4ನೇ ಮದುವೆಗೂ ಗುಡ್ ಬಾಯ್ ಹೇಳಿದ ಮಾಧ್ಯಮ ದಿಗ್ಗಜ: 6 ವರ್ಷದ ದಾಂಪತ್ಯ ಜೀವನ ಕೊಲೆಗೊಳಿಸಿದ 91 ವರ್ಷದ ಮುರ್ಡೋಕ್, 66 ಮಾಡೆಲ್ ಹಾಲ್

ಅಂತರಾಷ್ಟ್ರೀಯ

ವಾಷಿಂಗ್ಟನ್: ಮಾಧ್ಯಮ ದಿಗ್ಗಜ, ಕೋಟ್ಯಧಿಪತಿ 91 ವರ್ಷದ ರೂಪರ್ಟ್ ಮುರ್ಡೋಕ್ ಮತ್ತು ರೂಪದರ್ಶಿ 61 ವರ್ಷದ ಜೆರಿ ಹಾಲ್ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ತಾವು ಬೇರ್ಪಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ ಐದೇ ವಾರಗಳಲ್ಲಿ ಅವರಿಬ್ಬರೂ ಡೈವೋರ್ಸ್ ಪಡೆದುಕೊಂಡಿದ್ದು, ಮುಂದೆ ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿರುವ ಜೆರಿ ಹಾಲ್ ಅವರ ವಕೀಲ ರೊನಾಲ್ಡ್ ಬ್ರಾಟ್ ಅರ್ಜಿ ಸಲ್ಲಿಸಿದ್ದು,. ಪೂರ್ವಾಗ್ರಹಗಳಿಲ್ಲದೆ ವಿಚ್ಛೇದನ ಮನವಿಯನ್ನು ವಜಾಗೊಳಿಸಬೇಕು ಎಂದು ಅದರಲ್ಲಿ ಕೋರಲಾಗಿತ್ತು. ಆದರೆ ಈ ಬೆಳವಣಿಗೆ ನಡೆದ ಕೆಲವೇ ಗಂಟೆಗಳಲ್ಲಿ, ಹಾಲ್ ಮತ್ತು ಮುರ್ಡೋಕ್ ಅವರು ತಮ್ಮ ‘ಬ್ರೇಕಪ್’ ಒಪ್ಪಂದವನ್ನು ಪೂರ್ಣಗೊಳಿಸಿದ್ದು, ಇನ್ನು ಮುಂದೆ ಉತ್ತಮ ಸ್ನೇಹಿತರಾಗಿ ಉಳಿಯುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರೂಪರ್ಟ್ ಹಾಗೂ ಜೆರಿ ಹಾಲ್ ಇಮೇಲ್ ಮೂಲಕ ವಿವಾಹವನ್ನು ಕಡಿದುಕೊಂಡಿದ್ದಾರೆ.

2014ರಲ್ಲಿ ವೆಂಡಿ ಡೆಂಗ್ ಅವರಿಂದ ವಿಚ್ಛೇದನ ಪಡೆದ ಬಳಿಕ ಮುರ್ಡೋಕ್  ಬಳಿಕ ಹಾಲ್ ಅವರನ್ನು ವರಿಸಿದ್ದರು. ಇದು ಮುರ್ಡೋಕ್ ಅವರ ನಾಲ್ಕನೇ ಮದುವೆ. ಹಾಲ್ ಅವರಿಗೆ ಮುರ್ಡೋಕ್ ಜೊತೆ ಮೊದಲ ಮದುವೆ. ಈ ಮೊದಲು 22 ವರ್ಷಗಳ ಕಾಲ ಮಿಕ್ ಜಾಗ್ಗೆರ್ ಜೊತೆ ಜೆರಿ ಹಾಲ್ ಸಂಬಂಧದಲ್ಲಿದ್ದರು. ಜೆರಿ ಹಾಲ್ ಗೆ ನಾಲ್ಕು ಮಕ್ಕಲಿದ್ದಾರೆ.

Leave a Reply

Your email address will not be published.