Home Cinema 400ರೂ ಕೊಟ್ಟು ನೋಡಬಹುದೇ “ದಿ ವಿಲನ್” ಸಿನಿಮಾವನ್ನ..!? ಮೊದಲ ದಿನ ಸಿನಿಮಾ ನೋಡಿದ್ಮೇಲೆ ಅಂದಿದ್ದೇನು ಭಕ್ತಗಣ..!?

400ರೂ ಕೊಟ್ಟು ನೋಡಬಹುದೇ “ದಿ ವಿಲನ್” ಸಿನಿಮಾವನ್ನ..!? ಮೊದಲ ದಿನ ಸಿನಿಮಾ ನೋಡಿದ್ಮೇಲೆ ಅಂದಿದ್ದೇನು ಭಕ್ತಗಣ..!?

1629
0
SHARE

ದಿ ವಿಲನ್ ಜಾತ್ರೆ ಇಂದು ಶುರುವಾಗಿದೆ. ಬೆಳ್ಳಂ ಬೆಳ್ಳಗ್ಗೆ ೬ ಘಂಟೆಗೆ ಸಿನಿಮಾವನ್ನ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. ದಾಖಲೆ ಮಾಡುವ ಇರಾದೆಯೊಂದಿಗೆ ದಾಖಲೆ ಮಟ್ಟದಲ್ಲಿ ಬಿಡುಗಡೆಯಾದ ದಿ ವಿಲನ್ ಸಿನಿಮಾದ ಕಥೆಗೂ ರಾಮಾಯಣಕ್ಕೂ ಸಂಬಂಧವಿದೆ.ಅದೊಂದು ಹಳ್ಳಿ ಅಲ್ಲೊಂದು ಮುದ್ದಾದ ಕುಟುಂಬ. ಕುಟುಂಬದ ಯಜಮಾನನಿಗೆ ನಾಟಕ ಅಂದ್ರೆ ಹುಚ್ಚು, ಅದ್ರಲ್ಲೂ ರಾವಣನ ಪಾತ್ರ ಅಚ್ಚುಮೆಚ್ಚು.

ಆದ್ರೇ ಮನೆಯ ಯಜಮಾನ್ತಿಗೆ ರಾಮನ ಮೇಲೆ ಒಲವು. ಹಾಗಾಗಿ, ಮಕ್ಕಳನ್ನ.. ರಾಮನಂತೆ ಬೆಳಸಬೇಕು, ತನ್ನ ಮಕ್ಕಳು ರಾಮನಂತೆ ಆಗಬೇಕೆನ್ನುವ ಉದ್ದೇಶದಿಂದ, ತನ್ನ ಮಕ್ಕಳಿಗೆ ರಾಮ್ ಹಾಗೂ ರಾಮಯ್ಯ ಎಂದು ಹೆಸರಿಟ್ಟಿರುತ್ತಾಳೆ ತಾಯಿ. ಹೀಗಿರುವಾಗ.. ರಾವಣನ ಕೀರಿಟಕ್ಕೆ ಯಜಮಾನ್ತಿ ಬೆಂಕಿ ಇಡುತ್ತಾಳೆ. ಅಲ್ಲಿಂದ ಕಥೆ ಅನಾವರಣವಾಗುತ್ತಾ ಹೋಗುತ್ತೆ. ರಾಮ್ ಅಂದ್ರೆ ಸುದೀಪ ಒಬ್ಬ ಡಾನ್ ಆಗಿ ಬೆಳೆದು ನಿಂತಿರ‍್ತಾರೆ. ಅಂತರಾಷ್ಟ್ರೀಯ ಡಾನ್ ಆಗುವತ್ತನೂ ದಾಪುಗಾಲು ಹಾಕ್ತಿರ‍್ತಾರೆ. ಹಾಗಾಗೇ, ಅಂತರಾಷ್ಟ್ರೀಯ ಪೊಲೀಸರು ಕೂಡಾ ಇದೇ ರಾಮ್ ಅಲಿಯಾಸ್ ಸುದೀಪ ಅವ್ರನ್ನ ಹುಡುಕುತ್ತಿರುತ್ತಾರೆ.

