Home Elections 2019 2019ರ `ಪಾಣಿಪತ್’ ಕದನಕ್ಕೆ ಕೇಸರಿ ಪಾಳೆಯ ಸಿದ್ಧವಾಯ್ತು.! ಮೊದಲಿನಂತಿಲ್ಲ, ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ ರಾಹುಲ್!? ಮಹಾ ಮೈತ್ರಿಗೆ...

2019ರ `ಪಾಣಿಪತ್’ ಕದನಕ್ಕೆ ಕೇಸರಿ ಪಾಳೆಯ ಸಿದ್ಧವಾಯ್ತು.! ಮೊದಲಿನಂತಿಲ್ಲ, ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ ರಾಹುಲ್!? ಮಹಾ ಮೈತ್ರಿಗೆ ಮುನ್ನವೇ ಪ್ರಧಾನಿ ಪಟ್ಟಕ್ಕೆ ಪೈಪೋಟಿ ಶುರು.!

464
0
SHARE

ಎಲೆಕ್ಷನ್… ಎಲೆಕ್ಷನ್… ಎಲೆಕ್ಷನ್.. ಸಧ್ಯ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೂ ರಾಜಕೀಯ ಪಕ್ಷಗಳಲ್ಲಿ ಕೇಳಿ ಬರುತ್ತಿರೋ ಮಂತ್ರ. ಈ ಬಾರಿ ಗೆಲ್ಲಲೇ ಬೇಕು. ಗೆದ್ದೇ ತೀರಬೇಕು ಅಂತಾ ಪ್ರತಿ ಪಕ್ಷಗಳು ನಾನಾ ಕಸರತ್ತು ಮಾಡುತ್ತಿವೆ, ಮೋದಿಯನ್ನ ಸೋಲಿಸಲೇ ಬೇಕು ಅಂತಾ, ತಂತ್ರ ಪ್ರತಿ ತಂತ್ರ, ಮೈತ್ರಿ, ಮರು ಮೈತ್ರಿ ಮಾಡಿಕೊಳ್ಳುತ್ತಿದೆ. ಎಲ್ಲರ ಕಾಮನ್ ಟಾರ್ಗೆಟ್ ಆಗಿರೋದು ಒನ್ ಅಂಡ್ ಓನ್ಲಿ ನರೇಂದ್ರ ಮೋದಿ.ಎಸ್ ಪ್ರತಿ ಪಕ್ಷಗಳು ನರೇಂದ್ರ ಮೋದಿಯನ್ನ ಸೋಲಿಸಲೆಂದೆ ಪಣ ತೊಟ್ಟು ನಿಂತಿದ್ದಾರೆ.

ಈ ಎಲ್ಲರನ್ನು ಎದುರಿಸಲು ಬಿಜೆಪಿ ತನ್ನದೆ ಪ್ಲಾನ್ ರೂಪಿಸಿದೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸಿದೆ. ”2019ರ ಚುನಾವಣೆ ನರೇಂದ್ರ ಮೋದಿ ಹಾಗೂ ಇತರರ ನಡುವಿನ ಸಮರ,” ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಘೋಷಿಸಿದ್ದಾರೆ, ಸೋ 2019ಕ್ಕೆ ಮೋದಿ ಒಂದು ಕಡೆ ಆದ್ರೆ ವಿಪಕ್ಷಗಳೆಲ್ಲಾ ಇನ್ನೊಂದು ಕಡೆ ಅನ್ನೋದು ಬಹುತೇಕ ಪಕ್ಕಾ ಆಗಿದೆ. ಆ ಕಾರಣಕ್ಕೋ ಏನೋ ಅಮಿತ್ ಷಾ ಈ ಚುನಾವಣೆಯನ್ನ ಪಾಣಿಪತ್ ಕದನಕ್ಕೆ ಹೋಲಿಸಿದ್ದಾರೆ.

