Home Elections 2019 25ನೇ CM ಆಗಿ HDK ಕನ್ನಡ ನಾಡಿನ ಜನತೆ,ದೇವರ ಹೆಸರಲ್ಲಿ ಪದಗ್ರಹಣ, ಅದ್ಬುತ ಕ್ಷಣಕ್ಕೆ ಸಾಕ್ಷಿಯಾದ...

25ನೇ CM ಆಗಿ HDK ಕನ್ನಡ ನಾಡಿನ ಜನತೆ,ದೇವರ ಹೆಸರಲ್ಲಿ ಪದಗ್ರಹಣ, ಅದ್ಬುತ ಕ್ಷಣಕ್ಕೆ ಸಾಕ್ಷಿಯಾದ ಘಟಾನುಘಟಿ ನಾಯಕರು

686
0
SHARE

ಇನ್ಮುಂದೆ ರಾಜ್ಯ ರಾಜ್ಯಕೀಯದಲ್ಲಿ ಕುಮಾರಪರ್ವ ಶುರುವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಹೆಚ್.ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಮೃತ ಸಿದ್ಧಿ ಯೋಗದಲ್ಲಿ ಪ್ರಮಾಣವಚನ ಪಡೆದ ಹೆಚ್‌ಡಿಕೆ ಕನ್ನಡ ನಾಡಿನ ಜನತೆ, ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು.

ರಾಜ್ಯಪಾಲರಾದ ವಾಜುಬಾಯಿ ವಾಲಾ ಪ್ರತಿಜ್ಞಾವಿಧಿ ಭೋಧಿಸಿದ್ರು. ರೇಶ್ಮೆ ಪಂಚೆ, ಬಿಳಿ ಶರ್ಟ್ ಧರಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬರಿಗಾಲಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು. ಸಿಎಂ ಆದ ನಂತರ ದೇವೇಗೌಡ, ಚೆನ್ನಮ್ಮನವರ ಕಾಲಿಗೆ ನಮಸ್ಕರಿಸಿ ಕುಮಾರಸ್ವಾಮಿ ಆಶೀರ್ವಾದ ಪಡೆದ್ರು.

ಈ ವೇಳೆ ತೃತಿಯ ರಂಗದ ಗಣ್ಯಾತಿಗಣ್ಯರು ಭಾಗಿಯಾಗಿದ್ರು. ಅಲ್ಲದೆ, ಅದ್ಬುತ ಕ್ಷಣಕ್ಕೆ ಲಕ್ಷಾಂತರ ಅಭಿಮಾನಿಗಳು, ಹಾಗೂ ಜೆಡಿಎಸ್ ಕಾರ್ಯಕರ್ತರು ಸಾಕ್ಷಿಯಾದ್ರು.ಲಕ್ಷಾಂತರ ಕಾರ್ಯಕರ್ತರ ಕಣ್ಣೆದುರು ಪ್ರಮಾಣ ವಚನ ಸ್ವೀಕರಿಸಿದ HDK.ದೇವೇಗೌಡರ ಆಸೆ ನೆರವೇರಿಸಿದ ಪುತ್ರ ಹೆಚ್.ಡಿ ಕುಮಾರಸ್ವಾಮಿ.

ತಂದೆ ತಾಯಿ ಕಣ್ಣೆದುರು ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ. ಬರಿಗಾಲಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಕುಮಾರಸ್ವಾಮಿ.ಸಿಎಂ ಆದ ನಂತರ ದೇವೇಗೌಡ, ಚೆನ್ನಮ್ಮನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದಜ್ಯೋತಿಷಿಗಳ ಸಲಹೆಯಂತೆ ಬರಿಗಾಲಲ್ಲಿ ಪದಗ್ರಹಣ ಮಾಡಿದ HDK…

LEAVE A REPLY

Please enter your comment!
Please enter your name here