Home Cinema 28 ವರ್ಷಗಳ ನಂತರ “ಯುವರತ್ನ” ಚಿತ್ರದ ಮೂಲಕ ಕನ್ನಡಕ್ಕೆ ಬಂದ ರಾಧಿಕಾ ಶರತ್‌ಕುಮಾರ್.!

28 ವರ್ಷಗಳ ನಂತರ “ಯುವರತ್ನ” ಚಿತ್ರದ ಮೂಲಕ ಕನ್ನಡಕ್ಕೆ ಬಂದ ರಾಧಿಕಾ ಶರತ್‌ಕುಮಾರ್.!

626
0
SHARE

ನಮ್ಮ ಕನ್ನಡ ಚಿತ್ರರಂಗಕ್ಕೆ ಹಲವಾರು ಪರಭಾಷಾ ಕಲಾವಿದರ ಆಗಮನ, ನಿರ್ಗಮನ ಆಗೋದು ಸರ್ವೆಸಾಮಾನ್ಯ. ಅದರಲ್ಲೂ ಪೋಷಕನಟರ ದಂಡೇ ಕೆಲವೊಂದು ಸಿನಿಮಾಗಳಲ್ಲಿ ಆಕ್ಟ್ ಮಾಡಿ ಹೋಗುತ್ತೆ.

ಆದರೆ ಈಗ ನಮ್ಮ ಸ್ಯಾಂಡಲ್‌ವುಡ್‌ಗೆ ಅಪರೂಪದ ಅತಿಥಿಯೊಬ್ಬರು ಮತ್ತೆ ಕಮ್‌ಬ್ಯಾಕ್ ಮಾಡಿದಾರೆ. ಇವರು ಎಷ್ಟು ವರ್ಷಗಳ ನಂತರ ಮತ್ತೆ ಕನ್ನಡ ಭಾಷೆಯ ಸಿನಿಮಾಗೆ ಬಣ್ಣ ಹಚ್ತಿದಾರೆ ಎನ್ನುವ ವಿಷಯ ಕೇಳಿದ್ರೆ ಒಂದು ಕ್ಷಣ ಎಲ್ಲರಿಗೂ ಶಾಕ್ ಆಗೋದಂತೂ ಗ್ಯಾರಂಟಿ.ರಾಧಿಕಾ ಶರತ್‌ಕುಮಾರ್ ಸೌತ್ ಇಂಡಿಯನ್ ಫಿಲಂ ಇಂಡಸ್ಟ್ರಿಯ ದೊಡ್ಡ ಹೆಸರು. ಈಕೆ ಅಭಿನಯಿಸಿದ ಸಿನಿಮಾಗಳು ಕಂಡಿರೋ ಸಕ್ಸಸ್ ಅಷ್ಟಿಷ್ಟಲ್ಲ. ತಾಯಿ ಪಾತ್ರಕ್ಕೆ ಜೀವ ತುಂಬುತ್ತಿದ್ದ ರಾಧಿಕಾ ನಟನೆಗೆ ಫಿದಾ ಆಗದವರೇ ಇಲ್ಲ.

ರಾಧಿಕಾ ಶರತ್‌ಕುಮಾರ್ ಡೇಟ್ಸ್ ಪಡೆಯೋಕೆ ನಿರ್ಮಾಪಕರು ಹರಸಾಹಸ ಪಡ್ತಾರೆ. ಇವರಿಲ್ಲ ಅಂದ್ರೇ ಕೆಲವು ಪಾತ್ರಗಳನ್ನ ಕ್ಯಾನ್ಸಲ್ ಮಾಡೋ ರೇಂಜ್‌ಗೆ ರಾಧಿಕಾ ಶರತ್‌ಕುಮಾರ್ ಡಿಮ್ಯಾಂಡ್ ಇದೆ ಕಣ್ರೀ. ಈಗಷ್ಟೇ ಬಂದಿರೋ ಹ್ಯಾಪಿನ್ಯೂಸ್ ಏನಪ್ಪ ಅಂದ್ರೆ ನಮ್ಮ ಪವರ್‌ಸ್ಟಾರ್ ಪುನೀತ್ ಹಾಗೂ ರಾಧಿಕಾ ’ಯುವರತ್ನ’ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ರಾಧಿಕಾ ಶರತ್‌ಕುಮಾರ್ ಬರೋಬ್ಬರಿ ೨೮ ವರ್ಷಗಳ ನಂತರ ಕನ್ನಡದ ಚಿತ್ರಕ್ಕೆ ಬಣ್ಣ ಹಚ್ತಿರೋದೆ ಸದ್ಯದ ಬ್ಲಾಸ್ಟಿಂಗ್ ನ್ಯೂಸ್.ಯಸ್. ರಾಧಿಕಾ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ರು ಕನ್ನಡದಲ್ಲಿ ಮಾಡಿದ ಸಿನಿಮಾಗಳ ಸಂಖ್ಯೆ ಸ್ವಲ್ಪ ಕಡಿಮೇನೇ.

