ACB ಕಾರ್ಯವೈಖರಿಗೆ ಹೈಕೋರ್ಟ್ ಜಡ್ಜ್ ಕ್ಲಾಸ್: ಬಿ ರಿಪೋರ್ಟ್ ಅಪೂರ್ಣ ಮಾಹಿತಿಗೆ ತರಾಟೆ

ಬೆಂಗಳೂರು

ಬೆಂಗಳೂರು: ಎಸಿಬಿಗೆ ತನಿಖೆಯ ಎಬಿಸಿ ಗೊತ್ತಿಲ್ಲವೇ ಎಂದು ಎಸಿಬಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ತನಿಖೆಯಲ್ಲಿ ನಿಯಮಗಳನ್ನು ಪಾಲನೆ ಮಾಡದೆ ಲೋಪವೆಸಗಿದ್ದ ಭ್ರಷ್ಟಾಚಾರ ನಿಗ್ರಹ ದಳಗೆ ತನಿಖೆಯ ಎಬಿಸಿ ಗೊತ್ತಿಲ್ಲವೇ ಎಂದು ಹೈಕೋರ್ಟ ತಪರಾಕಿ ಹಾಕಿದೆ. ತನಿಖೆಯಲ್ಲಿ ಕನಿಷ್ಠ ನಿಯಮಗಳನ್ನು ಪಾಲನೆ ಮಾಡದೆ.

ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂತಹ ಲೋಪಗಳನ್ನು ನೋಡಿ ಕಣ್ಮುಚ್ಚಿ ಕೂರಲಾಗುವುದಿಲ್ಲ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕೆಪಿಟಿಸಿಎಲ್ ಇಇ ಕುಮಾರ್ ನಾಯ್ಕ್ ವಿರುದ್ಧದ ಆದಾಯ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ, ಎಸಿಬಿ ತನಿಖಾ ವೈಖರಿಯನ್ನು ಕಟುವಾಗಿ ಟೀಕಿಸಿದೆ.

Leave a Reply

Your email address will not be published.