Home Crime 5 ದಿನದ ಬಾಣಂತಿಯನ್ನ ಮನೆಗೆ ಸೇರಿಸಲಿಲ್ಲ..! ಕೊಟ್ಟಿಗೆಯಲ್ಲಿರುವಂತೆ ಹೇಳದ್ರು ಗಂಡನ ಮನೆಯವರು..!

5 ದಿನದ ಬಾಣಂತಿಯನ್ನ ಮನೆಗೆ ಸೇರಿಸಲಿಲ್ಲ..! ಕೊಟ್ಟಿಗೆಯಲ್ಲಿರುವಂತೆ ಹೇಳದ್ರು ಗಂಡನ ಮನೆಯವರು..!

1560
0
SHARE

ಆಕೆ ಐದು ದಿನದ ಬಾಣಂತಿ, ಹೆರಿಗೆ ನಂತರ ತವರು ಮನೆಯವರು ಹತ್ತಿರ ಸೇರಿಸಿಲ್ಲ, ಅತ್ತ ಗಂಡ ಕೂಡ ನಾಪತ್ತೆ ಆಗಿರೋದ್ರಿಂದ ಗಂಡನ ಮನೆಯವರು ಕೂಡ ಕೊಟ್ಟಿಗೆಯಲ್ಲಿರುವಂತೆ ಹೇಳಿದ್ದಾರೆ. ಹೀಗಾಗಿ ದಾರಿ ಕಾಣದ ಆ ಮಹಿಳೆ ಹೆತ್ತ ಮಕ್ಕಳೊಂದಿಗೆ ಬೀದಿ ಪಾಲಾಗಿದ್ದಾಳೆ.ಹೀಗೆ ದೇವಸ್ಥಾನದ ಆವರಣದಲ್ಲಿ ತನ್ನ ಹಸುಗೂಸು ಮತ್ತು ಎರಡು ವರ್ಷದ ಎಳೆಯ ಕಂದಮ್ಮನೊಂದಿಗೆ ಅನಾಥವಾಗಿ ಮಲಗಿರೋ ಮಹಿಳೆ.

ಚಿತ್ರದುರ್ಗದ ಚಳ್ಳಕೆರೆಯ ನೆಲಗೇತನಹಟ್ಟಿ ನಿವಾಸಿ. ಈಕೆ ನಾಲ್ಕು ವರ್ಷಗಳ ಹಿಂದೆ ಮೊಳಕಾಲ್ಮೂರಿನ ಹಿರೇಹಳ್ಳಿಯ ಮಲ್ಲಿಕಾರ್ಜುನ್ ಎಂಬುವರನ್ನ ಮದುವೆಯಾಗಿದ್ರು. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಈಕೆ ಐದು ದಿನಗಳ ಹಿಂದೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಾರ್ಮಲ್ ಡೆಲಿವರಿ ಆಗಿದ್ರಿಂದ ಎರಡು ದಿನದ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ.

ತವರು ಮನೆಯವರು ಸಹ ನೋಡಿಕೊಳ್ಳಲಿಲ್ಲ:ಬಳಿಕ ಈಕೆ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಾಳೆ, ಆದ್ರೆ ನೋಡಿಕೊಳ್ಳೋರು ಇಲ್ಲ ಅನ್ನೋ ನೆಪ ಒಡ್ಡಿ ತವರು ಮನೆಯವರು ಗಂಡನ ಮನೆಗೆ ಸಾಗ ಹಾಕಿದ್ದಾರೆ. ಈ ನಡುವೆ ಗಂಡ ಎರಡು ತಿಂಗಳಿನಿಂದ ನಾಪತ್ತೆಯಾಗಿರೋದ್ರಿಂದ ಗಂಡನ ಮನೆಯವರು ಆಕೆಯನ್ನ ಕೊಟ್ಟಿಗೆಯಲ್ಲಿ ಇರಿಸಿದ್ದಾರೆ. ದನದ ಕೊಟ್ಟಿಗೆಯಲ್ಲೇ ಒಂದು ಬಾಣಂತಿ ಶಾರದಮ್ಮ ಕಳೆದಿದ್ದಾರೆ. ಬಳಿಕ ಚಳ್ಳಕೆರೆ ಆಸ್ಪತ್ರೆ ಪಕ್ಕದಲ್ಲೇ ಇರುವ ದೇವಸ್ಥಾನದ ಆವರಣದಲ್ಲಿ ಅನಾಥವಾಗಿ ಬಿದ್ದಿರೋದನ್ನ ಕಂಡ ಸ್ಥಳೀಯರು, ವೈದ್ಯರ ಸಹಾಯದೊಂದಿಗೆ ಆಕೆಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

ಗಂಡನ ಮನೆ ಮತ್ತು ತವರಿನಿಂದಲೂ ದೂರಾವಾಗಿರುವ ಶಾರದಮ್ಮ ಇದೀಗ ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ರಕ್ಷಣೆ ಪಡೆದಿದ್ದಾರೆ. ಗಂಡನ ಮನೆಯವರು ದನದ ಕೊಟ್ಡಿಗೆಯಲ್ಲಿ ಇರಿಸಿದ್ದ ಕಾರಣ ಸೊಳ್ಳೆ ಕಾಟ ತಾಳಲಾರದೆ ಇಲ್ಲಿ ಬಂದಿದ್ದೇನೆ, ನನ್ನ ಗಂಡ ಕೂಡ ನೋಡಲು ಬಂದಿಲ್ಲ ಎಂದು ಕಂಗಾಲಾಗಿದ್ದಾಳೆ. ಶಾರದಮ್ಮನ ಸ್ಥಿತಿಯನ್ನು ಕಂಡ ಮಹಿಳೆಯರು, ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ ಅಂತ ಮಮ್ಮಲ ಮರುಗಿದ್ದಾರೆ.

ಒಟ್ಟಾರೆ ತವರು ಮನೆ ಮತ್ತು ಗಂಡನ ಮನೆಗೆ ಬೇಡವಾದ ಮಹಿಳೆ ಎರಡು ವರ್ಷದ ಹೆಣ್ಣು ಮಗು ಮತ್ತು ಐದು ದಿನದ ಹಿಂದೆ ಜನಿಸಿರುವ ಹಸುಗೂಸಿನೊಂದಿಗೆ ಅಕ್ಷರಶಃ ಬೀದಿ ಪಾಲಾಗಿದ್ದಾಳೆ. ಈಕೆಯ ಸ್ಥಿತಿಯನ್ನ ಕಂಡ ಮೇಲಾದ್ರೂ ಸಂಬಂಧಪಟ್ಟವರು ಎಚ್ಚತ್ತು ನೊಂದ ಮಹಿಳೆಗೆ ಬದುಕಿನ ದಾರಿ ತೋರಿಸಬೇಕಿದೆ.

LEAVE A REPLY

Please enter your comment!
Please enter your name here