Home Crime 23ರ ಹರೆಯದ ಮಗನನ್ನು ತಂದೆ ಹರಿತ ಚಾಕುವಿನಿಂದ ಚುಚ್ಚಿ ಚುಕ್ಕಿ ಬರ್ಬರವಾಗಿ ಹತ್ಯೆ..! ಕುಡಿದು ಗಲಾಟೆ...

23ರ ಹರೆಯದ ಮಗನನ್ನು ತಂದೆ ಹರಿತ ಚಾಕುವಿನಿಂದ ಚುಚ್ಚಿ ಚುಕ್ಕಿ ಬರ್ಬರವಾಗಿ ಹತ್ಯೆ..! ಕುಡಿದು ಗಲಾಟೆ ಮಾಡಿ ಆಸ್ತಿ ಬೇಕೆಂದವನ ಕಳಿಸಿದ್ದ ಯಮಲೋಕಕ್ಕೆ ಪಾರ್ಸಲ್..!

386
0
SHARE

ಆತ ಮನೆಗೆ ಮಗನಾಗಿರಲಿಲ್ಲ..ಊರಿಗೆ ಉಪಕಾರಿಯಾಗಿರಲಿಲ್ಲ… ಆದರೆ ದಿನನಿತ್ಯ ಕಂಠಪೂರ್ತಿ ಕುಡಿದು ಬಂದು ಪೋಷಕರಿಗೆ ವಿಲನ್ ಆಗಿ ಕಾಡ್ತಿದ್ದ.. ಬೇಡಪ್ಪ ಮಗನೇ ಹಾಗೆಲ್ಲ ಮಾಡಬಾರದು ಅಂತಾ ಹೆತ್ತವರು ಎಷ್ಟೇ ಬುದ್ದಿವಾದ ಹೇಳಿದ್ರೆ ನಾಯಿ ಬಾಲ ಡೊಂಕು ಎನ್ನೊ ಹಾಗೇ ಮತ್ತದೇ ಚಾಳಿ ಮುಂದುವರಿಸಿದ್ದ.. ಆದರೆ ಕೊನೆಗೆ ಆಗಿದ್ದೇನು ಅಂತಿರಾ..

ಕಂಠಪೂರ್ತಿ ಕುಡಿದು ಬಂದು ಆಸ್ತಿ ಕೇಳುತ್ತಿದ್ದ ಮಗ.ತಂದೆಯಿಂದಲೇ ಹತ್ಯೆಯಾದ ಪುತ್ರ ತೊರೆದ ಜಗ.ಒಂದೆಡೆ ಬರ್ಬರ ಕೊಲೆಯಾಗಿ ಬಿದ್ದಿರುವ ಯುವಕ. ಮತ್ತೊಂದೆಡೆ ಘಟನಾ ಸ್ಥಳ ಪರಿಶೀಲನೆ ನಡೆಸುತ್ತಿರೋ ಪೊಲೀಸರು.ಈ ದೃಶ್ಯ ಕಂಡು ಬಂದಿದ್ದು ಕಲಬುರ್ಗಿ ಜಿಲ್ಲೆಯಲ್ಲಿ.ಅಂದಹಾಗೆ ಈ ಫೋಟೊದಲ್ಲಿ ಕಾಣ್ತಿರೋ ಇತನ ಹೆಸರು ಅನಿಲ್ ರಾಠೋಡ್. 23ರ ಹರೆಯದ ಅನಿಲ್ ಪಾಳಾ ಗ್ರಾಮ ಸಮೀಪದ ಮಲ್ಲಯ್ಯನ ತಾಂಡಾದ ಶರಣಪ್ಪ ರಾಥೋಡ್‌ನ ಕಿರಿಯ ಪುತ್ರ..

ಟೆಂಟ್‌ಹೌಸ್‌ನಲ್ಲಿ ಕೆಲಸ ಮಾಡ್ತಾಯಿದ್ದ ಅನಿಲ್ ರಾಥೋಡ್ ಕುಡಿತಕ್ಕೆ ದಾಸನಾಗಿದ್ದ. ಆಸ್ತಿ ಕೊಡುವಂತೆ ಪ್ರತಿದಿನವೂ ಜಗಳ ಆಡ್ತಿದ್ದ. ನಿನ್ನೆಯೂ ಕೂಡ ಆಸ್ತಿ ಬೇಕು, ಕುಡಿಯೋಕೆ ದುಡ್ಡು ಬೇಕು ಅಂತಾ ತಂದೆಯನ್ನೇ ಹೊಡೆಯಲು ಶುರು ಮಾಡಿದ. ಎಷ್ಟೇ ಬುದ್ಧಿವಾದ ಹೇಳಿದರೂ ತಂದೆಗೆ ಹೋಡೆಯುವುದನ್ನು ಮುಂದುವರಿಸಿದ್ದ.

ಯಾವಾಗ ಪರಿಸ್ಥಿತಿ ವಿಕೋಪಕ್ಕೆ ಹೋಯ್ತೋ ತಂದೆ ಶರಣಪ್ಪನ ಪಿತ್ತ ನೆತ್ತಿಗೇರಿತ್ತು. ಹರಿತ ಚಾಕುವಿನಿಂದ ಚುಚ್ಚಿ ಚುಕ್ಕಿ ಮಗನನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಅಂದಹಾಗೆ ಆರೋಪಿ ಶರಣಪ್ಪ ನಾಲ್ಕು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಇಬ್ಬರು ಗಂಡು ಮಕ್ಕಳ ಪೈಕಿ ಈ ಅನಿಲ್‌ ರಾಥೋಡ್‌ ಮದ್ಯವೆಸನಿಯಾಗಿದ್ದ.

ಹಣಕ್ಕಾಗಿ ಪದೇ ಪದೇ ಪೋಷಕರನ್ನ ಒತ್ತಾಯಿಸುತ್ತಿದ್ದ. ಕೊನೆಗೆ ಅನಿಲನ ಕಣ್ಣು ಜಮೀನಿನ ಮೇಲೆ ಬಿದ್ದಿತ್ತು.ಹೀಗಾಗಿಯೇ ಪೋಷಕರಿಗೆ ಆಸ್ತಿಗಾಗಿ ಚಿತ್ರೆ ಹಿಂಸೆ ಕೊಡುತ್ತಿದ್ದ. ಈಗ ಅಪ್ಪನಿಂದಲೇ ಅನಿಲ್ ಹೆಣವಾಗಿದ್ದಾನೆ.ಒಟ್ನಲ್ಲಿ ಕುಡಿತದ ಚಟಕ್ಕೆ ಬಿದ್ದು ಮಗ ಅಪ್ಪನಿಂದಲೇ ಬಾರದಲೋಕಕ್ಕೆ ಹೋದ್ರೆ, ಮಗನನ್ನ ಕೊಲೆ ಮಾಡಿ ತಂದೆ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ..

LEAVE A REPLY

Please enter your comment!
Please enter your name here