ಇತ್ತ, ಇದೇ ರಾಮ್‌ಗಾಗಿ ರಾಮಯ್ಯ ಅಂದ್ರೆ ಡಾ.ಶಿವರಾಜ್ ಕುಮಾರ್ ಹುಡುಕಾಟ ನಡೆಸಿರ‍್ತಾರೆ. ರಾಮ್‌ನಿಗಾಗಿ ರಾಮಯ್ಯನ ಹುಡುಕಾಟ ನಂತ್ರ ಫಾರಿನ್ ಬೀದಿಗಳಿಗೆ ಶಿಫ್ಟ್ ಆಗುತ್ತೆ. ನಂತ್ರ ನಡೆಯೋದು ರಾಮ್ ಹಾಗೂ ರಾಮಯ್ಯ ನಡುವಿನ ಕಣ್ಣಾಮುಚ್ಚಾಲೆ ಆಟ. ಅಸಲಿಗೆ, ರಾಮನ ತಲಾಶೆಯನ್ನ ರಾಮಯ್ಯ ಮಾಡ್ತಿರೋದೇಕೆ. ರಾಮ್‌ನನ್ನಾಗಿ ಮಾಡಬೇಕೆಂದು ಹೊರಟ ತಾಯಿಯ ಪ್ರಯತ್ನದ ನಡುವೆಯೂ ರಾಮ್ ದಾರಿ ತಪ್ಪಿದ್ದು ಹೇಗೆ, ರಾಮಯ್ಯನಿಗೆ ರಾಮ ಸಿಗ್ತಾನಾ, ಚಿತ್ರದಲ್ಲಿ ಆಮಿ ಜಾಕ್ಸನ್ ಪಾತ್ರವೇನು. ಆಮಿ ಜಾಕ್ಸನ್ ಯಾರಿಗೆ ನಾಯಕಿ. ಕಣ್ಣಾಮುಚ್ಚಾಲೆ ಆಟದಲ್ಲಿ ಮುಂದೇನಾಗುತ್ತೆ.. ಇವೆಲ್ಲ ಕೂತುಹಲಕ್ಕೆ ಉತ್ತರ ನೀವ್ ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಪಡೆಯಬೇಕು.

ಯಸ್, ದಿ ವಿಲನ್ ಸಿನಿಮಾದ ಕಥೆಯನ್ನ ಪ್ರೇಮ್ ಹೆಣೆದ ರೀತಿ ಇದು. ಇದು, ಪಕ್ಕಾ ಕಮರ್ಷಿಯಲ್ ಸಿನಿಮಾ. ಇಲ್ಲಿ, ಪ್ರೀತಿಯ ಕಥನ ಇದೆ. ತಾಯಿಯ ಮಮತೆನೂ ಇದೆ. ಸಾಹಸ ಸನ್ನಿವೇಶಗಳೂ ಮೈನವಿರೇಳಿಸಿದ್ರೆ, ಅಮ್ಮನ ಪ್ರೀತಿ ಕಣ್ಣಂಚಿನಲ್ಲಿ ನೀರು ತರಿಸುತ್ತೆ. ಇದೆಲ್ಲದ್ರ ನಡುವೆ.. ಕಣ್ಮನ ಸೆಳೆಯಲು ಸಿನಿಮಾದಲ್ಲಿ ಸಪೂರ ಸುಂದರಿ ಆಮಿ ಜಾಕ್ಸನ್ ಕೂಡಾ ಇದ್ದಾರೆ.
ಒಟ್ನಲ್ಲಿ ಕನ್ನಡದಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳೇ ಅಪರೂಪ ಅನ್ನುವ ಕಾಲದಲ್ಲಿ, ದಿ ವಿಲನ್ ಬಂದಿದೆ.

ಚಕ್ರವರ್ತಿದ್ವಯರ ಸಮಾಗಮವಾಗಿದೆ. ಇದೇ ಸಮಾಗಮಕ್ಕೆ ಚಿತ್ರದ ಕಥೆನೂ ಸಾಥ್ ನೀಡಿದೆ. ರಾಮನಾಗಿ ಪ್ರೀತಿಸು ರಾವಣನಾಗಿ ಯೋಚಿಸು ಅನ್ನುವ ಮೂಲಕ ಪ್ರೇಮ್ ದಿ ವಿಲನ್ ಚಿತ್ರವನ್ನ ಅಭಿಮಾನಿಗಳ ಮಡಿಲಿಗೆ ಹಾಕಿದ್ದಾರೆ.ದಿ ವಿಲನ್ ಬಲಗಾಲಿಟ್ಟು ಚಿತ್ರಮಂದಿರಕ್ಕೆ ಬಂದಾಗಿದೆ. ಎಲ್ಲಡೆ ಅದ್ದೂರಿ ದಿ ವಿಲನ್ ಜಾತ್ರೆನೂ ನಡೆಯುತ್ತಿದೆ. ದಿ ವಿಲನ್ ಕಥೆ ಫೈನಲಿ ರಿವೀಲ್ ಆಗಿದೆ. ಇದ್ರ ನಡುವೆ ಶಿವಣ್ಣ ಹಾಗೂ ಸುದೀಪ ಅಭಿನಯಕ್ಕೆ ಎಲ್ಲರೂ ಮತ್ತೊಮ್ಮೆ ಬಹುಪರಾಕ್ ಹಾಕ್ತಿದ್ದಾರೆ

