‘’777 ಚಾರ್ಲಿ’’ ಎಫೆಕ್ಟ್: ಶ್ವಾನದ ಜೊತೆ ಬೈಕ್ ನಲ್ಲಿ ಲಡಾಕ್ ಟ್ರಿಪ್ ಗೆ ಹೊರಟ ಯುವಕ

ಜಿಲ್ಲೆ

ಚಿಕ್ಕಬಳ್ಳಾಪುರ: ಚಾರ್ಲಿ ಸಿನಿಮಾ ರೀತಿಯೇ ಇಲ್ಲೊಬ್ಬ ಯುವಕ ಶ್ವಾನದ ಜೊತೆ ತನ್ನ ಬೈಕ್‍ನಲ್ಲಿ ಲಡಾಕ್ ಟ್ರಿಪ್‍ಗೆ ಹೊರಟ ಘಟನೆ ನಡೆದಿದೆ.ಕೇರಳ ಮೂಲದ ಸುಧೀಶ್ ಎಂಬಾತನೇ ನಾಯಿ ಜೊತೆಗೆ ಟ್ರಿಪ್‍ ಕೈಗೊಂಡಿರುವ ಯುವಕ. ಸುಧೀಶ್ ತನ್ನ ಬೈಕ್‍ನಲ್ಲಿ ಪ್ರೀತಿಯ ಶ್ವಾನವನ್ನು ಕೂರಿಸಿಕೊಂಡು ಲಡಾಕ್ ಟ್ರಿಪ್ ಹೊರಟಿದ್ದಾನೆ. ಕೇರಳದಿಂದ ಲಡಾಕ್‍ಗೆ ಸರಿಸುಮಾರು 8,000 ಕಿ.ಮೀ ದೂರವಿದ್ದು, ತನ್ನ ನೆಚ್ಚಿನ ಶ್ವಾನದ ಜೊತೆಗೆ  ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರ, ಹೈದರಾಬಾದ್ ಮಾರ್ಗವಾಗಿ ಲಡಾಕ್‍ನತ್ತ ಟ್ರಿಪ್‌ ಹೊರಟಿದ್ದಾನೆ.

ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ದಾರಿ ಮಧ್ಯೆ ರಿಯಲ್ ಚಾರ್ಲಿ ಮ್ಯಾನ್ ಸುಧೀಶ್ ಎಲ್ಲರ ಗಮನ ಸೆಳೆಯುತ್ತಿದ್ದು, ಕೆಲವರು ಸೆಲ್ಫಿ ತೆಗೆದುಕೊಂಡು ಸಂತಸ ಪಡುತ್ತಿದ್ದಾರೆ. ಸಿನಿಮಾದ ರೀತಿಯೇ ಶ್ವಾನಕ್ಕಾಗಿ ತನ್ನ ಬೈಕ್‍ನಲ್ಲಿ ಶ್ವಾನ ಕೂರಲು, ಮಲಗಲು ಬೇಕಾದ ರೀತಿಯಲ್ಲಿ ಹಿಂಬದಿ ಸೀಟಿನಲ್ಲಿ ಆಸನದ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಶ್ವಾನ ಬೀಳದೆ ಇರುವ ಹಾಗೆ ಬ್ಯಾರಿಕೇಡ್ ಮಾಡಿಕೊಂಡಿದ್ದಾನೆ.

Leave a Reply

Your email address will not be published.