ACB ಮತ್ತು EDಗೆ ನಾನು & ಡಿ.ಕೆ ಶಿವಕುಮಾರ್ ಮಾತ್ರ ಕಾಣೋದು: ಶಾಸಕ ಜಮೀರ್

ಬೆಂಗಳೂರು

ಬೆಂಗಳೂರು: ಎಸಿಬಿ, ಇಡಿಗೆ ನಾನು & ಡಿಕೆಶಿ ಸಾಹೇಬ್ರು ಮಾತ್ರ ಕಾಣೋದು ಎಂದು ಶಾಸಕ ಜಮೀರ್ ಹೇಳಿದ್ದಾರೆ. ಎಸಿಬಿ ವಿಚಾರಣೆ ಬಳಿಕ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮನ್ಸ್ ಮುಖಾಂತರ ಎಸಿಬಿ ಅಧಿಕಾರಿಗಳು ದಾಖಲೆಗಳು ಕೇಳಿದ್ದರು. ದಾಖಲೆಗಳನ್ನ ಸಲ್ಲಿಕೆ ಮಾಡಿದ್ದೇನೆ ಎಂದಿದ್ದಾರೆ. ಮನೆ ನಿರ್ಮಾಣ ಸಂಬಂಧ ದಾಖಲೆಗಳನ್ನ ಕೊಟ್ಟಿದ್ದೇನೆ. ಬಿಜೆಪಿ ಸರ್ಕಾರ ಇರುವ ಕಡೆ ಕಾಂಗ್ರೆಸ್ ನಾಯಕರಿಗೆ ಹೀಗೆ ತೊಂದರೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಾನು ಮತ್ತು ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್​ ಅವರನ್ನೇ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಶಾಸಕ ಜಮೀರ್​ ಅಹ್ಮದ್​ ಖಾನ್ ಆರೋಪಿಸಿದರು.  ಅಧಿಕಾರಿಗಳು ಏನೇನು ಕೇಳಿದ್ದಾರೋ ಅದೆಲ್ಲವನ್ನೂ ಕೊಟ್ಟಿದ್ದೇನೆ. ದೇಶದಲ್ಲಿ ಇವತ್ತು ಬಿಜೆಪಿ ಯವರು ಯಾರು ಮನೆ ಕಟ್ಟಿಲ್ಲ, ಆಸ್ತಿ ಮಾಡಿಲ್ಲ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂದೆನಿಸುತ್ತದೆ

Leave a Reply

Your email address will not be published.