
ಬಿಡಿಎ ಆಯ್ತು ಈಗ ಬಿಬಿಎಂಪಿ ಭ್ರಷ್ಟರಿಗೆ ಎಸಿಬಿ ಖೆಡ್ಡಾ: ಏಕಕಾಲಕ್ಕೆ ವಿವಿಧ ಕಚೇರಿಗಳ ಮೇಲೆ 200 ಸಿಬ್ಬಂದಿ ತಂಡ ದಾಳಿ
ಬೆಂಗಳೂರು: ಬಿಡಿಎ ನಲ್ಲಿ ವ್ಯಾಪಕ ಅಕ್ರಮ-ಭ್ರಷ್ಟಾಚಾರ ಬಯಲಿಗೆಳೆದ ಮೇಲೆ ಎಸಿಬಿ ದೃಷ್ಟಿಇದೀಗ ಬಿಬಿಎಂಪಿ ಮೇಲೆ ನೆಟ್ಟಂತಿದೆ. ಈ ಹಿನ್ನಲೆಯಲ್ಲಿಯೇ ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲೂ ಎಸಿಬಿ ವಿವಿಧ ತಂಡಗಳಾಗಿ ದಾಳಿ ಮಾಡಿದೆ.ದಾಳಿ ವೇಳೆ ಬಿಬಿಎಂಪಿಯ ಅನೇಕ ವಿಭಾಗಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದನ್ನು ಪುಷ್ಟೀಕರಿಸುವ ಸಾಕಷ್ಟು ಪುರಾವೆಗಳು ದೊರೆತಿದೆ.ದಾಳಿಗೆ ಬೆಚ್ಚಿಬಿದ್ದಿರುವ ಭ್ರಷ್ಟರು ವಿಲವಿಲ ಒದ್ದಾಡುವಂತಾಗಿತ್ತು.
ಬಿಬಿಎಂಪಿಗೆ ಬೃಹತ್ ಭ್ರಷ್ಟಾಚಾರ ಪಾಲಿಕೆ ಎನ್ನೋ ಅಪಖ್ಯಾತಿಯಿದೆ.ಇದಕ್ಕೆ ಕಾರಣ ಅಲ್ಲಿರುವ ಹಗರಣಗಳು ಹಾಗೂ ಅದಕ್ಕೆ ಕಾರಣವಾಗಿರುವ ಭ್ರಷ್ಟ ಅಧಿಕಾರಿ-ಸಿಬ್ಬಂದಿಯ ಕೂಟ.ಹಿಂದೆ ಅನೇಕ ಬಾರಿ ಸಣ್ಣಪುಟ್ಟ ಪ್ರಮಾಣದಲ್ಲಿ ಎಸಿಬಿ ರೇಡ್ ಗಳಾಗಿದ್ವು ಆದರೆ ಫಸ್ಟ್ ಟೈಮ್ ಇನ್ ಬಿಬಿಎಂಪಿ ಹಿಸ್ಟರಿ 200 ಅಧಿಕಾರಿ ಸಿಬ್ಬಂದಿಯ ತಂಡ ಏಕಕಾಲಕ್ಕೆ ದಾಳಿ ನಡೆಸಿ ತಬ್ಬಿಬ್ಬುಗೊಳಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ 8 ವಲಯಗಳ 198 ವಾರ್ಡ್ ಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ.ಅಧಿಕಾರಿ ಸಿಬ್ಬಂದಿ ಎನ್ನೋರು ಸಾರ್ವಜನಿಕರನ್ನು ಕಿತ್ತು ತಿನ್ನುತ್ತಿದ್ದಾರೆ ಎನ್ನುವ ದಂಡಿ ಆರೋಪಗಳು ಎಸಿಬಿಗೆ ಬಂದಿದ್ವು.ಅದರ ಅನ್ವಯ ಕಾಲ ಪರಿಪಕ್ವವಾಗೊಕ್ಕೆ ಕಾಯುತ್ತಿದ್ದ ಎಸಿಬಿ ಇಂದು ಅದಕ್ಕೆ ಮುಹೂರ್ತವನ್ನೇ ಫಿಕ್ಸ್ ಮಾಡಿತ್ತೆನಿಸುತ್ತದೆ.200 ಸಿಬ್ಬಂದಿ ತಂಡ ಏಕಾಏಕಿ 27 ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ಹಾಗು ತಪಾಸಣೆ ನಡೆಸಿತು.
ಟೌನ್ ಪ್ಲ್ಯಾನಿಂಗ್,ರೆವಿನ್ಯೂ..ಹೆಲ್ತ್..ಟಿಡಿಆರ್ ನೀಡುವಂಥ ವಿಭಾಗಗಳೇ ಎಸಿಬಿ ದಾಳಿಗೆ ಟಾರ್ಗೆಟ್ ಆಗಿತ್ತೆನಿಸುತ್ತದೆ.ಹಾಗಾಗಿಯೇ ತಂಡಗಳು ಮೊದಲು ಈ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ವು.ಅನೇಕ ಕಡತಗಳನ್ನು ವಶಕ್ಕೆ ತೆಗೆದುಕೊಂಡ್ವು.ಅವುಗಳನ್ನೆಲ್ಲಾ ಕೊಂಡೊಯ್ದು ಪರಿಶೀಲನೆ ನಡೆಸುವ ಕೆಲಸವನ್ನು ಎಸಿಬಿ ಮಾಡಲಿದೆ.
ಬಿಬಿಎಂಪಿ ಇತಿಹಾಸದಲ್ಲೇ ಇಂತಹದೊಂದು ಬೃಹತ್ ಎಸಿಬಿ ರೇಡ್ ನಡೆದಿಲ್ಲ.ದಾಳಿ ವೇಳೆ ಸಿಕ್ಕ ಅಕ್ರಮದ ಸಾಕಷ್ಟು ದಾಖಲೆಗಳ ಮೇಲೆ ಎಸಿಬಿ ತನಿಖೆ ನಡೆಸಲಿದೆ.ಈ ಬಗ್ಗೆ ವರದಿ ನೀಡಲಿದೆ.ದಾಳಿ ನಾಳೆಯೂ ಮುಂದುವರೆಯಲಿದೆ ಎಂದು ಹೇಳಲಾಗ್ತಿದೆ.