ACB ದಾಳಿ; ಶಾಸಕ ಜಮೀರ್ ಅಹ್ಮದ್ ಗೆ ಮುಳುವಾಯ್ತಾ ಭವ್ಯ ಬಂಗಲೆ..?

ಬೆಂಗಳೂರು

ಬೆಂಗಳೂರು : ಬೆಳ್ಳಂಬೆಳಗ್ಗೆ ಶಾಸಕ ಜಮೀರ್​ ಅಹ್ಮದ್ ಖಾನ್​​​ ಮೇಲೆ ACB ದಾಳಿ ನಡೆಸುತ್ತಿದ್ದು, ಎಸಿಬಿ ಅಧಿಕಾರಿಗಳು ಜಮೀರ್​​ ಬಂಗಲೆಯ ದಾಖಲೆ ಪರಿಶೀಲಿಸುತ್ತಿದ್ದಾರೆ. ಬಂಗಲೆಯನ್ನ ಅಂದಾಜು 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 20 ಗುಂಟೆ ವಿಸ್ತೀರ್ಣದ ಜಾಗವಾಗಿದ್ದು, 10 ಗುಂಟೆಯಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. 10 ಗುಂಟೆಯಲ್ಲಿ ಗಾರ್ಡನ್ ನಿರ್ಮಾಣ ಮಾಡಲಾಗಿದೆ.

20 ಗುಂಟೆ ಜಾಗದ ಮೌಲ್ಯವೇ 15 ಕೋಟಿ ರೂಪಾಯಿಯಿದೆ. ಮನೆ ನಿರ್ಮಾಣಕ್ಕೆ ಶ್ವೇತ ಶಿಲೆಯ ಗ್ರಾನೈಟ್​ ಬಳಕೆ ಮಾಡಲಾಗಿದ್ದು, ಜಮೀರ್​​ ಅರೇಬಿಕ್ ಶೈಲಿಯಲ್ಲಿ ಮನೆ ನಿರ್ಮಿಸಿದ್ಧಾರೆ. ಇಟಾಲಿಯನ್ ಮಾರ್ಬಲ್ಸ್ ಮೌಲ್ಯವೇ 5 ಕೋಟಿಯಾಗಿದೆ. ಸ್ಯಾಂಡ್ ವಿಚ್ ಗ್ಲಾಸ್​ಗಳನ್ನು ಬಳಕೆ ಮಾಡಿ ಮನೆ ನಿರ್ಮಾಣ ಮಾಡಲಾಗಿದೆ. ಟೀಕ್ ವುಡ್ ಬಳಸಿ ಕಿಟಕಿ ಮತ್ತು ಬಾಗಿಲುಗಳ ನಿರ್ಮಾಣ ಮಾಡಲಾಗಿದೆ.

Leave a Reply

Your email address will not be published.