Home Crime “3 ಫ್ರೆಂಡ್ಸ್ 3 ರೀಸನ್ಸ್”..!! ರುಂಡ-ಮುಂಡ ಕತ್ತರಿಸಿ ಬೇರೆ ಮಾಡಿದ್ದಕ್ಕೆ ಅಸಲಿ ಕಾರಣ ಯಾರು ಗೊತ್ತೇ..?!

“3 ಫ್ರೆಂಡ್ಸ್ 3 ರೀಸನ್ಸ್”..!! ರುಂಡ-ಮುಂಡ ಕತ್ತರಿಸಿ ಬೇರೆ ಮಾಡಿದ್ದಕ್ಕೆ ಅಸಲಿ ಕಾರಣ ಯಾರು ಗೊತ್ತೇ..?!

2500
0
SHARE

ಮೊನ್ನೆ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಡೇವಿಡ್ ಎಂಬ ಯುವಕನನ್ನ ಹಂತಕರು ಕತ್ತು ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ರು. ಆ ಕೇಸ್ ಇನ್ವೆಸ್ಟಿಗೇಷನ್ ಕೈಗೊಂಡ ಪೊಲೀಸ್ರಿಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವಿರ್ಲಿಲ್ಲ. ಅಂತಹ ಕ್ಲಿಷ್ಟಕರ ಕೇಸ್ ನ್ನ ಭೇದಿಸಿದ ಗಂಗಮ್ಮನ ಗುಡಿ ಪೊಲೀಸರು ಹಂತಕರ ಕೈಗೆ ಕೋಳ ತೋಡಿಸುವಲ್ಲಿ ಸಕ್ಸಸ್ ಆಗಿದ್ದಾರೆ…

ಅವತ್ತು. ಮೇ, 4. ಬೆಂಗಳೂರಿನಲ್ಲಿ ಜೋರಾದ ಮಳೆ.ಈ ಮಳೆಗೆ ಬೆಂಗಳೂರಿನಾದ್ಯಾಂತ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ರೆ, ಜೊತೆಗೆ ರಾಮಚಂದ್ರಪುರ ಬಸ್ ಸ್ಟ್ಯಾಂಡ್ ನಲ್ಲಿ ಡೇವಿಡ್ ಎಂಬ ಕ್ರಿಮಿನಲ್ ಹೆಣ ಬಿದ್ದು ರಕ್ತದ ಕೋಡಿ ಹರಿದಿತ್ತು. ಸ್ಥಳಕ್ಕೆ ಭೇಟಿ ಕೊಟ್ಟ ಗಂಗಮ್ಮನ ಗುಡಿ ಪೊಲೀಸ್ರೇ ಅದನ್ನ ನೋಡಿ ಬೆಚ್ಚಿ ಬಿದ್ದಿದ್ರು…

ಯಾಕಪ್ಪ ಅಂದ್ರೆ ಅಲ್ಲಿ ಹತ್ಯೆಯಾಗಿದ್ದವ್ನ ತಲೆಯೇ ಇರ್ಲಿಲ್ಲ. ಅಂತಹ ಕ್ರಿಟಿಕಲ್ ಕೇಸ್ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸ್ರು ಕೃತ್ಯ ನಡೆದ ಎರಡೇ ದಿನಗಳಲ್ಲಿ ಹಂತಕರ ಕೈಗೆ ಕೋಳ ತೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಹಾಗೆ ಪೊಲೀಸ್ರಿಗೆ ಸೆರೆ ಸಿಕ್ಕ ಹಂತಕರೇ ಈ ಮಹೇಶ್ ಅಲಿಯಾಸ್ ಕಾಯಿ, ಸಂತೋಷ್ ಅಲಿಯಾಸ್ ಮೆಂಟಲ್, ಅಭಿಲಾಷ್ ಹಾಗೂ ವೇಣುಗೋಪಾಲ್.ಬಂಧಿತರೆಲ್ಲರೂ ಡೇವಿಡ್ ನ ಪ್ರಾಣ ಸ್ನೇಹಿತರೇ….

