Home Latest ಭದ್ರತಾ ಪಡೆ ಸಿಬ್ಬಂದಿಯ ಭರ್ಜರಿ ಬೇಟೆ ; ಮೂವರ ಉಗ್ರರ ಎನ್​ಕೌಂಟರ್

ಭದ್ರತಾ ಪಡೆ ಸಿಬ್ಬಂದಿಯ ಭರ್ಜರಿ ಬೇಟೆ ; ಮೂವರ ಉಗ್ರರ ಎನ್​ಕೌಂಟರ್

138
0
SHARE

ಜಮ್ಮು ಮತ್ತು ಕಾಶ್ಮೀರ್​: ಕಾಶ್ಮೀರದಲ್ಲಿ ಯೋಧರು ಉಗ್ರರ ಬೇಟೆಯನ್ನು ಮುಂದುವರಿಸಿದ್ದಾರೆ. ಅನಂತನಾಗ್​ ಜಿಲ್ಲೆಯ ಖುಲ್​ಚೋಹರ್​ ಪ್ರದೇಶದಲ್ಲಿ ಇಂದು ಮೂವರು ಭಯೋತ್ಪಾದಕರನ್ನು ಎನ್​ಕೌಂಟರ್​ ಮಾಡಿದ್ದಾರೆ.

ಯೋಧರು ಮತ್ತು ಪೊಲೀಸರಿಂದ ಜಂಟಿ ಕಾರ್ಯಾಚರಣೆ​ ಮುಂದುವರಿದಿದ್ದು, ಹತರಾಗಿರುವ ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಕಾಶ್ಮೀರ್​ ವಲಯದ ಪೊಲೀಸರು ಮಾಹಿತಿ ನೀಡಿದ್ದಾರೆ.

ಜೂನ್​ 26 ರಂದು ಮೂವರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದರು. ಇಂದು ಛೇವಾ ಉಲ್ಲಾರ್​ ಗ್ರಾಮದಲ್ಲಿ ಉಗ್ರರು ಇರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ್​ ಪೊಲೀಸರು ನೀಡಿರುವ ಮಾಹಿತಿ ಆಧರಿಸಿ ಈ ಕಾರ್ಯಚರಣೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here