Home Crime 9 ತಿಂಗಳು ಹೊತ್ತು ಹೆತ್ತ ತಾಯಿಯ ಕರುಳ ಬಳ್ಳಿಯನ್ನ 20 ದಿನಗಳಲ್ಲಿ ಕಿವಿಚಿ ಹಾಕಿದ ತಂದೆ..!?...

9 ತಿಂಗಳು ಹೊತ್ತು ಹೆತ್ತ ತಾಯಿಯ ಕರುಳ ಬಳ್ಳಿಯನ್ನ 20 ದಿನಗಳಲ್ಲಿ ಕಿವಿಚಿ ಹಾಕಿದ ತಂದೆ..!? ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಹೆಂಡತಿಗೆ ಕಿರುಕುಳ.?!

800
0
SHARE

ಅದು ಆಗ ತಾನೆ ಪ್ರಪಂಚ ನೋಡಲು ಕಣ್ಣುಬಿಟ್ಟಿದ್ದ ಹಸುಗೂಸು. ಆ ಪುಟ್ಟ ಕಂದಮ್ಮ ಭೂಮಿಗೆ ಕಾಲಿರಿಸಿ ಕೇವಲ 20 ದಿನಗಳಾಗಿತ್ತು. ಆ ಹಸುಳೆಯ ಭವಿಷ್ಯ ರೂಪಿಸಬೇಕಾದ ತಂದೆಯೇ ಆ ಮುಗ್ಧ ಮಗುವನ್ನ ಕ್ರೂರವಾಗಿ ಕೊಂದು ಬಿಟ್ಟಿದ್ದ.. 9 ತಿಂಗಳು ಜೋಪಾನವಾಗಿ ಹೊತ್ತು ಹೆತ್ತ ತಾಯಿಯ ಕರುಳ ಬಳ್ಳಿಯನ್ನ ಇಪ್ಪತ್ತೇ ದಿನಗಳಲ್ಲಿ ತಂದೆ ಕಿವಿಚಿ ಹಾಕಿದ್ದಾನೆ.

ಇಲ್ಲೊಬ್ಬ, ತಂದೆ ಮಗಳ ಬಂಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾನೆ. ಕೇವಲ ಹೆಣ್ಣು ಮಗು ಅನ್ನೋ ಕಾರಣಕ್ಕೆ, ತನ್ನ ಪುಟ್ಟ ಕಂದಮ್ಮಳನ್ನ ಕೊಂದು ಬಿಸಾಕಿದ್ದಾನೆ. ಈಕೆಯ ಹೆಸ್ರು ಬುಲೆ ಅಂತ. ಮೂಲತಃ ನೇಪಾಳದ ಈಕೆ ವರ್ಷದ ಹಿಂದೆ ಗೋಕುಲ್ ಅನ್ನೋನನ್ನ ಮದುವೆಯಾಗಿದ್ಲು. ಮದುವೆಯಾಗಿ 11 ತಿಂಗಳಿಗೆ ಈತನಿಗೆ ಒಂದು ಹೆಣ್ಣುಮಗು ಜನನವಾಯ್ತು..

ಹೆಣ್ಣು ಮಗು ಬೇಡ ಅಂತಿದ್ದ ಈತನಿಗೆ ಕಳೆದ 20 ದಿನಗಳ ಹಿಂದೆ ಹೆಣ್ಣುಮಗುವೇ ಹುಟ್ಟಿತ್ತು.. ಆದ್ರೆ, ಈ ಗೋಕುಲನಿಗೆ ತಂದೆಯಾಗಿ ಹೆಣ್ಣುಮಗುವನ್ನ ಒಪ್ಪಿಕೊಳ್ಳಲಾಗ್ತಿರ್ಲಿಲ್ಲ.. ಹೀಗಾಗಿ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಹೆಂಡ್ತಿಗೆ ಮಾನಸಿಕವಾಗಿ ಹಿಂಸೆ ಕೊಡ್ತಿದ್ದ.. ನಿನ್ನೆ ರಾತ್ರಿ ಕುಡಿದು ಮನೆಗೆ ಬಂದಿದ್ದ ಗೋಕುಲ್, ಪತ್ನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದ..

ಆಕೆಯ ಕಿರುಚಾಟದಿಂದ ಮಗು ಎದ್ದಿದ್ದಕ್ಕೆ ಮಗುವಿಗೂ ನಾಲ್ಕು ಭಾರಿಸಿ ಎತ್ತಿ ಗೋಡೆಗೆ ಅಪ್ಪಳಿಸಿ ಕೊಂದಿದ್ದಾನೆ.ಮಗುವಿನ ತಾಯಿ ಬುಲೆಗೆ ಮಗುವನ್ನು ಅಪ್ಪಳಿಸಿದ ರೀತಿಗೆ ಪ್ರಾಣವೇ ಹೋಗುವಂತಾಗಿತ್ತು. ತನ್ನ ಮಗು ಉಸಿರಾಡ್ತಿಲ್ಲ ಅಂತ ಗೊತ್ತಾಗಿದ್ದೇ ತಡ, ಜೀವ ಬಾಯಿಗೆ ಬಂದಂತ್ತು.

ಕೆಲವೇ ಕ್ಷಣಗಳಲ್ಲಿ ಆಕೆಯ ಅರಚಾಟ ಕಿರುಚಾಟ ಕೇಳಿ ಸುತ್ತ-ಮುತ್ತಲ ನಿವಾಸಿಗಳು ಬಂದಿದ್ದಾರೆ. ಇತ್ತ ಹೆತ್ತ ಮಗುವನ್ನ ಕೊಂದು ಏನೂ ಆಗೇ ಇಲ್ಲ ಅನ್ನೋ ಹಾಗೆ ಕಣ್ಣು ಕೆಂಪಗೆ ಮಾಡ್ಕೊಂಡು ನಿಂತಿದ್ದ ಪಾಪಿ ಗೋಕುಲ್ನನ್ನ ಹಿಡಿದ ಜನ ಬಾಣಸವಾಡಿ ಪೊಲೀಸ್ರಿಗೆ ಒಪ್ಪಿಸಿದ್ದಾರೆ.ಸದ್ಯ ಈ ಪಾಪಿ ತಂದೆ ಪೊಲೀಸರ ಅತಿಥಿಯಾಗಿದ್ರೂ.

ಆ ಕರುಳ ಬಳ್ಳಿಯನ್ನ ತಬ್ಬಿ ಕಣ್ಣೀರಿಡುತ್ತಿರುವ ತಾಯಿಗೆ ಆದ್ಯಾಕೀ ಶಿಕ್ಷೇ ಸಿಕ್ಕಿದೆಯೋ ನಿಜಕ್ಕೂ ಗೊತ್ತಿಲ್ಲ.. ಆದ್ರೆ ಒಂದಂತೂ ಸತ್ಯ ಪಾಪಿ ತಂದೆಯ ಕೃತ್ಯವನ್ನ ಆದ್ಯಾವ ದೇವರೂ ಸಹ ಕ್ಷಮಿಸೋದೆ ಇಲ್ಲ..

LEAVE A REPLY

Please enter your comment!
Please enter your name here