ಈ ಬಾರಿಯ ಚುನಾವಣೆ ಬರೀ ಚುನಾವಣೆ ಆಗಿರೋದಿಲ್ಲ. ರಾಜಕೀಯ ಪಂಡಿತರು ಹೇಳುವಂತೆ ಪ್ರಜಾ ತಂತ್ರದ ಹಬ್ಬವೂ ಆಗಿರೋದಿಲ್ಲ ಬದಲಾಗಿ ಘೋರ ಕದನವಾಗಿರಲಿದೆ. ನರೇಂದ್ರ ಮೋದಿ ಮತ್ತು ಪ್ರತಿಪಕ್ಷದ ನಡುವಿನ ಸಮರವಾಗಿರಲಿದೆ.ಮೂರನೇ ಪಾಣಿಪತ್ ಕದನ ಅಬ್ದಾಲಿ ಮತ್ತು ಸದಾಶಿವ್ ಬಾವು ಮಧ್ಯೆ ನಡೆಯಿತು, ದುರ್ಭಾಗ್ಯದಿಂದ ಮರಾಠ ಸೇನೆ ಸೋಲನ್ನ ಕಾಣಬೇಕಾಯ್ತು, ಪರಿಣಾಮ ಏನಾಯ್ತು, ಮತ್ತೆ ಯುದ್ಧ ಮರುಕಳಿಸಲೇ ಇಲ್ಲ, 131 ಯುದ್ಧಗಳನ್ನ ಗೆದ್ದಿದ್ದ ಮರಾಠ ಸೇನಾ, ಒಂದು ಯುದ್ಧದಲ್ಲಿ ಸೋತು ಹೋಯ್ತು, ದೇಶ 200 ವರ್ಷಗಳ ಕಾಲ ಇಂಗ್ಲೀಷರ ಗುಲಾಮಗಿರಿಯಲ್ಲಿ ಬೀಳುವಂತೆ ಆಯ್ತು,ಎಸ್ ಅಂದಿನ ಪಾಣಿಪತ್ ಕದನಕ್ಕೆ ಈ ಚುನಾವಣೆಯನ್ನ ಹೋಲಿಸೋದ್ರ ಮೂಲಕ, ಲೋಕ ಸಭಾ ಚುನಾವಣೆ ಸಮರ ಅನ್ನೋದನ್ನ ಅಮಿತ್ ಷಾ ಹೇಳಿದ್ದಾರೆ.

2014ರ ಚುನಾವಣೆಯಲ್ಲಿ ‘ಅಭಿವೃದ್ಧಿ’ ತನ್ನ ಅಜೆಂಡಾ ಎಂದು ಸಾರಿದ್ದ ಬಿಜೆಪಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಯಾರೂ ನಿರೀಕ್ಷಿಸದ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಹಿಡಿದಿತ್ತು. ಈ ಬಾರಿಯೂ ಬಿಜೆಪಿ ಅಜೆಂಡಾದಲ್ಲಿ ಅಂತಹ ದೊಡ್ಡ ಬದಲಾವಣೆ ಕಾಣಿಸಿಲ್ಲ. ಐದು ವರ್ಷಗಳ ಆಡಳಿತಾವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನೇ ಪ್ರಚಾರದ ಅಸ್ತ್ರ ಮಾಡಿಕೊಳ್ಳಲು ನಿರ್ಧರಿಸಿರುವ ಪಕ್ಷ, ಯಥಾಪ್ರಕಾರ ಪ್ರಚಂಡ ವಾಗ್ಮಿ ನರೇಂದ್ರ ಮೋದಿಯವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಪರಿಗಣಿಸಿದೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರ ಬೀಳದಿದ್ದರೂ ಮೋದಿ ಮುಂದುವರಿಕೆ ಸ್ಪಷ್ಟವಾಗಿದೆ.

ಈ ದಿಸೆಯಲ್ಲಿ ದಿಲ್ಲಿ ಸಮಾವೇಶದಲ್ಲಿ ಅಧ್ಯಕ್ಷ ಅಮಿತ್‌ ಶಾ ಆಡಿದ ಮಾತುಗಳು ಇನ್ನಷ್ಟು ನಿಚ್ಚಳ ಚಿತ್ರಣ ನೀಡಿವೆ. ಖಚಿತವಾಗಿಯೂ ಮೋದಿ ಕಮಲ ಪಾಳಯದ ಪ್ರಧಾನಿ ಅಭ್ಯರ್ಥಿ. ಹೀಗಾಗಿ ಮುಂದಿನ ಚುನಾವಣೆ ಮೋದಿ ವರ್ಸಸ್‌ ಇತರರ ವಿರುದ್ಧ ನಡೆಯುವುದು ದಿಟವಾಗಿದೆ. ಹಾಗಾದರೆ ಅವರ ವಿರುದ್ಧ ಎದೆಸೆಟೆಸಿ ನಿಲ್ಲುವ ಪ್ರತಿಪಾಳಯದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಈಗ ಎಲ್ಲರ ಮುಂದೆ ತಲೆ ಎತ್ತಿರುವ ಮಿಲಿಯನ್‌ ಡಾಲರ್‌ ಪ್ರಶ್ನೆ.ರಾಹುಲ್ ಈಗ ಮೊದಲಿನಂತೆ ಇಲ್ಲ. ರಾಹುಲ್ ಸಂಪೂರ್ಣವಾಗಿ ಬದಲಾಗಿ ಹೋಗಿದ್ದಾರೆ. ಮೊದಲೆಲ್ಲ ರಾಹುಲ್ ಅಂದ್ರೆ ಸಾಕು ಎಂತವರಾದ್ರು ತುಟಿಯಂಚಲ್ಲಿ ನಕ್ಕು ಸುಮ್ಮನಾಗಿ ಬಿಡುತ್ತಿದ್ರು. ರಾಹುಲ್ ಗಾಂಧಿ ಹೇಳುತ್ತಿದ್ದ ಸಿರಿಯಸ್ ಮಾತುಗಳೆಲ್ಲಾ ಜೋಕ್ ಆಗಿ ಪರಿವರ್ತನೆ ಆಗುತ್ತಿತ್ತು. ಇದು ಯಾರ ತಪ್ಪು ಆಗಿರಲಿಲ್ಲ ಸ್ವತಃ ರಾಹುಲ್ ಗಾಂಧಿಯ ತಪ್ಪೇ ಆಗಿತ್ತು, ಆದ್ರೀಗ ರಾಹುಲ್ ಗಾಂಧಿ ಸಂಪೂರ್ಣವಾಗಿ ಬದಲಾಗಿದ್ದಾರೆ. ಒಬ್ಬ ಟಿಪಿಕಲ್ ರಾಜಕಾರಣಿಯಾಗಿದ್ದಾರೆ.

