90 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್ಡ್ವರ್ಕ್ ಜನನ..! ಇಲ್ಲಿದೆ ನೋಡಿ ಪೋಟೋಗಳು

ಅಂತರಾಷ್ಟ್ರೀಯ

ಯುಕೆಯಲ್ಲಿರುವ ಚೆಸ್ಟರ್ ಮೃಗಾಲಯವು ಅಪರೂಪದ ಮರಿ ಪ್ರಾಣಿಯನ್ನು ತಮ್ಮ ಮೃಗಾಲಯದ ಕುಟುಂಬಕ್ಕೆ ಸ್ವಾಗತಿಸಿದೆ. ಸದ್ಯ ಈ ಪುಟ್ಟ ಆರ್ಡ್‌ವರ್ಕ್ ಮರಿಗೆ ಡೊಬಿ ಎಂದು ಹೆಸರಿಡಲಾಗಿದೆ. ಡೊಬಿ ಜನವರಿ 4 ರಂದು ಜನಿಸಿದ ಹೆಣ್ಣು ಆರ್ಡ್‌ವರ್ಕ್ ಆಗಿದೆ. ದೊಡ್ಡ ಕಿವಿಗಳು, ಕೂದಲುರಹಿತ ಸುಕ್ಕುಗಟ್ಟಿದ ಚರ್ಮ ಮತ್ತು ದೈತ್ಯ ಉಗುರುಗಳೊಂದಿಗೆ ಜನಿಸಿದ ಈ ಆರ್ಡ್​ವರ್ಕ್​ ಮರಿ ಆಫ್ರಿಕಾ ಮೂಲದ ಸಸ್ತನಿಯಾಗಿದೆ. ಇದರ ಮೂತಿ ನೋಡಿದರೆ ಹಂದಿ ಮರಿಯಂತೆ ಕಾಣುತ್ತದೆ. ಆದರೆ ಇದರ ದೇಹ ರಚನೆಯು ಕಾಂಗರೂವಿನಂತೆ ಇದೆ.

ಚೆಸ್ಟರ್ ಮೃಗಾಲಯ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಡೊಬಿಯ ಜನನಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿ ಕೊಂಡಿವೆ. ಈ ವಿಶಿಷ್ಟ ಪ್ರಾಣಿಯು ತನ್ನ 8 ವರ್ಷದ ತಾಯಿ ಓಣಿ ಮತ್ತು 6 ವರ್ಷದ ತಂದೆ ಕಾಸ್‌ಗೆ ಜನಿಸಿದೆ. ಹ್ಯಾರಿ ಪಾಟರ್ ಸರಣಿಯ ಯಕ್ಷಿಣಿಯೊಂದಿಗೆ ವಿಲಕ್ಷಣವಾದ ಹೋಲಿಕೆಯನ್ನು ಹೊಂದಿದೆ. ಹೀಗಾಗಿ ಮೃಗಾಲಯ ಸಿಬ್ಬಂದಿಗಳು ನವಜಾತ ಆರ್ಡ್‌ವರ್ಕ್​ಗೆ ಡೊಬಿ ಎಂದು ಅಡ್ಡಹೆಸರು ನೀಡಿದ್ದಾರೆ.

Leave a Reply

Your email address will not be published.