Home Elections 2019 60 ವರ್ಷದ ರಾಜಕಾರಣದಲ್ಲಿ 5 ಬಾರಿ CM,ಸೋಲನ್ನೇ ಅರಿಯದ ಸರದಾರನ ವಿರುದ್ಧ ಧ್ವನಿ ಎತ್ತಿದ್ದು ಓರ್ವ...

60 ವರ್ಷದ ರಾಜಕಾರಣದಲ್ಲಿ 5 ಬಾರಿ CM,ಸೋಲನ್ನೇ ಅರಿಯದ ಸರದಾರನ ವಿರುದ್ಧ ಧ್ವನಿ ಎತ್ತಿದ್ದು ಓರ್ವ ಮಹಿಳೆ ಮಾತ್ರ..!? ಆಕೆಯೇ ಕುಮಾರಿ ಜಯಲಲಿತಾ…

2256
0
SHARE

ಎಂತಹ ಬುದ್ದಿವಂತನಾದರೂ ಒಂದಲ್ಲ ಒಂದು ವಿಷ್ಯ ಎಡವಿಯೇ ತೀರುತ್ತೇನೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕೂಡ ಹೊರತಲ್ಲ….ಒಂದು ಕಾಲದಲ್ಲಿ ತಮಿಳುನಾಡು ರಾಜಕೀಯದ ಮೇಲೆ ಪ್ರಭುತ್ವ ಸಾಧಿಸಿದ್ದ ಡಿಎಂಕೆ ಇವತ್ತು ಮೂಲೆಗುಂಪಾಗಲು ಎರಡೇ ಕಾರಣ….ಒಂದು ಕುಟುಂಬದಲ್ಲಿನ ವೈರತ್ಯ….ಮತ್ತೊಂದು ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜಯಲಲಿತಾ..ಅದು 1989….ಮಾರ್ಚ್ 25. ತಮಿಳುನಾಡಿನ ವಿಧಾನಸಭೆಯಲ್ಲಿ ಗಂಭೀರ ಚರ್ಚೆಯಾಗುತ್ತಿತ್ತು.

ಮುಖ್ಯಮಂತ್ರಿ ಕರುಣಾನಿಧಿ ಸರ್ಕಾರವನ್ನು ಪ್ರತಿಪಕ್ಷ ನಾಯಕಿ ಜಯಲಲಿತಾ ತರಾಟೆಗೆ ತೆಗೆದುಕೊಂಡಿದ್ದರು. ಸದನದ ವಿಐಪಿ ಗ್ಯಾಲರಿಯಲ್ಲಿ ಕರುಣಾನಿಧಿ ಅವರ ಇಬ್ಬರು ಪತ್ನಿಯರು ಕಲಾಪ ವೀಕ್ಷಿಸುತ್ತಿದ್ದರು. ಏಕಾಏಕಿ ನಡೆಯಬಾರದಂತಹ ಘಟನೆಯೊಂದು ನಡೆದೇ ಹೋಯ್ತು….ಹಣಕಾಸು ಖಾತೆಯನ್ನೂ ಹೊಂದಿದ್ದ ಸಿಎಂ ಕರುಣಾನಿಧಿ ಬಜೆಟ್ ಭಾಷಣ ಓದಲು ಮುಂದಾಗಿದ್ದರು. ಆಗ ಸರಕಾರ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದೆ, ನನ್ನ ದೂರವಾಣಿ ಕರೆಗಳು ಕದ್ದಾಲಿಗೆಯಾಗುತ್ತಿದೆ.

ಮೊದಲು ಇದರ ಬಗ್ಗೆ ಚರ್ಚೆ ನಡೆಯಲಿ ಎಂದು ಜಯಲಲಿತಾ ಹಠ ಹಿಡಿದು, ಪ್ರತಿಭಟನೆ ನಡೆಸಿದರು. ಜಯಾ ಮತ್ತು ಎಐಡಿಎಂಕೆ ಸದಸ್ಯರ ಪ್ರತಿಭಟನೆಗೆ ಕೆಂಡಕಾರಿದ ಸಿಎಂ ಕರುಣಾನಿಧಿ ಅಸಂವಿಧಾನಿಕ ಪದಗಳನ್ನ ಬಳಿಸಿದ್ದರು. ಇದಕ್ಕೆ ತಿರುಗಿಬಿದ್ದ ಎಐಡಿಎಂಕೆ ಸದಸ್ಯರು ಮತ್ತು ಜಯಾ ಸ್ಪೀಕರ್ ಕುರ್ಚಿಯತ್ತ ಹೊರಟಾಗ ಆಯತಪ್ಪಿ ಕೆಳಗೆಬಿದ್ದರು. ಆಗ್ಲೇ ಆಸೆಂಬ್ಲಿ ಪೂರ ರಣಾಂಗಣವಾಗಿದ್ದು..!!

