Home Cinema 7 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ್ದ ನಿಕ್ ತೆಕ್ಕೆಗೆ ಬಿದ್ದ ಪ್ರಿಯಾಂಕ ಛೋಪ್ರಾ..!!ಪ್ರಿಯಾಂಕ ಛೋಪ್ರಾ ಬಾಯ್...

7 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ್ದ ನಿಕ್ ತೆಕ್ಕೆಗೆ ಬಿದ್ದ ಪ್ರಿಯಾಂಕ ಛೋಪ್ರಾ..!!ಪ್ರಿಯಾಂಕ ಛೋಪ್ರಾ ಬಾಯ್ ಫ್ರೆಂಡ್‌ಗೆ ಪಿಗ್ಗಿ ಎಂಟನೇ ಅದ್ಭುತ..!!

3183
0
SHARE

ಪ್ರಿಯಾಂಕಾ ಛೋಪ್ರಾ ಬಾಯ್ ಫ್ರೆಂಡ್ ಗೆ ಡೇಟಿಂಗ್ ನಲ್ಲಿ ಏಳು ಅಂಕ, ಏಳು ಮಲ್ಲಿಗೆ ತೂಕ ನೋಡಿದ ನಿಕ್ ಜೋನಾಸ್ ಈಗ ಪಿಗ್ಗಿ ತೆಕ್ಕೆಗೆ, ಒಂದರಿಂದ ಏಳು ಹೀಗಿತ್ತು, ಡೇಟಿಂಗ್ ಆಟವು ಮುಗಿದಿತ್ತು, ನಿಕ್ ಜೋನಾಸ್ ಪಾಲಿಗೆ ಪ್ರಿಯಾಂಕಾ ಈಗ ಎಂಟನೇ ಅದ್ಭುತ, ನಿಕ್ ಪ್ರಿಯಾಂಕಾ ಜೋಡಿಯ ಪ್ರೀತಿ ಏಳೇಳು ಜನ್ಮದ ಸಂಬಂಧ ಅಲ್ಲ, ಇದಕ್ಕೂ ಮುಂಚೆ ನಿಕ್ ಗೆ ಇತ್ತು ಏಳೇಳು ಜನರ ಜೊತೆಗೆ ಸಂಬಂಧ.ಎಂಟನೇ ಅದ್ಭುತ…

ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಈಗ ಮದುವೆಯ ಹೊಸ್ತಿಲಲ್ಲಿದ್ದಾರೆ. ಅದೂ ಅಮೆರಿಕನ್ ಹುಡುಗನ ಜೊತೆ. ನಿಕ್ ಜೋನಾಸ್ ಎಂಬ ಅಮೆರಿಕದ ನಟ ಮತ್ತು ಗಾಯಕನ ಜೊತೆ ಸಪ್ತಪದಿ ತುಳಿಯಲು ತಯಾರಾಗಿರುವ ಪ್ರಿಯಾಂಕಾಳ ಈ ಬಾಯ್ ಪ್ರೆಂಡ್ ಈಗಾಗಲೇ ಸಪ್ತಕನ್ಯೆಯರ ಜೊತೆ ಡೇಟಿಂಗ್ ನಡೆಸಿದವನು ಅನ್ನೋದು ವಿಶೇಷ. ಈಗ ಭಾರತದ ನಮ್ಮ ಈ ಕೃಷ್ಣ ಸುಂದರಿ ಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ ಅಂತ ಅಲ್ಲಿಗೆ ಹುಡುಕಿಕೊಂಡು ಹೋಗಿ ನಿಕ್ ಜೋನಾಸ್ ಎಂಬ ಹುಡುಗನನ್ನು ಕಟ್ಟಿಕೊಳ್ಳುತ್ತಿರುವ ಕಥೆ ಇದು.

ಬಾಲಿವುಡ್ ನಟಿಯರು ಫಾರಿನ್ ಹುಡುಗರನ್ನು ಮದುವೆ ಆಗೋದು ಹೊಸ ವಿಷಯ ಏನಲ್ಲ. ಅನೇಕರು ಪರದೇಶದ ಸಿನಿಮಾ ನಟರನ್ನು, ಕ್ರಿಕೆಟಿಗರನ್ನು ಮದುವೆ ಆಗಿರುವ, ಡೇಟಿಂಗ್ ನಡೆಸಿರುವ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಈಗ ಪ್ರಿಯಾಂಕಾ ಛೋಪ್ರಾ ಈ ಸಾಲಿಗೆ ಹೊಸ ಸೇರ್ಪಡೆ ಆಗಿದ್ದಾರೆ.ಪ್ರಿಯಾಂಕಾ ಛೋಪ್ರಾ ಬಾಲಿವುಡ್ ನಲ್ಲಿ ಖ್ಯಾತ ಹೆಸರು. ಈಕೆ ಬ್ಯುಸಿ ನಟಿ. ಇತ್ತೀಚೆಗೆ ಸಿಂಗರ್ ಕೂಡಾ ಆಗಿದ್ದರು. ಪಿಟ್ ಬುಲ್ ಜೊತೆಗಿನ ವಿಡಿಯೋ ಆಲ್ಬಮ್ ಸೇರಿದಂತೆ ಫಾರಿನ್ ಚಿತ್ರಗಳಲ್ಲೂ ಅಭಿನಯಿಸಿದ್ದರು.

