Home Elections 2019 3-4 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ.. 6 ಮಂದಿ ವಲಸಿಗರಿಗೆ ಮಾತ್ರ ಮಂತ್ರಿ ಭಾಗ್ಯ..! ಮೂಲ...

3-4 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ.. 6 ಮಂದಿ ವಲಸಿಗರಿಗೆ ಮಾತ್ರ ಮಂತ್ರಿ ಭಾಗ್ಯ..! ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಸಿಂಹಪಾಲು..!

9103
0
SHARE

ಅಂತೂ ಇಂತು ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಮೂರು ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಘೋಷಿಸಿದ್ದಾರೆ. ಆದರೆ, ಅನ್ಯ ಪಕ್ಷಗಳಿಂದ ವಲಸೆ ಬಂದು, ಉಪಚುನಾವಣೆಯಲ್ಲಿ ಗೆದ್ದು ಬಂದಿರುವ ಅಷ್ಟೂ ಮಂದಿ,11 ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ.ಖಾಲಿ ಇರುವ 16 ಸಚಿವ ಸ್ಥಾನಗಳ ಪೈಕಿ ಉಪಚುನಾವಣೆಯಲ್ಲಿ ಗೆದ್ದಿರುವ 6 ಜನರಿಗೆ ಮಾತ್ರ ಸಚಿವ ಸ್ಥಾನದ ಭಾಗ್ಯ ಸಿಗಲಿದೆ ಎನ್ನಲಾಗುತ್ತಿದೆ.

ಪ್ರಸಕ್ತ ಸಚಿವ ಸಂಪುಟದಲ್ಲಿರುವ ಮೂವರ ಸ್ಥಾನ ಪಲ್ಲಟವಾಗುವ ಸಾಧ್ಯತೆಗಳೂ ಇವೆ.ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.ಸಂಪುಟ ವಿಸ್ತರಣೆಗೆ ಜನವರಿ 14 ರವರೆಗೆ ಕಾಯಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕುತ್ತಿದ್ದ ವಲಸಿಗ ಶಾಸಕರ ಹಠ ಗೆದ್ದಿದೆ.ಆದರೆ, ಈ ಬಾರಿ ಮೂಲ ಬಿಜೆಪಿರಿಗರಿಗೆ ಸಿಂಹಪಾಲು ಸಿಗುವ ಲಕ್ಷಣಗಳು ಕಂಡು ಬರುತ್ತಿವೆ. ಅನ್ಯಪಕ್ಷಗಳಿಂದ ವಲಸೆ ಬಂದು ಉಪಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರ ಪೈಕಿ ಕೇವಲ 6 ಮಂದಿಗೆ ಮಾತ್ರ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