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಯಲಲಿತಾ ಮೇಲೆ ಡಿಎಂಕೆ ಶಾಸಕರು ಸಿಟ್ಟಾಗಿದ್ದರು. ಏಕಾಏಕಿ ಪ್ರತಿಪಕ್ಷ ನಾಯಕಿಯ ಮೇಲೆರಗಿದ್ದರು. ಓರ್ವ ಹೆಣ್ಣು ಮಗಳು ಅನ್ನೋದನ್ನಾ ಮರೆತ ಡಿಎಂಕೆ ಸದಸ್ಯರು ತಲೆ ಕೂದಲನ್ನು ಎಳೆದು ಚಪ್ಪಲಿಯನ್ನು ಎಸೆದು ಬಿಟ್ಟರು. ಓರ್ವ ಶಾಸಕನಂತೂ ಮೈ ಮೇಲೆ ಇದ್ದ ಸೀರೆಯನ್ನೇ ಎಳೆಯುವಷ್ಟರ ಮಟ್ಟಿಗೆ ಮುಂದಾಗುತ್ತಾನೆ.   ದೌರ್ಭಾಗ್ಯ ಎಂದರೆ, ಇವೆಲ್ಲದಕ್ಕೂ ಸಾಕ್ಷಿಯಾಗಿದ್ದು ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಸದನದಲ್ಲಿದ್ದ ಅವರ ಇಬ್ಬರ ಹೆಂಡಿರು.ಈ ಘಟನೆಯಿಂದ ಜಯಲಲಿತಾ ಕನಲಿ ಕೆಂಡವಾಗಿದ್ದರು.

ಕಣ್ಣೀರಿಡುತ್ತಲೇ ತಮಿಳುನಾಡಿಗೆ ಒಂದೇ ಸಂದೇಶ ರವಾನಿಸಿದ್ರು. ಅವತ್ತೇ ನಿರ್ಧಾರವೊಂದನ್ನು ಮಾಡಿದ್ದರು. ಮುಖ್ಯಮಂತ್ರಿ ಕರುಣಾನಿಧಿ ಸೊಕ್ಕು ಅಡಗಿಸುವ ಶಪಥಗೈಯ್ದರು.“ ಕರುಣಾನಿಧಿ ಎಲ್ಲಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೋ ಅಲ್ಲಿಯವರೆಗೆ ನಾನು ವಿಧಾನಸಭೆಗೆ ಕಾಲಿಡುವುದೇ ಇಲ್ಲ. ಮುಖ್ಯಮಂತ್ರಿಯಾಗಿ ಈ ಸದನಕ್ಕೆ ಕಾಲಿಡುತ್ತೇನೆ. ನನಗಾದ ಅಪಮಾನಕ್ಕೆ ಈ ಮೂಲಕ ಸೇಡು ತೀರಿಸಿಕೊಳ್ಳುತ್ತೇನೆ’’.

ಅಂತ ಹೇಳಿಕೆಯೊಂದನ್ನು ನೀಡಿ ಜಯಲಲಿತಾ ಸದನದಿಂದ ಹೊರ ನಡೆದೇ ಬಿಟ್ಟರು.ತಮಿಳುನಾಡು ವಿಧಾನಸಭೆಯಲ್ಲಿ ಆದ ಘಟನೆಯಿಂದ ಜಯಲಲಿತಾ ನೊಂದು ಹೋಗಿದ್ದರು. ವಿಧಾನಸಭೆಯಿಂದ ನೇರವಾಗಿ ಮನೆಗೆ ತೆರಳಿ ಬಿಕ್ಕಿ ಬಿಕ್ಕಿ ಅತ್ತರು. ಅವತ್ತೇ ನಿರ್ಧರಿಸಿಬಿಟ್ಟರು. ಯುದ್ಧ ಭೂಮಿಯಿಂದ ಹೆದರಿ ಓಡುವ ಬದಲು ಧೈರ್ಯವಾಗಿ ಪುರುಷರನ್ನು ಹೆದರಿಸಬೇಕೆಂದು ತೀರ್ಮಾನಿಸಿದ್ರು.  ಬದ್ಧವೈರಿ ಕರುಣಾನಿಧಿ ವಿರುದ್ಧ ಹೋರಾಟಕ್ಕೆ ಜಯಲಲಿತಾ ಆಯ್ದುಕೊಂಡ ಅಸ್ತ್ರವೇ ಪ್ರಚಾರ.