ಒಂದೇ ಏರಿಯಾ, ಒಂದೇ ಕೆಲ್ಸ ಮಾಡಿಕೊಂಡಿದ್ರು. ಅಲ್ಲದೇ, ರೌಡಿಶೀಟರ್ ಡೇವಿಡ್ ಜೊತೆ ಸಣ್ಣಪುಟ್ಟ ಕ್ರೈಂಗಳಲ್ಲಿ ಕೈ ಜೋಡಿಸಿದ್ರು. ಜೊತೆಗೆ ಎಲ್ಲರೂ ಗಾಂಜಾ ಹೊಡೀತಿದ್ರು. ಅದೊಮ್ಮೆ, ಗಾಂಜಾ ಕೊಡ್ಲಿಲ್ಲ ಅನ್ನೋ ಕಾರಣಕ್ಕೆ ಮಹೇಶ್ ಅಲಿಯಾಸ್ ಕಾಯಿ ಎಂಬುವನನ್ನ ಬಟ್ಟೆ ಬಿಚ್ಚಿ ಸಾಯಿಸಿಬಿಡ್ತೀನಿ ಅಂತ ಈ ಡೇವಿಡ್‌ ಪೆಟ್ರೋಲ್ ಸುರಿದು ಹಲ್ಲೆ ಮಾಡಿದ್ದ…

ಅಲ್ಲದೇ, ಈ ಮೃತ ಡೇವಿಡ್, ಮತ್ತೊಬ್ಬ ಫ್ರೆಂಡ್ ವೇಣುಗೋಪಾಲ್ ಗರ್ಲ್ ಫ್ರೆಂಡ್ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ. ಇದು ವೇಣುಗೋಪಾಲ್ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಲದಕ್ಕೆ ಪ್ರಸಾದ್ ಅಲಿಯಾಸ್ ಮೆಂಟಲ್ ಅನ್ನೋ ರೌಡಿಶೀಟರ್ ಜೊತೆ ಕಿರಿಕ್ ಮಾಡಿಕೊಂಡು ಹೆಬ್ಬಾಳ ಪ್ಲೈಓವರ್ ಮೇಲೆ ತನ್ನ ಇತರೆ ಸ್ನೇಹಿತರೊಂದಿಗೆ ಹಲ್ಲೆ ಮಾಡಿದ್ದ…

ಆದ್ರೂ, ಆ ಆರೋಪಿಗಳು ಡೇವಿಡ್ ನಿಂದ ದೂರವಾಗದೇ ಸೈಲೆಂಟಾಗಿ ಆತನ ಕಥೆ ಮುಗಿಸೋದಕ್ಕೆ ಪ್ಲಾನ್ ಮಾಡ್ತಿದ್ರು.ಅದಕ್ಕೆ ಮೊನ್ನೆ ಕಾಲ ಕೂಡಿ ಬಂದಿದೆ. ಡೇವಿಡ್ ಜೊತೆಯಲ್ಲೇ ಗಾಂಜಾ ಹೊಡೆಯುತ್ತಿದ್ದ ಆರೋಪಿಗಳು ಮಳೆ ಬರ್ತಿದೆ ಅಂತ ಹೊರಟಿದ್ರು…

ಇದನ್ನೇ ಕಾಯ್ತಿದ್ದ ಸ್ನೇಹಿತರು ರಾಯಚಂದ್ರಪುರ ಬಸ್ ಸ್ಟ್ಯಾಂಡ್ ಬಳಿ ಕಾದು, ಆತ ಬರ್ತಿದ್ದ ಹಾಗೇ ತಲೆ ಕಡಿದು ನಂತರ ಮಹೇಶನ ಮರ್ಯಾದೆ ತೆಗೆದ ಸ್ಥಳದಲ್ಲೇ ಡೇವಿಡ್ ತಲೆ ತಂದಿಟ್ಟು ತಮ್ಮ ಸೇಡು ತೀರಿಸಿಕೊಂಡಿದ್ದಾರೆ. ಇದೀಗ ಪೊಲೀಸರ ಬಲೆಗೆ ಬಿದ್ದು ಪರಪ್ಪನ ಅಗ್ರಹಾರ ಜೈಲು ಪಾಲಾಗಿ ಮುದ್ದೆ ಮುರೀತಿದ್ದಾರೆ…

LEAVE A REPLY

Please enter your comment!
Please enter your name here