ಕನ್ನಡದಲ್ಲಿ ರಾಧಿಕಾ ಆಕ್ಟ್ ಮಾಡಿದ್ದು ಕೇವಲ ನಾಲ್ಕು ಸಿನಿಮಾ ಅಂದ್ರೆ ನಂಬೋಕೆ ಕಷ್ಟ. ಪ್ರಚಂಡ ಕುಳ್ಳ, ಜೀವನಚಕ್ರ ಹಾಗೂ ಸತ್ಯಂಶಿವಂಸುಂದರಂ ಚಿತ್ರಗಳಲ್ಲಿ ಅಭಿನಯಿಸಿದ ರಾಧಿಕಾ ಯಾಕೋ ಸ್ಯಾಂಡಲ್‌ವುಡ್‌ಗೆ ಟಾಟಾ ಹೇಳಿಬಿಟ್ಟಿದ್ರು. ೧೯೯೧ ರಲ್ಲಿ ತೆರೆಕಂಡ ’ನಾಗಿಣಿ’ ಸಿನಿಮಾದ ನಂತರ ರಾಧಿಕಾ ಕನ್ನಡದಲ್ಲಿ ನಟಿಸಲೇಇಲ್ಲ. ಆದರೆ ಈಗ ಮತ್ತೆ ಸ್ಯಾಂಡಲ್‌ವುಡ್ ರಾಧಿಕಾರನ್ನ ಚಿತ್ರದಲ್ಲಿನಟಿಸುವಂತೆ ಒತ್ತಾಯಿಸಿದೆ. ಅದು ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿರೋ ಯುವರತ್ನ ಮೂಲಕ ಎನ್ನುವುದೇ ಆಶ್ಚರ್ಯದ ಸಂಗತಿ.

’ಯುವರತ್ನ’ ಸಿನಿಮಾದಲ್ಲಿ ರಾಧಿಕಾ ನಟಿಸುವುದನ್ನ ಯುವರತ್ನ ಸಿನಿಮಾದ ಪ್ರೊಡಕ್ಷನ್ ಹೌಸ್ ಹೊಂಬಾಳೆ ಪ್ರೊಡಕ್ಷನ್ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಈ ಹಿಂದೆ ರಾಜಕುಮಾರ ಚಿತ್ರದಲ್ಲಿ ಶರತ್‌ಕುಮಾರ್ ಪುನೀತ್ ತಂದೆಯ ಪಾತ್ರದಲ್ಲಿ ಮಿಂಚಿದ್ರು. ಈಗ ರಾಧಿಕಾ ಯುವರತ್ನದಲ್ಲಿ ಯಾವ ಕ್ಯಾರೆಕ್ಟರ್ ಮಾಡ್ತಾರೆ ಎನ್ನುವ ದೊಡ್ಡ ಕ್ಯೂರ‍್ಯಸಿಟಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ೨೮ ವರ್ಷಗಳ ನಂತರ ಕನ್ನಡದಲ್ಲಿ ಕಾಣಿಸಿಕೊಳ್ಳೊಕೆ ಒಪ್ಪಿಕೊಂಡಿರೋ ರಾಧಿಕಾ ಶರತ್‌ಕುಮಾರ್ ಯಾವುದೋ ವಿಶೇಷ ಪಾತ್ರದಲ್ಲೇ ನಮ್ಮ ಮುಂದೆ ಎಂಟ್ರಿ ಕೊಡ್ತಾರೆ ಎನ್ನುವ ನಿರೀಕ್ಷೆ ಇಟ್ಕೊಬಹುದು.

ಸಂತೋಷ್ ಆನಂದ್‌ರಾಮ್‌ನಂತಹ ನಿರ್ದೆಶಕರು ತಮ್ಮ ಚಿತ್ರಕ್ಕೆ ಸೆಲೆಕ್ಟ್ ಮಾಡಿದ್ರೆ ಅದಕ್ಕೊಂದು ಸೂಕ್ತ ಕಾರಣವಿರುತ್ತೆ. ಹಾಗಾಗೀ, ರಾಧಿಕಾ ಶರತ್‌ಕುಮಾರ್ ಕನ್ನಡಕ್ಕೆ ಕಮ್‌ಬ್ಯಾಕ್ ಮಾಡ್ತೀರೊ ಹಿಂದೆ ’ಯುವರತ್ನ’ ಸಿನಿಮಾದ ಬಲವಾದ ಸ್ಟೋರಿಲೈನ್ ಕೂಡ ಮುಖ್ಯ ಕಾರಣವಂತೆ. ಅಂತೂ ದಿನೇದಿನೇ ಗಾಂಧಿನಗರದಲ್ಲಿ ತನ್ನ ಹೈಪ್ ಕ್ರಿಯೆಟ್ ಮಾಡಿಕೊಳ್ತಿರೋ ಯುವರತ್ನ ಸಿನಿಮಾದ ಯಶಸ್ಸಿನ ಓಟಕ್ಕೆ ರಾಧಿಕಾ ಶರತ್‌ಕುಮಾರ್ ಕೂಡ ಸಾಥ್ ಕೊಟ್ಟಿರೋದು ಚಿತ್ರಪ್ರೇಮಿಗಳಿಗೆ ಸಹಜವಾಗೀಯೇ ಸಿಕ್ಕಾಪಟ್ಟೆ ಖುಷಿಯಾಗಿದೆ ಎನ್ನಬಹುದೇನೊ. ಓನ್ಸ್ ಆಗೇನ್ ವೆಲ್‌ಕಮ್ ಟು ಸ್ಯಾಂಡಲ್‌ವುಡ್ ರಾಧಿಕಾ ಜೀ…

LEAVE A REPLY

Please enter your comment!
Please enter your name here