75ನೇ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆ: ಅಮೆರಿಕದ ಬೀದಿಗಳಲ್ಲಿ ಗಮನ ಸೆಳೆದ ಬಾಬಾ ಬುಲ್ಡೋಜರ್

ಅಂತರಾಷ್ಟ್ರೀಯ

ವಾಷಿಂಗ್ಟನ್: 75ನೇ ಸ್ವಾತಂತ್ರ ಮಹೋತ್ಸವದ ಅಂಗವಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ವಿಜೃಂಭಣೆಯಿಂದ ರ್ಯಾಲಿ ನಡೆಸಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದು, ಈ ವೇಳೆ ಬಾಬಾ ಬುಲ್ಡೋಜರ್ ಎಲ್ಲರ ಗಮನ ಸೆಳೆದಿದೆ.

ನ್ಯೂಜೆರ್ಸಿಯ ಭಾರತೀಯರು ಬಾಬಾ ಬುಲ್ಡೋಜರ್‌ನೊಂದಿಗೆ ರ್ಯಾಲಿ ನಡೆಸಿದ್ದಾರೆ. ಬುಲ್ಡೋಜರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫ್ಲೆಕ್ಸ್ ಅಳವಡಿಸಿದ್ದು ಬುಲ್ಡೋಜರ್ ಅಮೆರಿಕದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿದೆ.

ಬಾಬಾ ಬುಲ್ಡೋಜರ್‌ನೊಂದಿಗೆ ಸಾವಿರಾರು ಭಾರತೀಯರು ಸಿಎಂ ಯೋಗಿ ಜಿಂದಾಬಾದ್, ಬುಲ್ಡೋಜರ್ ಬಾಬಾ ಜಿಂದಾಬಾದ್ ಎಂದು ಘೋಷವಾಕ್ಯಗಳನ್ನು ಕೂಗುತ್ತ ಸಾಗಿರುವ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಅಮೆರಿಕದಲ್ಲಿರುವ ಭಾರತೀಯರಾದ ನಾವು ಈ ಹಿಂದೆಯು ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೆವು. ಈ ಬಾರಿ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸಿದ್ದೇವೆ. ಈ ಮೂಲಕ ದೇಶಾಭಿಮಾನವನ್ನು ಯಾವತ್ತು ಸಾರುತ್ತೇವೆ ಎಂದು ರ್ಯಾಲಿಯಲ್ಲಿ ಭಾಗವಹಿಸಿದ ಭಾರತೀಯರೊಬ್ಬರು ಹೇಳಿದ್ದಾರೆ.

Leave a Reply

Your email address will not be published.