ಕಣ್ಣಲ್ಲೇ ಕೊಲ್ಲೋ ಶಿವಣ್ಣ..!:ಯಸ್, ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಗ್ಗೆ ಯಾರು ಕೆಮ್ಮಂಗಿಲ್ಲ. ನೂರು ಸಿನಿಮಾಗಳ ಈ ಸರದಾರ ರಾಮಯ್ಯನ ರೂಪದಲ್ಲಿ ಮತ್ತೊಮ್ಮೆ ಇಷ್ಟವಾಗ್ತಾರೆ, ಅಭಿಮಾನಿಗಳ ಕಿಕ್ಕನ್ನೂ ಏರಿಸುತ್ತಾರೆ. ಕಣ್ಣಲ್ಲೇ ಕೊಲ್ಲುತ್ತಾರೆ. ಅದ್ರಲ್ಲೂ ಭಾವನಾತ್ಮಕ ಸನ್ನಿವೇಶಗಳಲ್ಲಂತೂ ಶಿವಣ್ಣನಿಗೆ ಶಿವಣ್ಣನೇ ಸಾಟಿ…

ಸ್ಟೈಲಿಶ್ ಡಾನ್ ಸುದೀಪ..!:ಅಭಿನಯ ಚಕ್ರವರ್ತಿ ಸುದೀಪ ಅವ್ರ ಅವತಾರವಿಲ್ಲಿ ಸೂಪರೋ ಸೂಪರ್. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ, ನಾನಾ ಗೆಟಪ್ಪಿನಲ್ಲಿ ಕಾಣಸಿಗುವ ಸುದೀಪ ಅಭಿನಯ ಮತ್ತೊಮ್ಮೆ ಎಲ್ಲರನ್ನೂ ನಿಬ್ಬೇರಗಾಗಿಸುತ್ತೆ. ಸಿಂಪಲ್ಲಾಗ್ ಹೇಳಬೇಕಂದ್ರೆ ದಿ ವಿಲನ್ ಚಿತ್ರದಲ್ಲಿ ಸುದೀಪ ಅವ್ರನ್ನ ನೋಡೋದೇ ಒಂದು ಹಿತವಾದ ಹಾಗೂ ಚೆಂದದ ಅನುಭವ

ಪ್ಲಸ್ ಪಾಯಂಟ್ಸ್–;ಸುದೀಪ ಹಾಗೂ ಶಿವಣ್ಣ ಜುಗಲಬಂಧಿ..!
ಹೌದು, ದಿ ವಿಲನ್ ಚಿತ್ರವನ್ನ ಸುದೀಪ ಹಾಗೂ ಶಿವಣ್ಣ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಪರದೆ ಮೇಲೆ ಇಬ್ಬರು ಮುಖಾಮುಖಿಯಾಗುವ ಸನ್ನಿವೇಶಗಳೂ ಕಮ್ಮಿ ಇದ್ದರೂ, ನಟನೆಯಲ್ಲಿ ಇಬ್ಬರ ಪೈಪೋಟಿ ನೋಡುವ ಮಜನೇ ಬೇರೆ.