ವಿರೋದಿಗಳನ್ನ ಹೇಗೆ ಹಣಿಯಬೇಕುಯ ಯಾವ ಮಾತುಗಳು ರಾಜಕೀಯ ವಲಯವನ್ನ ಆಕರ್ಶಿಸುತ್ತವೆ. ಯಾವ ಹೇಳಿಕೆ ಓಟು ಗಿಟ್ಟಿಸಿಸುತ್ತವೆ ಅನ್ನೋದನ್ನ ರಾಹುಲ್ ಗಾಂಧಿ ಚೆನ್ನಾಗಿ ಅರಿತಿದ್ದಾರೆ. ಆ ಚೆಂಚ್ ಓವರ್ ಎಫೆಕ್ಟ್ ನಿಂದ  ಪಂಚ ಫಲದಲ್ಲಿ ಸಿಂಹಪಾಲನ್ನ ರಾಹುಲ್ ಉಂಡಿದ್ದರು. ಅದೇ ಆತ್ಮವಿಶ್ವಾಸದಲ್ಲಿ 2019ರ ಅಖಾಡಕ್ಕೆ ಜಿಗಿಯುತ್ತಿದ್ದಾರೆ..ಮೊದಲು ರಾಹುಲ್ ಗಾಂಧಿ ಈ ರೀತಿ ಇರಲಿಲ್ಲ. ಕಾಟಚಾರಕ್ಕೆ ಚುನಾವಣಾ ಪ್ರಚಾರ ಮಾಡುತ್ತಿದ್ದರು, ಪ್ರಚಾರದಲ್ಲಿಯೂ ಎಡವಟ್ಟು ಮಾಡಿಕೊಂಡು ಮಿತ್ರ ಪಕ್ಷಕ್ಕೆ ಆಹಾರವಾಗುತ್ತಿದ್ರು. ಅದ್ರ ಪರಿಣಾಮಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗುತ್ತಿತ್ತು. ರಿಸಲ್ಟ್ ಬರುವ ಹೊತ್ತಿಗಾಗಲೇ ರಾಹುಲ್ ಎಲ್ಲಿದ್ದಾರೆ ಅಂತಾ ಹುಡುಕಾಟ ಶುರುವಾಗುತ್ತಿತ್ತು.

