
ಖಾರ್ಕಿವ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕದ 200 ವಿದ್ಯಾರ್ಥಿಗಳು
ಉಕ್ರೇನ್: ಉಕ್ರೇನ್ ನಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಖಾರ್ಕಿವ್ನಲ್ಲಿ ಸಂಕಷ್ಟದಲ್ಲಿ 200 ವಿದ್ಯಾರ್ಥಿ ಗಳು ಸಿಲುಕಿದ್ದಾರೆ. 200 ವಿದ್ಯಾರ್ಥಿಗಳ ಪೈಕಿ ರಾಜ್ಯದ 90 ವಿದ್ಯಾರ್ಥಿಗಳಿದ್ದಾರೆ. ಊಟ, ತಿಂಡಿ ನೀರಿಗೂ ವಿದ್ಯಾರ್ಥಿಗಳು ಪರದಾ ಡುತ್ತಿದ್ದಾರೆ. ಯಾವುದೇ ಅಧಿಕಾರಿಗಳು ವಿದ್ಯಾರ್ಥಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ. ಬೇರೆ ದೇಶದ ಪ್ರಜೆಗಳು ಸುರಕ್ಷಿತವಾಗಿ ಹೋಗುತ್ತಿದ್ದಾರೆ ಎಂದು ಉಕ್ರೇನ್ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.