ಈಗ ಪ್ರಿಯಾಂಕಾ ನಿಕ್ ಜೋನಾಸ್ ಎಂಬ 25 ವರ್ಷದ ಹುಡುಗನ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ಅವನನ್ನೇ ಮದುವೆ ಆಗುವ ನಿರ್ಧಾರಕ್ಕೂ ಬಂದಿದ್ದಾರೆ. ಈಗಾಗಲೇ ಅಮೆರಿಕಾದಲ್ಲಿ ಹಲವಾರು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಈ ಜೋಡಿ ಈಗ ಭಾರತಕ್ಕೂ ಬಂದಿದೆ. ಮುಂಬೈ ಬೀಚಿನಲ್ಲಿ ಪ್ರಿಯಾಂಕ್ ಮತ್ತು ನಿಕ್ ಜಾಲಿ ಮೂಡ್ ನಲ್ಲಿರುವ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ.

ಅಂದಹಾಗೆ, ಪ್ರಿಯಾಂಕ ಮದುವೆ ಆಗಬೇಕೆಂದಿರುವ ಈ ನಿಕ್ ಜೋನಾಸ್ ಯಾರು ಅನ್ನೋ ಪ್ರಶ್ನೆ ಕೆಲವರಿಗೆ ಇರಬಹುದು. ಮೊದಲೇ ಹೇಳಿದಂತೆ, ಈತ ನಟ, ಗಾಯಕ. ಆದರೆ, ಅಮೆರಿಕಾ ಈ ಖ್ಯಾತ ನಟ, ಗಾಯಕ ನಿಕ್ ಜೋನಾಸ್ ತನ್ನ ನಟನೆಯಲ್ಲಿ, ಗಾಯನದಲ್ಲಿ ಮಾತ್ರ ಬ್ಯುಸಿ ಅಲ್ಲ, ಹುಡುಗಿಯರ ಜೊತೆ ಡೇಟಿಂಗ್ ನಲ್ಲೂ ಬ್ಯುಸಿ ಎನಿಸಿಕೊಂಡಿರುವವನು. ಈಗಾಗಲೇ ತನ್ನ 25ನೇ ವಯಸ್ಸಿನಲ್ಲೇ ಏಳು ಹುಡುಗಿಯರ ಜೊತೆ ಅಫೈರ್ ಇಟ್ಟುಕೊಂಡು, ಈ ಏಳು ಅದ್ಭುತಗಳು ಸಾಕಾಯ್ತು ಅನ್ನೋ ನಿರ್ಧಾರದಲ್ಲಿ ಪ್ರಪಂಚದ ಎಂಟನೇ ಅದ್ಭುತ ಎನ್ನುವಂತೆ ಪ್ರಿಯಾಂಕಾ ಛೋಪ್ರಾ ಕೈ ಹಿಡಿಯಲು ಹೊರಟಿದ್ದಾನೆ.

ಪ್ರೀತಿ ಪ್ರೇಮ ಮದುವೆ ಅಂದರೆ ಅದು ಏಳೇಳು ಜನುಮದ ಸಂಬಂಧ ಅನ್ನೋ ನಮ್ಮ ಭಾರತೀಯ ಸಂಸ್ಕೃತಿಯ ಮಾತನ್ನು ಪ್ರಿಯಾಂಕಾ ತಪ್ಪು ತಿಳಿದುಕೊಂಡು, ಏಳು ಹುಡುಗಿಯರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ಹುಡುಗನನ್ನು ಈಗ ಬಾಳ ಸಂಗಾತಿಯಾಗಿ ಮಾಡಿಕೊಳ್ಳಲು, ಅವನೊಂದಿಗೆ ಏಳು ಹೆಜ್ಜೆ ಹಾಕಲು ತಯಾರಾಗಿದ್ದಾಳೆ. ಮದುವೆ ಸಮಯದಲ್ಲಿ ಹಿರಿಯರು, ಹುಡುಗನ ಹತ್ರ ಹೇಳ್ಕಳಕೆ ಅಂತ ಏನಿದೆ? ಅಂತ ಕೇಳಿದ್ರೆ, ಏಳು ಜನ ಹುಡುಗಿಯರ ಜೊತೆ ಸಂಬಂಧ ಇದೆ ಅಂತ ಹೇಳ್ಕಬಹುದು ಅನ್ನೋದು ಪಿಗ್ಗಿ ಲೆಕ್ಕಾಚಾರ ಇದ್ದರೂ ಇರಬಹುದು.

ಇವು ಪ್ರಿಯಾಂಕಾ ಛೋಪ್ರಾ ಮದುವೆ ಆಗುತ್ತಿರುವ ನಿಕ್ ಜೋನಾಸ್ ಎಂಬ ಸಕಲಕಲಾವಲ್ಲಭನ ಡೇಟಿಂಗ್ ಸ್ಟೋರಿಗಳು. ಒಟ್ಟಿನಲ್ಲಿ ಹೀಗೆ ಪ್ರಿಯಾಂಕ ಛೋಪ್ರಾ ಫಾರಿನ್ ಹುಡುಗನ ಜೊತೆ ಸಂಸಾರ ಮಾಡಲು ಹೊರಟಿದ್ದನ್ನು ನೋಡಿ, ನಮ್ಮ ಪಡ್ಡೆ ಹುಡುಗರು ಮಾತ್ರ, ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ, ಯಾರ್ಯಾರ ಚೆಲುವೆ ಎಲ್ಲಿಹಳೋ, ಯಾರ್ಯಾರ ಒಲವು ಎಲ್ಲಿಹುದೋ, ಒಂದೊಂದು ಅಕ್ಕಿಯಾ ಕಾಳಿನಲೂ ತಿನ್ನೋರ ಹೆಸರು ಕೆತ್ತಿಹುದೋ ಅಂತ ಗೋಳಾಡುತ್ತಿರೋದಂತೂ ಸುಳ್ಳಲ್ಲ…

LEAVE A REPLY

Please enter your comment!
Please enter your name here