ಯಾರಿಗೂ ಹೇಳದೇ ಕೇಳದೇ ರಾಹುಲ್ ಗಾಂಧಿ ಅಜ್ಞಾತ ಸ್ಥಳಕ್ಕೆ ಹೋಗಿ ಬಿಡುತ್ತಿದ್ದರು. ವಾರ, ತಿಂಗಳು ಕಳೆದ ನಂತರದಲ್ಲಿ ರಾಹುಲ್ ಎಲ್ಲೊ ಒಂದು ಕಡೆ ಕಾಣ ಸಿಗುತ್ತಿದ್ದರು. ಹೀಗೆ ರಾಹುಲ್ ಗಾಂಧಿ ರಾಜಕೀಯವನ್ನ ಸಿರಿಯಸ್ ಆಗಿಯೇ ತೆಗೆದುಕೊಂಡಿರಲಿಲ್ಲ. ಅದ್ಯಾಕೋ ಈ ಪಂಚ ರಾಜ್ಯ ಚುನಾವಣೆಯಲ್ಲಿ ಕೊಂಚ ಸರಿಯಸ್ ಆಗಿಯೇ ಅಖಾಡಕ್ಕೆ ಇಳಿದಿದ್ರು. ಮೇಗಾ ಚೆಂಚ್ ಓವರ್ ನೊಂದಿಗೆ ಬಂದ ರಾಹುಲ್ ಗೆ ತ್ರಿಫಲ ದೊರೆಯಿತು. ಒಂದೇ ಒಂದು ಗೆಲುವಿಗೆ ರಾಹುಲ್ ಗಾಂಧಿ ಸ್ಟಾರ್ ಆಗಿ ಬಿಟ್ರು.ಪಂಚ ಫಲಿತಾಂಶದಲ್ಲಿ ಸೂಪರ್ ಸ್ಟಾರ್ ಆದ ರಾಹುಲ್ ಗಾಂಧಿ ಅದೇ ಜೋಷ್ ನಲ್ಲಿ ಇದ್ದಾರೆ. ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸ್ ಘಡದಲ್ಲಿ ಗೆದ್ದು ತಾನು ಕೂಡ ಮೋದಿಗೆ ಸವಾಲ್ ಆಗಬಲ್ಲೇ ಅನ್ನೋದನ್ನ ತೋರಿಸಿದ್ದಾರೆ.

ಇಷ್ಟು ದಿನ ರಾಷ್ಟ್ರ ರಾಜಕೀಯದಲ್ಲಿ ಮೋದಿ ವಿರುದ್ಧ ನಿಲ್ಲಬಲ್ಲ ನಾಯಕ ಯಾರು ಅನ್ನೋದೇ ಪ್ರಶ್ನೆಯಾಗಿತ್ತು. ಕಾಂಗ್ರೆಸ್ ನಿಂದ ರಾಹುಲ್ ಹೆಸರು ಬರುತ್ತಿತ್ತಾದ್ರು, ಅದು ಮೋದಿಯಂತಹ ರಾಜಕೀಯ ದೈತ್ಯನಿಗೆ ಸರಿಸಾಟಿಯಾಗುತ್ತಿರಲಿಲ್ಲ. ಕಾಂಗ್ರೆಸ್ ನಲ್ಲೇ ರಾಹುಲ್ ನಾಯಕತ್ವದ ಬಗ್ಗೆ ಅಪ ನಂಬಿಕೆಗಳು ಇದ್ವು, ಆದ್ರೀಗ ಆ ಎಲ್ಲಾ ನಂಬಿಕೆಗಳು, ಹುಸಿಯಾಗಿವೆ, ರಾಹುಲ್ ಮೋದಿಗೆ ಸರಿ ಸಾಟಿಯಾಗಬಲ್ಲ ನಾಯಕ ಅನ್ನೋದು ಸಾಬೀತ್ ಆಗುತ್ತಿದೆ.

2019ರ ಎಲೆಕ್ಷನ್ ಗೆ ರಾಹುಲ್ ಗಾಂಧಿ ನರೇಂದ್ರ ಮೋದಿ ವಿರುದ್ಧ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ರಫೇಲ್ ವಿಚಾರ ಎಲೆಕ್ಷನ್ ಅಸ್ತ್ರವಾಗಿ ಬಳಸಿಕೊಳ್ಳುವ ಸೂಚನೆಯನ್ನ ನೀಡಿದ್ದಾರೆ. ಇದ್ರ ಜೊತೆಗೆ ಸಿಬಿಐ ಅಸ್ತ್ರವನ್ನ ರಾಹುಲ್ ಬಳಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಾಲಿಗೆ ರಾಹುಲ್ ಗಾಂಧಿ ಸ್ಟಾರ್ ಆಗಿದ್ರೆ, ಬಿಜೆಪಿಗೆ ಪ್ರಭಲ ಪೈಪೋಟಿಯನ್ನ ನೀಡೋ ಎಲ್ಲಾ ಸೂಚನೆ ಕೊಟ್ಟಿದ್ದಾರೆ, ಇಷ್ಟು ದಿನ ಒನ್ ಸೈಡ್ ಮ್ಯಾಜ್ ಆಡಿ ಭರ್ಜರಿಯಾಗಿ ಗೆಲ್ಲುತ್ತಿದ್ದ ನರೇಂದ್ರ ಮೋದಿಗೆ 2019 ಟಫ್ ಮ್ಯಾಚ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

LEAVE A REPLY

Please enter your comment!
Please enter your name here