ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ವೈರಲ್‌ ಫೀವರ್: ಕ್ಲ್ಯಾರಿಟಿ ಕೊಟ್ಟ ಜಾಕ್ ಮಂಜು

ಬೆಂಗಳೂರು

ಕಿಚ್ಚ ಸುದೀಪ್ ಅವರಿಗೆ ಎರಡನೇ ಬಾರಿ ಕೋವಿಡ್ ಸೋಂಕು ತಗುಲಿದೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ನೆಚ್ಚಿನ ನಟನಿಗೆ ಮತ್ತೆ ಕೋರೋನಾ ಬಾಧಿಸಿತಾ ಎಂದು ಅಭಿಮಾನಿಗಳು ಆತಂದಲ್ಲಿದ್ದರು. ಆದಷ್ಟು ಬೇಗ ಸುದೀಪ್ ಗುಣಮುಖರಾಗಲಿ ಎಂದು ಹಾರೈಕೆಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಸುದೀಪ್ ಜ್ವರದಿಂದ ಬಳಲುತ್ತಿರುವುದು ನಿಜ. ಆದರೆ, ಕೋವಿಡ್ ಪಾಸಿಟಿವ್ ಆಗಿಲ್ಲ ಎಂದು ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಜಾಕ್ ಮಂಜು, ‘ಸುದೀಪ್ ಅವರು ಜ್ವರದಿಂದ ಬಳಲುತ್ತಿರುವುದು ನಿಜ. ಆದರೆ, ಕೋವಿಡ್ ಪಾಸಿಟಿವ್ ಆಗಿಲ್ಲ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಗದಿತ ದಿನಾಂಕಗಳಂದು ಅವರು ಮತ್ತೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಜುಲೈ 23 ರಿಂದ ಅವರು ಅನೇಕ ಊರುಗಳಿಗೆ ಪ್ರಚಾರಕ್ಕಾಗಿ ತೆರಳಲಿದ್ದಾರೆ ಎಂದು ಮಂಜು ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸುದೀಪ್ ನಟನೆಯ ವಿಕ್ರಾಂತ್ ರೋಣ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಬಿಡುವಿಲ್ಲದ ಪ್ರಚಾರದ ಕೆಲಸಗಳಲ್ಲಿ ಕಿಚ್ಚ ತೊಡಗಿಕೊಂಡಿದ್ದಾರೆ. ಈ ನಡುವೆ ಬಿಗ್ ಬಾಸ್ ಸೀಸನ್ 9ರ ಪ್ರೊಮೋ ಶೂಟಿಂಗ್ ನಲ್ಲೂ ಅವರು ಮೊನ್ನೆಯಷ್ಟೇ ಭಾಗಿಯಾಗಿದ್ದರು. ಇನ್ನೇನು ಮುಂದಿನ ವಾರ ಸಿನಿಮಾ ರಿಲೀಸ್ ಆಗಬೇಕು ಅಷ್ಟರಲ್ಲಿ ಕೋವಿಡ್ ಸೋಂಕು ಎಂದು ಸುದ್ದಿಯಾಗಿ ಅಭಿಮಾನಿಗಳು ಆತಂಕ್ಕೀಡಾಗಿದ್ದರು.

Leave a Reply

Your email address will not be published.