆಯನಾದ ನಿನ್ನ ಆಶೀರ್ವಾದ ಎಲ್ಲರ ಮೇಲೆ ಇರಲಿ ಅಂತಾ ಪ್ರಾರ್ಥಿಸಿದ್ದಾರೆ…