ಕೇಕ್ ನಲ್ಲಿ ತನ್ನ ಗಂಡನ ವೀರ್ಯ ಬೆರೆಸಿ ಮಕ್ಕಳಿಗೆ ತಿನ್ನಲು ನೀಡಿದ ಶಿಕ್ಷಕಿ

ಅಂತರಾಷ್ಟ್ರೀಯ

ವಾಷಿಂಗ್ಟನ್: ಪತಿಯ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಟೀಚರ್‌ಗೆ ಕೋರ್ಟ್ 40 ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿದೆ. ಸಿಂಥಿಯಾ ಪಾರ್ಕಿನ್ಸ್(36) ಶಿಕ್ಷೆಗೊಳಗಾದ ಶಿಕ್ಷಕಿಯಾಗಿದ್ದಾಳೆ. ಈಕೆ ಅಮೆರಿಕದ ಲೂಸಿಯಾನಾದ ವೆಸ್ಟ್ ಸೈಡ್ ಜೂನಿಯರ್ ಹೈಸ್ಕೂಲಿನ ಶಿಕ್ಷಕಿಯಾಗಿದ್ದಳು. ಈಕೆ ಮೊದಲಿ ನಿಂದಲು ತನ್ನ ವಿದ್ಯಾರ್ಥಿಗಳನ್ನು ಅಶ್ಲೀಲ ವೀಡಿಯೋ ಮಾಡಲು ಬಳಸಿಕೊ ಳ್ಳುತ್ತಿದ್ದಳು. ನಂತರ ಕೇಕ್ ರೆಡಿ ಮಾಡಿ ಮಕ್ಕಳಿಗೆ ತಿನ್ನಸುತ್ತಿದ್ದಳು. ಕೇಕ್‍ನಲ್ಲಿ  ಗಂಡನ ವೀರ್ಯವನ್ನು ಬೆರೆಸುತ್ತಿದ್ದಳು ಎನ್ನುವ ವಿಷಗಳ ಬೆಳಕಿಗೆ ಬಂದಿದೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಹಲವರು ಪಾಲಕರು ಶಿಕ್ಷಕಿ ವಿರುದ್ಧವಾಗಿ ದೂರು ದಾಖಲು ಮಾಡಿದ್ದಾರೆ. ತನಿಖೆಯ ವೇಳೆ ಎಲ್ಲಾ ಆರೋಪಗಳು ಸಾಬೀತಾಗಿವೆ. ಈಕೆಗೆ ಸಹಾಯ ಮಾಡುತ್ತಿದ್ದ ಈಕೆ ಪತಿಯ ಡೆನ್ನಿಸ್ ವಿರುದ್ಧ ಪ್ರಕರಣ ದಾಖಲಾಗಿದೆ. 2019ರಲ್ಲಿ ಶಿಕ್ಷಕಿಯನ್ನು ಅಶ್ಲೀಲ ವೀಡಿಯೋಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಳು. ಈಕೆಯ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ ಕೇಕ್ ವಿಷಯ ಹೊರಕ್ಕೆ ಬಂದಿದೆ. ಕಪ್ ಕೇಕ್ ತಯಾರಿಸಿ ಅದರಲ್ಲಿ ವೀರ್ಯ ಬೆರೆಸಿ ವಿಕೃತಿ ಮೆರೆದಿ ರುವುದು ತಿಳಿದಿದೆ. ಶಿಕ್ಷಕಿಯನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಈಕೆ ವಿರುದ್ಧ 90 ದೋಷಾರೋಪದ ಪಟ್ಟಿಗಳನ್ನು ಸಲ್ಲಿಸಲಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 40 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.

Leave a Reply

Your email address will not be published.