Home Latest 71 ಯೋಧರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡು ಹುತಾತ್ಮ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ ಯುವಕ….

71 ಯೋಧರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡು ಹುತಾತ್ಮ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ ಯುವಕ….

532
0
SHARE

ಹುತಾತ್ಮರಾದ ಯೋಧರಿಗೆ ಎಲ್ಲಾರೂ ಕ್ಯಾಂಡಲ್ ಹಚ್ಚಿ, ಮೌನ ಆಚರಿಸಿ ನಮನ ಸಲ್ಲಿಸಿದ್ರೆ ಇಲ್ಲೊಬ್ಬ ಯುವಕ ವಿಶೇಷವಾಗಿ ನಮನ ಸಲ್ಲಿಸಿದ್ದಾನೆ.

ಬಿಕನೇರ್‌ನಲ್ಲಿ ಭಗತ್ ಸಿಂಗ್ ಯೂತ್ ಬ್ರಿಗೇಡ್‌ನ ಸದಸ್ಯ ಗೋಪಾಲ್ ಶಹರಾನ್ ತನ್ನ ಬೆನ್ನಿನ ಮೇಲೆ ಪುಲ್ವಾಮ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರ ಹೆಸರನ್ನು ಹಾಕಿಸಿಕೊಂಡು ವಿಶೇಷ ಗೌರವ ಸಲ್ಲಿಸಿದ್ದಾರೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಹೆಸರಿನ ಜೊತೆಗೆ ಇತ್ತೀಚಿಗೆ ಹುತಾತ್ಮರಾದ ಇನ್ನೂ 31 ಯೋಧರ ಹೆಸರನ್ನೂ ಕೂಡ ಬೆನ್ನ ಮೇಲೆ ಬರೆಸಿಕೊಂಡಿದ್ದಾರೆ.ಒಟ್ಟು 71 ಯೋಧರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಹುತಾತ್ಮ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಪುಲ್ವಾಮಾ ದಾಳಿಯ ಸಂಚುಕೋರನ ಹತ್ಯೆಯಾದ ಬಳಿಕ ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ “ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ” ಎಂದು ಹೇಳಿದ್ದರು.

ಆ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದ್ದರು. ಈ ವೇಳೆ ಯಾರೆಲ್ಲ ಸ್ಥಳೀಯ ಉಗ್ರರ ಜೊತೆ ಸೇರಿದ್ದಾರೋ ಅವರೆಲ್ಲರೂ ಶರಣಾಗಬೇಕು.ತಾಯಂದಿರು ಮಕ್ಕಳನ್ನು ಶರಣಾಗುವಂತೆ ಮಾಡಬೇಕು ಎಂದು ಸೇನಾ ಅಧಿಕಾರಿಗಳು ಈ ವೇಳೆ ಮನವಿ ಮಾಡಿದ್ದರು.ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸೇರಿ ಯಾರೇ ಬಂದೂಕು ಹಿಡಿದಿದ್ದರೂ ಅವರನ್ನು ಹತ್ಯೆ ಮಾಡಲಾಗುವುದು ಎಂದು ಸೇನೆಯ ಹಿರಿಯ ಅಧಿಕಾರಿಗಳು ಉಗ್ರರಿಗೆ ಖಡಕ್ ಎಚ್ಚರಿಕೆ ನೀಡಿದ್ದರು.

 

 

 

 

LEAVE A REPLY

Please enter your comment!
Please enter your name here