Home Crime 8 ಅಡಿ ಎತ್ತರದ ಗೋಡೆ ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದ 14 ಅಡಿ ಉದ್ದದ ದೈತ್ಯ...

8 ಅಡಿ ಎತ್ತರದ ಗೋಡೆ ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದ 14 ಅಡಿ ಉದ್ದದ ದೈತ್ಯ ಮೊಸಳೆ..!

2278
0
SHARE

ಸಂಶೋಧನೆಗೆಂದು ಸಾಕಿದ್ದ 14 ಅಡಿ ಉದ್ದದ ದೈತ್ಯ ಮೊಸಳೆಯೊಂದು 8 ಅಡಿ ಎತ್ತರದ ಗೋಡೆಯನ್ನು ಹಾರಿ 37 ರ ಹರೆಯದ ಮಹಿಳಾ ವಿಜ್ಞಾನಿಯೊಬ್ಬರು ಮೊಸಳೆಗೆ ಆಹಾರವಾದ ಭಯಾನಕ ಘಟನೆ ಇಂಡೋನೇಷ್ಯಾದ ಸಂಶೋಧನಾ ಕೇಂದ್ರವೊಂದರಲ್ಲಿ  ನಡೆದಿದೆ.

ಸುಲಾವೇಸಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೇರಿ ಎಂಬ ಹೆಸರಿನ 17 ಅಡಿ ಉದ್ದದ ದೈತ್ಯ ಮೊಸಳೆ ಸಂಶೋಧನಾ ವಿಜ್ಞಾನಿ ಡೇಸಿ ಟುವೋರನ್ನು ಜೀವಂತವಾಗಿ ತಿಂದಿದೆ. ಇಂಡೋನೇಷ್ಯಾದ ಮೊಸಳೆ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವಿಜ್ಞಾನಿ ಡೈಸಿ ಟುವೊ ದೈತ್ಯ ಮೊಸಳೆಗೆ ಬಲಿಯಾಗಿರುವ ದುರ್ದೈವಿ.

ಇನ್ನು ಮೊಸಳೆ ದಾಳಿ ದೃಶ್ಯವನ್ನು ನೋಡಿದ ಸಹೋದ್ಯೋಗಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬರುವ ವೇಳೆಗೆ ಮೊಸಳೆ ಆಕೆಯ ಅರ್ಧ ದೇಹವನ್ನು ತಿಂದು ಹಾಕಿದೆ. ಡೇಸಿ ಅವರ ಅರ್ಧ ದೇಹವನ್ನು ಮೊಸಳೆ ಕ್ಷಣದಲ್ಲಿ ತಿಂದು ಹಾಕಿದ್ದು, ಭಯಾನಕ ದೃಶ್ಯ ಕಂಡು ಸಹುದ್ಯೋಗಿಗಳಿಬ್ಬರು ಬೆಚ್ಚಿ ಬಿದ್ದಿದ್ದಾರೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 8 ಅಡಿ ಎತ್ತರದ ಗೋಡೆ ಹಾರಿ ಟುವೋ ಅವರನ್ನು ಮೊಸಳೆ ತಿಂದಿದೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಾಗಿ ಮೊಸಳೆಯನ್ನು ಒಯ್ಯಲಾಗಿದೆ. ಒಟ್ಟಾರೆ 3 ಗಂಟೆಗಳ ಕಾರ್ಯಾಚರಣೆ ಬಳಿಕ ದೈತ್ಯ ಮೊಸಳೆಯನ್ನು ಪೊಲೀಸರು ಸೆರೆ ಹಿಡಿಡಿದಿದ್ದಾರೆ.

ಇಂಡೋನೇಷ್ಯಾದಲ್ಲಿ ಮೊಸಳೆಗಳ ಗಾತ್ರ ತುಂಬಾ ದೊಡ್ಡದಾಗಿರುತ್ತದೆ. ಇನ್ನ 2016ರಲ್ಲಿ ರಷ್ಯಾದ ಪ್ರವಾಸಿಗನೊಬ್ಬ ಇಂಡೋನೇಷ್ಯಾದ ಮೊಸಳೆಗೆ ಬಲಿಯಾಗಿದ್ದು ಈ ಘಟನೆ ವಿಶ್ವದಾದ್ಯಂತ ಸುದ್ದಿಯಾಗಿತ್ತು.

LEAVE A REPLY

Please enter your comment!
Please enter your name here