ವಿಧಾನಸಭೆಯಲ್ಲಿ ಆದ ಅಪಮಾನವನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡ ಜಯಲಲಿತಾ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಮಿಳುನಾಡಿನಾದ್ಯಂತ ಮಿಂಚಿನ ಸಂಚಾರ ನಡೆಸಿದ್ರು. ಅಣ್ಣಾಡಿಎಂಕೆ ಮುಖಂಡರು ಕರುಣಾನಿಧಿಯನ್ನು ದುರ್ಯೋಧನ ಎಂದೂ, ಜಯಲಲಿತಾರನ್ನು ದ್ರೌಪದಿ ಎಂದು ಬಿಂಬಿಸಿದ್ರು.. ಎಲ್ಲಿವರೆಗೆ ಕರುಣಾನಿಧಿ ಮುಖ್ಯಮಂತ್ರಿ ಪದವಿಯಲ್ಲಿರುವರೋ ಅಲ್ಲಿಯವರೆಗೆ ಮಹಿಳೆಯರಿಗೆ ರಕ್ಷಣೆ ಇಲ್ಲ ಇದೊಂದು ದುರ್ಯೋಧನ-ದುಶ್ಯಾಸನರ ಸರ್ಕಾರ ಎಂದು ಜನರ ಮುಂದೆ ಜಯಾ ಸಾರಿದ್ರು. ಇದರಿಂದಾಗಿ 1991ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೆಲಕಚ್ಚಿ ಹೋಯ್ತು.

ಯಂಗ್ ಸಿಎಂ ಜಯಲಲಿತಾ ಪ್ರಮಾಣವಚನ ಸ್ವೀಕರಿಸಿದ್ರು.ಇದಾದ ಬಳಿಕ ಜಯಾ ಅಂದುಕೊಂಡಂತೆ ಮುಂದಿನ ಅವಧಿಗೆ ಸಿಎಂ ಅದ್ರು. ಅಲ್ಲದೇ ಅವರು ಸಿಎಂ ಆಗುತ್ತಿದ್ದಂತೆ, ಕರುಣಾನಿಧಿ ವಿರುದ್ದ ಕೇಸ್ ಒಂದನ್ನ ದಾಖಲಿಸಿ ಪೊಲೀಸರ ಕೈಯಲ್ಲಿ ಬಂಧಿಸಿದ್ರು. ಅಲ್ಲದೇ ಜಯಲಲಿತಾಳ ಸೆರೆಗಿಗೆ ಹೇಗೆ ಕೈ ಹಾಕಿದ್ರೋ, ಅದೇ ರೀತಿ, DMK ನಾಯಕನಾಗಿದ್ದ ಕರುಣಾನಿಧಿಯ ಪಂಚೆ ಕಿತ್ತೆಸೆದು, ಪೊಲೀಸರು ರಸ್ತೆಯಲ್ಲಿ ಎಳೆದುಕೊಂಡು ಬಂದು ಜೈಲಿಗೆ ಹಾಕಿದ್ರು.ಅಷ್ಟೆ ಅಲ್ಲ ಕೋರ್ಟ್ ರಜಾ ಇದ್ದ ಸಮಯದಲ್ಲೇ ಮಧ್ಯರಾತ್ರಿ ಕರುಣಾನಿಧಿಯನ್ನ ಅರೆಸ್ಟ್ ಮಾಡಲಾಗಿತ್ತು,

ಒಂದೇ ಒಂದು ದಿನವಾದ್ರು ಕರುಣಾ ಜೈಲಿನಲ್ಲಿ ಇರಬೇಕು ಅನ್ನೋದು ಜಯಾ ಕನಸಾಗಿತ್ತು, ಆ ಕನಸನ್ನ ಜಯಾ ಈಡೇರಿಸಿಕೊಂಡು ಬಿಟ್ಟಿದ್ದರು, ಇದು ಆಸೆಂಬ್ಲಿಯಲ್ಲಿ ಜಯಲಲಿತಾಗೆ ನಡೆದ ಅವಮಾನಕ್ಕೆ ತೀರಿಸಿಕೊಂಡ ಪ್ರತೀಕಾರ ಅಂತಾನೂ ಹೇಳಲಾಗುತ್ತಿತ್ತು. ಒಟ್ಟಾರೆ ತಮಿಳು ರಾಜಕೀಯದಲ್ಲಿ ಕಲೈನಾರ್ ತಮ್ಮದೇ ಮೈಲುಗಲ್ಲು ನೆಟ್ಟಿದ್ದಾರೆ, ಇಂದು ಬಾರದ ಲೋಕಕ್ಕೆ ಕಲೈನಾರ್ ಪಯಣ ಬೆಳೆಸಿದ್ದಾರೆ, ಅವರ ಸಾಧನೆ, ಮಾಡಿದ ಅಪರೂಪದ ದಾಖಲೆ ಇನ್ನು ಕಣ್ಣಮುಂದೆ ಹಚ್ಚಹಸಿರಾಗಿದೆ.

LEAVE A REPLY

Please enter your comment!
Please enter your name here