ಪ್ರೇಮ್ ಜಾಣ್ಮೆ:ಸುದೀಪ ಹಾಗೂ ಶಿವಣ್ಣ ಇಬ್ಬರು ಸ್ಟಾರ್ ನಟರನ್ನ ಹಾಕಿಕೊಂಡು, ನಿಭಾಯ್ಸೋದು ಕಷ್ಟ. ಹೀಗಿದ್ದೂ.. ಇದೇ ಸವಾಲ್‌ನ್ನ ಸ್ವೀಕರಿಸಿ, ಅದನ್ನ ಮಾಡಿ ತೋರಿಸಿರುವ ಇಬ್ಬರೂ ಸ್ಟಾರ್ ನಟರ ಅಭಿಮಾನಿಗಳಿಗೂ ಇಷ್ಟವಾಗುವಂತೆ ಚಿತ್ರವನ್ನ ಹೆಣೆದಿದ್ದಾರೆ. ಡೈಲಾಗ್ಸ್, ಸಾಂಗ್ಸ್, ಫೈಟ್ಸ್ ಎಲ್ಲದ್ರಲ್ಲೂ ಇಬ್ಬರಿಗೂ ಅಷ್ಟೇ ಪ್ರಾಮುಖ್ಯತೆಯನ್ನ ನೀಡುವ ಪ್ರಾಮಾಣಿಕ ಯತ್ನ ಮಾಡಿದ್ದಾರೆ.

ಮೈನಸ್ ಪಾಯಂಟ್ಸ್–:ಅಡ್ಡಗಾಲು ಹಾಕುವ ಹಾಡುಗಳು:ದಿ ವಿಲನ್ ಚಿತ್ರದ ಹಾಡುಗಳು, ಆಗ್ಲೇ ಸೂಪರ್ ಹಿಟ್ ಅನಿಸಿಕೊಂಡಿವೆ. ಅಭಿಮಾನಿಗಳಿಗೂ ಇಷ್ಟವಾಗಿವೆ. ಬಟ್, ದಿ ವಿಲನ್ ಚಿತ್ರಕ್ಕೆ ಇದೇ ದಿ ವಿಲನ್ ಹಾಡುಗಳು ವಿಲನ್ ಆಗಿವೆ. ಹೌದು, ಕಥೆಯ ವೇಗಕ್ಕೆ ಹಾಡುಗಳು ಅಲ್ಲಲ್ಲಿ ಅಡ್ಡಗಾಲು ಹಾಕಿವೆ. ಇದು ಕಿರಿಕಿರಿಯಂತೇನೂ ಭಾಸವಾಗುತ್ತೆ.

ಬೋರ್ ಹೊಡೆಸುವ ದ್ವೀತಿಯಾರ್ಧ:ಹೌದು, ಮೊದಲಾರ್ಧ.. ಬಿಗಿಯಾದ ನಿರೂಪಣೆನಿಂದ ಸೀಟಿನ ಅಂಚಿಗೆ ಕೂರಿಸುವಲ್ಲಿ ಯಶಸ್ವಿಯಾಗುವ ಪ್ರೇಮ್, ದ್ವೀತಿಯಾರ್ಧದಲ್ಲಿ ಸ್ವಲ್ಪ ಮಟ್ಟಿಗೆ ಬೋರ್ ಹೊಡೆಸುತ್ತಾರೆ. ಕೆಲ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡಬಹುದಿತ್ತು. ಈ ಮೂಲಕ ಸುಧೀರ್ಘ ೩ ಘಂಟೆಯ ಇರುವ ದಿ ವಿಲನ್ ಚಿತ್ರದ ಅವಧಿಯನ್ನ ಕಡಿತಗೊಳಿಸಬಹುದಿತ್ತು. ಇದು ಬಿಟ್ಟರೆ ಕೆಲ ಕಡೆ ವೈಭವಿಕರಣ ಹೆಚ್ಚಾಯ್ತೇನೋ ಅನ್ನುವ ಭಾವನೆನೂ ಬರುತ್ತೆ.

ಅದೇನೆ ಇರ‍್ಲಿ, ಫ್ರೇಮ್ ಟು ಫ್ರೇಮ್ ಪ್ರೇಮ್ ಕೈಚಳಕ ಹಾಗೂ ಕಲ್ಪನೆಯಲ್ಲಿ ಮೂಡಿ ಬಂದಿರುವ ದಿ ವಿಲನ್ ಸಿನಿಮಾವನ್ನ, ನಿರೀಕ್ಷೆಗಳನ್ನ ಇಟ್ಟುಕೊಳ್ಳದೇ ಹೋಗಿ ನೋಡಿದ್ದಲ್ಲಿ ಇಷ್ಟವಾಗುವಲ್ಲಿ ಯಾವ ಅನುಮಾನನೂ ಇಲ್ಲ. ದಿ ವಿಲನ್ ಚಿತ್ರಕ್ಕೆ ಪ್ರಜಾಟಿವಿ ನೀಡ್ತಿರೋದು 3***

LEAVE A REPLY

Please enter your comment!
Please enter your name here