Home Crime 21 ವರ್ಷದ ಮಗಳಿದ್ರೂ 21 ವರ್ಷದ ಯುವತಿ ಜೊತೆ ವಿವಾಹ..3 ಮದುವೆ ಮಾಡಿಕೊಂಡ ಮಹಾನುಭಾವ ಈಗ...

21 ವರ್ಷದ ಮಗಳಿದ್ರೂ 21 ವರ್ಷದ ಯುವತಿ ಜೊತೆ ವಿವಾಹ..3 ಮದುವೆ ಮಾಡಿಕೊಂಡ ಮಹಾನುಭಾವ ಈಗ ಪೊಲೀಸರ ಅತಿಥಿ…

819
1
SHARE

ಆತ ಚಪಲಚೆನ್ನಗರಾಯ ಒಂದಲ್ಲಾ ಎರಡಲ್ಲಾ ಅಂತ ಮೂರು ಮದುವೆ ಮಾಡಿಕೊಂಡು ಯಾರ ಬಳಿಯೂ ನೆಟ್ಟಗೆ ಸಂಸಾರ ಮಾಡೋಕಾಗದೇ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಹೆಂಡತಿಯರ ಕಾದಾಟದಿಂದ ಮಹಾನುಭಾವ ಈಗ ಪೊಲೀಸರ ಅತಿಥಿಯಾಗಿದ್ದಾನೆ…

ಮಗಳ ವಯಸ್ಸಿನ ಯುವತಿ ವರಿಸಿದ ಚಪಲಚನ್ನಿಗರಾಯ- ಗಂಡ ನನಗೇ ಬೇಕು ಎಂದು ಇಬ್ಬರು ಪತ್ನಿಯರ ಕಾದಾಟ- ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಹೆಂಡತಿಯರು…ಈ ಫೋಟೋದಲ್ಲಿ ಕಾಣ್ತಿರೋ ಮಹಾನು ಭಾವ ಸೈಯದ್ ಗಫರ್ ಅಂತಾ. ನರ್ಸೀನ್ ತಾಜ್ ಅನ್ನೋರನ್ನ 23 ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆಗೆ ಬಂದ ಹೆಣ್ಣು ಮಕ್ಕಳು ಇದ್ದಾರೆ…

ಆದ್ರೂ ಕೂಡ ತಾನೇ ಮತ್ತೊಂದು ಮದುವೆ ಮಾಡ್ಕೊಂಡು ಮಕ್ಕಳನ್ನ ಸಾಕ್ತಿಲ್ಲಾ ಕೇಳೋಕೋದ್ರೆ ಹಲ್ಲೆ ಮಾಡ್ತಾರೆ ಅಂತ ದೊಡ್ಡ ಹೆಂಡತಿ ಹೇಳ್ತಾರೆ.ಇನ್ನು ನಾನು ಮದುವೆ ಆಗಿ ನಾಲ್ಕು ವರ್ಷ ಆಯ್ತು, ನನಗೆ ಅವರು ಮೊದಲು ಮದುವೆ ಆಗಿದ್ದು ಗೊತ್ತಿರಲಿಲ್ಲಾ, ಇಬ್ಬರು ಚಿಕ್ಕ ಮಕ್ಕಳು ಇದ್ದಾರೆ. ದಯವಿಟ್ಟು ನನಗೆ ಗಂಡನನ್ನ ಕೊಡಿಸಿ ಅಂತ ಕೊನೆಯ ಹೆಂಡತಿ ಅಳಲು ತೋಡಿಕೊಳ್ತಿದ್ದಾರೆ…

ನನ್ನ ತಮ್ಮ ಒಳ್ಳೆಯವನು, ಅವನ ದೊಡ್ಡ ಹೆಂಡತಿ ಅಳಿಯ ಮಕ್ಕಳು ಹಲ್ಲೆ ಮಾಡಿ ಆಸ್ತಿ ಪತ್ರ ತೆಗೆದುಕೊಂಡು ಹೋಗಿದ್ದರೆ ನಮಗೆ ನ್ಯಾಯ ಕೊಡಿಸಿ ಅಂತ ಸೋಲದೇವನಹಳ್ಳಿ ಠಾಣೆ ಮೆಟ್ಟಿಲೇರಿದ್ದೀವಿ ಅಂತ ಅಕ್ಕ ನಸ್ರೀನ್ ಹೇಳ್ತಾರೆ…

ಒಟ್ಟಾರೆ 21 ವರ್ಷದ ಮಗಳಿದ್ರೂ 21 ವರ್ಷದ ಯುವತಿಯನ್ನು ಮದುವೆಯಾಗಿ ಈತ ಯಾರಿಗೂ ನೆಮ್ಮದಿ ಇಲ್ಲದಂತೆ ಮಾಡಿದ್ದಾನೆ…

 

1 COMMENT

  1. Need to watch tat episode of 5 th may.. police commissioner warning rowdy shelters at Ashoknagar .. wer wil I get

LEAVE A REPLY

Please enter your comment!
Please enter your name here