Home Crime 4 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಹೊರಬಂದ ಗಂಡ-ಹೆಂಡತಿ..! ಧಾರವಾಡ ಕಟ್ಟಡ ದುರಂತದಲ್ಲಿ ಮನಕಲಕುವ...

4 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಹೊರಬಂದ ಗಂಡ-ಹೆಂಡತಿ..! ಧಾರವಾಡ ಕಟ್ಟಡ ದುರಂತದಲ್ಲಿ ಮನಕಲಕುವ ಘಟನೆ..! ಸಾವಿನ ಮನೆ ಕದತಟ್ಟಿ ಎದ್ದು ಬಂದ ಯುವಕ..!

1709
0
SHARE

ಧಾರವಾಡ ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾವಿನ ಕಟ್ಟಡಕ್ಕೆ ಇದುವರೆಗೂ 15 ಬಲಿ ಆಗಿದೆ. ಅವಶೇಷಗಳಡಿ ಸಿಲುಕಿ 4 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಮೂವರು ಸಾವನ್ನು ಗೆದ್ದು ಬಂದಿದ್ದಾರೆ.

ಇನ್ನು ಮೃತರ ಕುಟುಂಬಕ್ಕೆ ಜಿಲ್ಲಾಧಿಕಾರಿ 2 ಲಕ್ಷ ಪರಿಹಾರ ವಿತರಣೆ ಮಾಡಿದ್ದಾರೆ. ಅಲ್ಲದೆ ಕಟ್ಟದ ನಾಲ್ವರು ಮಾಲೀಕರು ಕೂಡ ಪೊಲೀಸರಿಗೆ ಶರಣಾಗಿದ್ದಾರೆ.ಧಾರವಾಡ ಕಟ್ಟಡ ದುರಂತದಲ್ಲಿ ಮನಕಲಕುವ ಘಟನೆ ನಡೆದಿದೆ. ಮಂಗಳವಾರ ನಡೆದ ಕಟ್ಟಡ ದುರಂತದಲ್ಲಿ ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆಗಾಗಿ ರಕ್ಷಣಾ ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಲೇ ಇದೆ. ಶುಕ್ರವಾರ ಯಮನೊಂದಿಗೆ ಸೆಣಸಾಡಿ ಗಂಡ-ಹೆಂಡತಿ ಇಬ್ಬರು ಆಚೆ ಬಂದಿದ್ದಾರೆ.

ಇನ್ನೊಂದೆ ಸಾವಿನ ಮನೆ ಕದ ತಟ್ಟಿದ ಯುವಕ ಸೋಮು ಕೂಡ ಬದುಕಿ ಬಂದಿದ್ದಾರೆ.ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಿಲೀಪ್ ಹಾಗೂ ಸಂಗೀತಾ ದಂಪತಿಯನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗಾರೆ ಕೆಲಸಕ್ಕೆ ತೆರಳಿದ್ದ ದಂಪತಿ ಅವಶೇಷಗಳಡಿ ಸಿಲುಕಿಕೊಂಡಿದ್ರು. ರಕ್ಷಣಾ ಸಿಬ್ಬಂದಿಯ ಸಂಪರ್ಕದಲ್ಲಿದ್ದ ದಿಲೀಪ್‌ರನ್ನು ಬೆಳಗ್ಗೆಯೇ ಹೊರಕರೆತರುಲು ಪ್ರಯತ್ನಿಸಲಾಯ್ತು. ಆದ್ರೆ ತನ್ನ ಹೆಂಡತಿಯನ್ನು ಬಿಟ್ಟು ಬರಲು ದಿಲೀಪ್ ಒಪ್ಪಲಿಲ್ಲ. ಕಟ್ಟಡ ಕುಸಿದು ಬಿದ್ದಾಗ ದಿಲೀಪ್ ಪತ್ನಿ ಸಂಗೀತಾ ಕಾಲು ಮುರಿದಿತ್ತು.

