ಹದಗೆಟ್ಟ ರಸ್ತೆಯಿಂದ ಬಾಲಕ ಬಲಿ: ಹಿಂಬದಿಯಿಂದ ಬಂದ ಸೇನಾ ವಾಹನ ಹರಿದು ಸಾವು

ಅಪರಾಧ ಬೆಂಗಳೂರು

ಬೆಂಗಳೂರು: ಹದಗೆಟ್ಟ ರಸ್ತೆಯಿಂದ ಹೆಡ್ ಕಾನ್ ಸ್ಟೇಬಲ್ ಪುತ್ರನೋರ್ವ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕೆ.ಆರ್ .ಪುರದಲ್ಲಿ ನಡೆದಿದೆ. ತಂದೆ ಸಂತೋಷ್ ಅವರ ಜೊತೆ ಬೈಕ್ನಲ್ಲಿ ಹೋಗುತ್ತಿದ್ದ ಬಾಲಕ ಜೀವನ್ ಮೃತ ದುರ್ದೈವಿ. ಮೃತ ಬಾಲಕನ ತಂದೆ ಸಂತೋಷ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿದ್ದು, ಈ ಹಿಂದೆ ಕೆ.ಆರ್.ಪುರ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ವಾರದ ಹಿಂದಷ್ಟೇ ಅವರಿಗೆ ಬೇರೆ ಠಾಣೆಗೆ ವರ್ಗ ಆಗಿತ್ತು.

ಸಂತೋಷ್ ಅವರು ಗುರುವಾರ ಸಂಜೆ ಮಗನ ಜೊತೆ ಬೈಕ್ನಲ್ಲಿ ಕೆ.ಆರ್.ಪುರದ ಮಾರ್ಕೆಟ್ಗೆ ಹೋಗುತ್ತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಹಿಂಬದಿ ಕುಳಿತ್ತಿದ್ದ ಬಾಲಕ ಜೀವನ್ ಆಯಾ ತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಬಾಲಕನ ರಸ್ತೆಗೆ ಬೀಳುತ್ತಿದ್ದಂತೆ ಹಿಂದೆಯಿಂದ ಬಂದ ಭಾರತೀಯ ಸೇನೆಗೆ ಸೇರಿದ ವಾಹನದ ಹಿಂಬದಿ ಚಕ್ರವು ಬಾಲಕನ ಮೇಲೆ ಹರಿದಿದೆ. ಇದರಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಬಾಲಕನ ಮೃತದೇಹವನ್ನು ಕೆ.ಆರ್.ಪುರ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.