ಸಚಿವ ಸ್ಥಾನ ಪಡೆಯಲಿರುವ ವಲಸಿಗರು,ರಮೇಶ್ ಜಾರಕಿಹೊಳಿ-ಗೋಕಾಕ್ ಶಾಸಕ,ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ ಶಾಸಕ,ಬಿ.ಸಿ.ಪಾಟೀಲ್-ಹಿರೇಕೆರೂರು ಶಾಸಕ, ಎಸ್.ಟಿ.ಸೋಮಶೇಖರ್-ಯಶವಂತಪುರ ಶಾಸಕ,ನಾರಾಯಣಗೌಡ-ಕೆ.ಆರ್.ಪೇಟೆ ಶಾಸಕ, ಆರ್.ಶಂಕರ್- ಮಾಜಿ ಸಚಿವ.ಉಳಿದಂತೆ ಶಿವರಾಮ್ ಹೆಬ್ಬಾರ್,ಮಹೇಶ್ ಕುಮಟಳ್ಳಿ, ಶ್ರೀಮಂತಪಾಟೀಲ್,ಕೆ. ಗೋಪಾಲಯ್ಯ, ಬೈರತಿ ಬಸವರಾಜು ಅವರಿಗೆ ಪ್ರಭಾವಿ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ಸಮಾಧಾನ ಪಡಿಸಲು ಸಿಎಂ ಯಡಿಯೂರಪ್ಪ ಉದ್ದೇಶಿಸಿದ್ದಾರೆ.ಆರ್.ಶಂಕರ್ ರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಸೋತಿರುವ ಹೆಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ.ನಾಗರಾಜ್ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಿ ಸಮಾಧಾನ ಪಡಿಸಲು ಸಿಎಂ ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಮೂಲ ಬಿಜೆಪಿಗರೂ ಸಹ ಸಚಿವ ಸ್ಥಾನಕ್ಕಾಗಿ ಪಕ್ಷದ ವರಿಷ್ಠರ ಮೇಲೆ ತೀವ್ರ ಒತ್ತಡ ತರುತ್ತಿರುವ ಹಿನ್ನೆಲೆಯಲ್ಲಿ 8ಕ್ಕೂ ಹೆಚ್ಚು ಸಚಿವ ಸ್ಥಾನಗಳು ಮೂಲ ಬಿಜೆಪಿಗರ ಪಾಲಾಗಲಿವೆ. ಮೂವರು ಹಾಲಿ ಸಚಿವರ ಸ್ಥಾನ ಪಲ್ಲಟವಾಗುವ ಸಾಧ್ಯತೆಗಳಿವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಟ ಶ್ರೀನಿವಾಸಪೂಜಾರಿಯವರಿಗೆ ಬದಲಾಗಿ, ಬಂಟ ಸಮುದಾಯಕ್ಕೆ ಸೇರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಥವಾ ಹರೀಶ್ ಪೂಂಜಾಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಶಶಿಕಲಾಜೊಲ್ಲೆಯವರನ್ನು ಕೆಳಗಿಳಿಸಿ, ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಬೀದರ್ ಜಿಲ್ಲೆಯಲ್ಲಿ ಪ್ರಭುಚೌಹಾಣ್ ಗೆ ಸಚಿವ ಸ್ಥಾನದ ಅರ್ದಚಂದ್ರ ಪ್ರಯೋಗವಾಗಲಿದೆ ಅವರ ಬದಲಿಗೆ ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಸಚಿವ ಸ್ಥಾನ ಪಡೆಯಲಿರುವ ಮೂಲ ಬಿಜೆಪಿಗರು,ಹಾಲಾಡಿ ಶ್ರೀನಿವಾಸ ಶೆಟ್ಟಿ/ಹರೀಶ್ ಪೂಂಜಾ, ಎಸ್.ಅಂಗಾರ ,ಉಮೇಶ್ ಕತ್ತಿ, ರಾಮದಾಸ್, ಅರವಿಂದ ಲಿಂಬಾವಳಿ,  ಎಂ.ಪಿ.ರೇಣುಕಾಚಾರ್ಯ.ಇದಲ್ಲದೆ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಹಾಗೂ ವೈ.ಎ.ನಾರಾಯಣಸ್ವಾಮಿ ಕೂಡ ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸಿದ್ದಾರೆ.ಲಕ್ಷ್ಮಣ ಸವದಿಯವರನ್ನು ಉಪಮುಖ್ಯಮಂತ್ರಿ ಹುದ್ದೆಯಲ್ಲೇ ಮುಂದವರಿಸಬೇಕು ಎಂದು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ.ಸವದಿ ಮುಂದುವರಿಯಬೇಕಾದರೆ, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು. ಪ್ರಸಕ್ತ ಯಾವುದೇ ಎಂಎಲ್ ಸಿ ಸ್ಥಾನ ಖಾಲಿ ಇಲ್ಲ.ಜೂನ್ ನಲ್ಲಿ 7 ಸ್ಥಾನಗಳು ತೆರವಾಗುತ್ತವೆ. ಅಲ್ಲಿಯವರೆಗೆ ಕಾಯುವ ವ್ಯವಧಾನ ಬಿಜೆಪಿಯಲ್ಲಿ ಯಾರಿಗೂ ಇಲ್ಲ.

ಹಾಗಾಗಿ ರವಿಕುಮಾರ್ ರಿಂದ ರಾಜೀನಾಮೆ ಕೊಡಿಸಿ, ಅದರಿಂದ ತೆರವಾಗುವ ಸ್ಥಾನ ಲಕ್ಷ್ಮಣ ಸವದಿಯವರಿಗೆ ನೀಡುವ ಚಿಂತನೆಯೂ ನಡೆದಿದೆ.ಆದರೆ, ಅದು ಯಾವುದೂ ಅಂದುಕೊಂಡಷ್ಟು ಸುಲಭವಲ್ಲ.

LEAVE A REPLY

Please enter your comment!
Please enter your name here