ಹೇಗಾಗಿ ಹೆಂಡತಿಯ ಜೊತೆಯೇ ಆಚೆ ಬರಲು ದಿಲೀಪ್ ಸೆಣೆಸಾಡಿದ್ದಾರೆ. ರಕ್ಷಣಾ ಸಿಬ್ಬಂದಿಗೆ ಸಹಕಾರ ಕೊಟ್ಟು ತಾನೇ ಕೈಯ್ಯಿಂದ ರಾಡ್ ಮುರಿದು ಹೆಂಡತಿ ಜೊತೆಯೇ ಹೊರಬಂದಿದ್ದಾರೆ.ಇನ್ನು ಸೋಮು ಎಂಬ ಯುವಕನನ್ನು ರಕ್ಷಿಸುವಲ್ಲಿಯೂ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸೋಮು ಜೆಡಿಎಸ್ ಕಾರ್ಪೊರೇಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ಮಧ್ಯಾಹ್ನ ಊಟವಾದ ಬಳಿಕ ಕಚೇರಿಯಲ್ಲಿ ಕುಳಿತಿದ್ದ.

ಈ ವೇಳೆ ದುರಂತ ಸಂಬವಿಸಿದ್ದು ನಾನು 4 ದಿನಗಳ ಬಳಿಕ ಬೆಳಕು ನೋಡಿದೆ. 2 ದಿನಗಳ ಕಾಲ ಪಕ್ಕದ ಅಂಗಡಿಯಲ್ಲಿದ್ದವರ ಧ್ವನಿ ಕೇಳ್ತಿತ್ತು. ಆಮೇಲೆ ಯಾವ ಸದ್ದು ಕೇಳಲಿಲ್ಲ. ಆದ್ರೂ ಗಟ್ಟಿ ಮನಸ್ಸು ಮಾಡಿಕೊಂಡು ಮಲಗಿಯೇ ಕಾಲ ಕಳೆದೆ. ಮತ್ತೆ ಬದುಕಿ ಬರುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ ಎಂದು ಘಟನೆ ಬಗ್ಗೆ ವಿವರಿಸ್ತಾರೆ.

ಇನ್ನು ಕಟ್ಟಡ ನಾಲ್ವರು ಮಾಲೀಕರು ಸರೆಂಡರ್ ಆಗಿದ್ದಾರೆ. ದುರಂತದ ಬಗ್ಗೆ ನಮಗೂ ನೋವಿದೆ. ಇಂಜಿನಿಯರ್ ಕೊಟ್ಟ ಪ್ಲಾನ್ ಪ್ರಕಾರವೇ ನಾವು ಕಟ್ಟಡ ಕಟ್ಟಿದ್ದೇವೆ. ಬಿರುಕು ಬಿಟ್ಟ ಬಗ್ಗೆಯೂ ಪ್ರಶ್ನಿಸಿದ್ವಿ. ಆದ್ರೆ ಅವರು ಪ್ಯಾಚಪ್ ಮಾಡಿ ಕೊಡ್ತೀವಿ ಎಂದು ಹೇಳಿದ್ರು ಎಂದು ಹೇಳಿದ್ದಾರೆ.

ಇದೆಲ್ಲದರ ನಡುವೆ ಮೃತದೇಹಳನ್ನು ಕೊಡುವಲ್ಲಿ ವಿಳಂಬವಾಗಿದ್ದಕ್ಕೆ ಮೃತರ ಸಂಬಂಧಿಕರು ಅಸಮಾಧಾನವನ್ನು ಆಕ್ರೋಶ ಕೂಡ ಹೊರಹಾಕಿದ್ರು. ಇನ್ನು ಕಟ್ಟಡ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ 2 ಲಕ್ಷ ಪರಿಹಾರದ ಚೆಕ್ ವಿತರಿಸಿದ್ದಾರೆ.

LEAVE A REPLY

Please enter your comment!
Please enter your name here