ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ADGP ಅರೆಸ್ಟ್..! ಅಮೃತ್ ಪೌಲ್ ಆಫೀಸ್ ನಲ್ಲೇ OMR ಶೀಟ್ ತಿದ್ದುಪಡಿ

ಬೆಂಗಳೂರು

ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ADGP ದರ್ಜೆಯ ಅಧಿಕಾರಿ ಅಮೃತ್ ಪೌಲ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅಮೃತ್ ಪೌಲ್ ಅವರ ಆಫೀಸ್ ನಲ್ಲೇ OMR ಶೀಟ್ ತಿದ್ದುಪಡಿ ಮಾಡಿದ್ದು, ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ಸಿಐಡಿ ಅಧಿಕಾರಿಗಳು ಅಮೃತ್ ಪೌಲ್ ಅವರನ್ನು ಇಂದು ವಿಚಾರ

ಈ ಪರೀಕ್ಷೆಯಲ್ಲಿ ಅಮೃತ್ ಪೌಲ್ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಜೊತೆಗೆ ಅಮೃತ್ ಪೌಲ್ ಪರವಾಗಿ DySP ಶಾಂತಕುಮಾರ್ ಹಣ ವಸೂಲಿ ಆರೋಪವೂ ಕೇಳಿ ಬಂದಿತ್ತು. ಈಗಾಗ್ಲೇ, DySP ಶಾಂತಕುಮಾರ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಶಾಂತಕುಮಾರ್ ನೀಡಿದ ಮಾಹಿತಿ ಮೇರೆಗೆ ಅಮೃತ್ ಪೌಲ್ ರನ್ನು ಅರೆಸ್ಟ್ ಮಾಡಲಾಗಿದೆ. ಅಮೃತ್ ಪೌಲ್ 25 ಅಭ್ಯರ್ಥಿಗಳಿಂದ ತಲಾ 30 ಲಕ್ಷ ರೂ ಪಡೆದಿದ್ದರು,

ಈ ಹಣವನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಸೀಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಅಮೃತ್ ಪೌಲ್ ಆಫೀಸ್​​ನಲ್ಲೇ OMR ಶೀಟ್ ತಿದ್ದುಪಡಿ ನಡೆದಿತ್ತು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ನೇಮಕಾತಿ ವಿಭಾಗದ ಹಲವರನ್ನ ಈಗಾಗ್ಲೇ ಬಂಧಿಸಿರೋ ಸಿಐಡಿ ಆರೋಪಿಗಳ ಹೇಳಿಕೆ ಆಧರಿಸಿ ಅಮೃತ್ ಪೌಲ್ ಬಂಧಿಸಿದೆ. ಅಮೃತ್ ಪೌಲ್ ಅವರು DySP ಶಾಂತಕುಮಾರ್ ಮೂಲಕ ಡೀಲ್ ಮಾಡಿಸಿದ್ದು ಸಾಬೀತಾಗಿದೆ.

Leave a Reply

Your email address will not be published.